Headlines

ಮಕ್ಕಳ ಸರಣಿ ಸಾವು ಹಿನ್ನೆಲೆ ರಾಜ್ಯಾದ್ಯಂತ `ಕಾಫ್ ಸಿರಪ್’ ಟೆಸ್ಟ್ ಗೆ ಮುಂದಾದ ಆರೋಗ್ಯ ಇಲಾಖೆ

ಬೆಂಗಳೂರು : ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸರಣಿ ಸಾವು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಎಲ್ಲಾ ಬ್ರ್ಯಾಂಡ್ ಕಾಫ್ ಸಿರಪ್ ಗಳ ಸ್ಯಾಂಪಲ್ಸ್ ಸಂಗ್ರಹಕ್ಕೆ ಮುಂದಾಗಿದೆ. ಹೌದು, ರಾಜ್ಯ ಆರೋಗ್ಯ ಇಲಾಖೆಯು ರಾಜ್ಯಕ್ಕೆ ಸರಬರಾಜು ಆಗುತ್ತಿರುವ ಕಾಫ್ ಸಿರಪ್ ಗಳನ್ನು ಟೆಸ್ ಮಾಡಲು ನಿರ್ಧರಿಸಿದೆ. ಔಷಧ ನಿಯಂತ್ರಣ ಹಾಗೂ ಸರಬರಾಜು ಇಲಾಖೆ ಕಾಫ್ ಸಿರಪ್ ಗಳ ಟೆಸ್ಟ್ ಮಾಡಲು ಮುಂದಾಗಿದ್ದು, ರಾಜ್ಯದ ಎಲ್ಲೆಡೆ ಕಾಫ್ ಸಿರಪ್ ಗಳ…

Read More

ಉಡುಪಿ : AKMS ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣ- ಮಹಿಳೆಯ ಬಂಧನ

ಉಡುಪಿ : ಖಾಸಗಿ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇದೀಗ ಕೊಲೆಗೆ ಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾದ ನಾಲ್ಕನೇ ಆರೋಪಿ ಉಡುಪಿ ಮಿಷನ್ ಕಾಂಪೌಂಡ್ ನಿವಾಸಿ ರಿಧಾ ಶಭನಾ (27) ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೈಫುದ್ದೀನ್ ಕೊಲೆ ಪ್ರಕರಣ ಸಂಬಂಧ ಉಡುಪಿ ಮಿಷನ್ ಕಾಂಪೌಂಡ್ ನಿವಾಸಿ ಮಹಮದ್‌ ಫೈಸಲ್ ಖಾನ್ (27), ಕರಂಬಳ್ಳಿ ನಿವಾಸಿ ಮೊಹಮ್ಮದ್ ಶರೀಫ್ (37) ಮತ್ತು ಮಂಗಳೂರು ಕಾಟಿಪಳ್ಳ ನಿವಾಸಿ ಅಬ್ದುಲ್‌ ಶುಕುರ್…

Read More

ಯುವ ಯಕ್ಷಗಾನ ಕಲಾವಿದ ಆತ್ಮಹತ್ಯೆ..!!

ಯಕ್ಷಗಾನ ಕಲಾವಿದ ಕಾಲ್ತೋಡು ಗ್ರಾಮದ ಬಲಗೋಣ ನಿವಾಸಿ, ದಿ.ಕೊಪ್ಪಾಟಿ ಮುತ್ತ ಗೌಡ ಅವರು ಪುತ್ರ  ದಾಮೋದರ ಗೌಡ (33) ಅವರು ಅ. 3ರಂದು ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಊಟ ಮಾಡಿ ಮಲಗಿದ್ದ ಅವರು ಬೆಳಗ್ಗೆ ಮನೆಮಂದಿ ನೋಡಿದಾಗ ಮಲಗಿಕೊಂಡ ಸ್ಥಳದಲ್ಲಿ ಇರಲಿಲ್ಲ, ಹುಡುಕಾಡಿದಾಗ ಮನೆಯಿಂದ 500 ಮೀ. ದೂರದಲ್ಲಿನ ಮರಕ್ಕೆ ತನ್ನದೇ ಬನಿಯನನ್ನು ಹರಿದು ಹಗ್ಗ ಮಾಡಿಕೊಂಡು ನೇಣು ಬಿಗಿದುಕೊಂಡಿರುವುದು ಕಂಡುಬಂದಿತ್ತು. ತತ್‌ಕ್ಷಣ ನೇಣಿನಿಂದ ಇಳಿಸಿದರೂ ಕೊನೆಯುಸಿರೆಳೆದಾಗಿತ್ತು. ಅವರು ದಂಪತಿಯ ನಡುವೆ ಜಗಳ…

Read More

ಮಂಗಳೂರು: ಲಿಂಕ್ ಕ್ಲಿಕ್ ಮಾಡಿ 42.50 ಲಕ್ಷ ರೂ. ಕಳಕೊಂಡ ವ್ಯಕ್ತಿ- ಪ್ರಕರಣ ದಾಖಲು

ಮಂಗಳೂರು: ಹೂಡಿಕೆ ಕುರಿತಂತೆ ಅಪರಿಚಿತ ಸಂಖ್ಯೆಯಿಂದ ವಾಟ್ಸ್ಆ್ಯಪ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ 42.50 ಲಕ್ಷ ರೂ. ಕಳೆದುಕೊಂಡ ಬಗ್ಗೆ ಸೆನ್ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ದೂರುದಾರರ ಜು.13ರಂದು ಪ್ರಿಯಾ ಅಗರ್ವಾಲ್ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯು ಹೂಡಿಕೆ ಬಗ್ಗೆ ಮಾಹಿತಿ ಇರುವ ಲಿಂಕ್ ತನಗೆ ಕಳುಹಿಸಿದ್ದರು. ಅದನ್ನು ಕ್ಲಿಕ್ ಮಾಡಿ ನೋಡಿದ ಬಳಿಕ ಇನ್ನೊಂದು ಲಿಂಕ್ ಕಳುಹಿಸಿ ಆ್ಯಪ್ ನಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ನಂಬರ್ ಕೂಡಾ ಕಳುಹಿಸಿಕೊಟ್ಟಿದ್ದರು. ಅವರು…

Read More

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡುವಂತಿಲ್ಲ: ಆರೋಗ್ಯ ಇಲಾಖೆ ಆದೇಶ

ಮಕ್ಕಳು ಕೆಮ್ಮು, ಶೀತದಿಂದ ಬಳಲುತ್ತಿದ್ದರೆ ಮಕ್ಕಳಿಗೆ ಸಿರಪ್ ನೀಡುವುದು ಸಾಮಾನ್ಯ. ಆದರೆ ಹೀಗೆ ಸಿರಪ್ ಸೇವಿಸಿದ್ದ ಮಕ್ಕಳು ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿರುವ ಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾದಲ್ಲಿ ಈವರೆಗೆ 11 ಮಕ್ಕಳು ಕೆಮ್ಮಿನ ಸಿರಪ್ ನಿಂದ ಬಲಿಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ 9 ಮಕ್ಕಳು ಹಾಗೂ ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಮೃತಪಟ್ಟಿದ್ದಾರೆ. ಮಕ್ಕಳು ಶೀತ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದರು. ಈ ವೇಳೆ ವೈದ್ಯರ ಸಲಹೆಯಂತೆಯೇ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಲಾಗಿದೆ. ಈ…

Read More

ಮಿಥುನ್ ರೈ ಅವರ ಹುಟ್ಟುಹಬ್ಬ

ಮಂಗಳೂರು: ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ಹುಟ್ಟುಹಬ್ಬ. ಅದ್ಬುತ ಮಾತುಗಾರ, ಸಂಘಟಕ,ಸಮಾಜ ಸೇವಕ,ಸಮರ್ಥ ಯುವ ನಾಯಕರಾಗಿರುವ ಮಿಥುನ್ ರೈ ಅವರ ಹುಟ್ಟುಹಬ್ಬಕ್ಕೆ ಲಯನ್ ಅನಿಲ್ ದಾಸ್ ರವರು ಶುಭ ಹಾರೈಸಿದರು.

Read More

ಕಾರ್ಕಳ: ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್..!! ತಾಯಿಯಿಂದಲೇ ಕೊಲೆಯಾದ ಮಗಳು

ಕಾರ್ಕಳ : ತಾಯಿಯೋರ್ವಳು ತನ್ಮ ಮಗಳನ್ನೇ ಹತ್ಯೆಗೈದಿರುವ ಘಟನೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಕಾನಂಗಿ ಎಂಬಲ್ಲಿ ವರದಿಯಾಗಿದೆ. 17 ವರ್ಷದ ಶಿಫನಾಜ್ ಕೊಲೆಯಾದ ಯುವತಿ. ಸೆ. 20ರಂದು ಶಿಫನಾಜ್ ತನ್ನ ಸ್ನೇಹಿತನನ್ನು ಭೇಟಿಯಾಗಲು ಉಡುಪಿಗೆ ಹೋಗಿ ಬರುವುದಾಗಿ ತಾಯಿಯಲ್ಲಿ ಹೇಳಿದ್ದು ಅದಕ್ಕೆ ತಾಯಿ ಗುಲ್ಬಾರ್ ಬಾನು (45) ನಿರಾಕರಿಸಿದ್ದಳು. ಇದರಿಂದ ತಾಯಿ ಹಾಗೂ ಮಗಳ ಮಧ್ಯೆ ಜಗಳವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಮಗಳ ಕುತ್ತಿಗೆ ಬಿಗಿಹಿಡಿದು ಉಸಿರುಗಟ್ಟಿಸಿ ಶಿಫನಾಜ್‌ಳನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಅಧಿಕೃತ…

Read More

ಉಡುಪಿ: ಮಲ್ಪೆ ಬೀಚ್ ನಲ್ಲಿ ಇಬ್ಬರು ಯುವಕರು ನೀರುಪಾಲು- ಓರ್ವನ ರಕ್ಷಣೆ, ಇನ್ನೋರ್ವ ನಾಪತ್ತೆ

ಉಡುಪಿ: ಮಲ್ಪೆ ಬೀಚ್ ನಲ್ಲಿ ಈಜಾಡುತ್ತಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದು, ಓರ್ವನನ್ನು ರಕ್ಷಿಸಿರುವ ಘಟನೆ ಅ.3 ರಂದು ಶುಕ್ರವಾರ ಸಂಜೆ ಸಂಭವಿಸಿದೆ. ಹಾಸನ ಮೂಲದ ಮಿಥುನ್ ಮತ್ತು ಶಶಾಂಕ್ ನೀರುಪಾಲಾಗಿದ್ದಾರೆ. ಇದನ್ನು ಗಮನಿಸಿದ ಸಹ ಪ್ರವಾಸಿಗರು ಶಶಾಂಕ್ ನನ್ನು ರಕ್ಷಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಿಥುನ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ. ಮಲ್ಪೆ ಬೀಚ್ ನಲ್ಲಿ ಜಿಲ್ಲಾಡಳಿತದಿಂದ ಭಾರೀ ನಿರ್ಲಕ್ಷ್ಯ ಆರೋಪ ದಸರಾ ರಜೆ ಹಿನ್ನೆಲೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಉಡುಪಿಗೆ ಆಗಮಿಸುತ್ತಿದ್ದಾರೆ….

Read More

ಬಂಟ್ವಾಳ: ರಸ್ತೆ ದಾಟುತ್ತಿದ್ದ ಲೋಕೇಶ್ ಮೂಲ್ಯರವರಿಗೆ ರಿಕ್ಷಾ ಡಿಕ್ಕಿ ಹೊಡೆದು ಮೃತ್ಯು

ಬಂಟ್ವಾಳ : ಸಮೀಪ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಅಮ್ಟೂರು ಕ್ರಾಸ್‌ನಲ್ಲಿ ಸಂಭವಿಸಿದೆ. ಸಾವನ್ನಪ್ಪಿದವರು ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಲೋಕೇಶ್ ಮೂಲ್ಯ (44 ) ಎಂದು ತಿಳಿದು ಬಂದಿದೆ. ಲೋಕೇಶ್ ಅವರು ಕಲ್ಲಡ್ಕದ ನಯಾರ ಪೆಟ್ರೋಲ್ ಪಂಪ್ ನ ಮುಂಭಾಗದಲ್ಲಿ ರಸ್ತೆಯನ್ನು ದಾಟುವ ವೇಳೆ ಅತೀ ವೇಗದಿಂದ ಬಂದ ರಿಕ್ಷಾ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ಕಳೆದುಕೊಂಡು ಬಳಿಕ ಪಲ್ಟಿಯಾಗಿದೆ….

Read More

ಬಂಟ್ವಾಳ: ಪದೇ ಪದೇ ಗೋಕಳ್ಳತನ ಮತ್ತು ಗೋಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿಯ ಮನೆ ಮುಟ್ಟುಗೋಲು

ಬಂಟ್ವಾಳ: ಗೋಕಳ್ಳತನ ಮತ್ತು ಗೋಹತ್ಯೆ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗುತ್ತಿದ್ದ ಆರೋಪಿಯೊಬ್ಬನ ಮನೆ ಮತ್ತು ಅಕ್ರಮ ಕಸಾಯಿಖಾನೆಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಜಪ್ತಿ ಮಾಡಿದ್ದಾರೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂ ಅಡಿಯಲ್ಲಿ ದಕ್ಷಿಣ ಕನ್ನಡ (ದ.ಕ.) ಜಿಲ್ಲೆಯಲ್ಲಿ ಇಂತಹ ಪ್ರಕರಣದಲ್ಲಿ ಮನೆ ಅಥವಾ ಅಕ್ರಮ ಕಸಾಯಿಖಾನೆಯನ್ನು ಮುಟ್ಟುಗೋಲು ಹಾಕಿರುವುದು ಇದೇ ಮೊದಲನೆಯದು ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ನಿವಾಸಿಯಾದ…

Read More