
Read Time:48 Second
ಉಡುಪಿ : ಖಾಸಗಿ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇದೀಗ ಕೊಲೆಗೆ ಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾದ ನಾಲ್ಕನೇ ಆರೋಪಿ ಉಡುಪಿ ಮಿಷನ್ ಕಾಂಪೌಂಡ್ ನಿವಾಸಿ ರಿಧಾ ಶಭನಾ (27) ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಸೈಫುದ್ದೀನ್ ಕೊಲೆ ಪ್ರಕರಣ ಸಂಬಂಧ ಉಡುಪಿ ಮಿಷನ್ ಕಾಂಪೌಂಡ್ ನಿವಾಸಿ ಮಹಮದ್ ಫೈಸಲ್ ಖಾನ್ (27), ಕರಂಬಳ್ಳಿ ನಿವಾಸಿ ಮೊಹಮ್ಮದ್ ಶರೀಫ್ (37) ಮತ್ತು ಮಂಗಳೂರು ಕಾಟಿಪಳ್ಳ ನಿವಾಸಿ ಅಬ್ದುಲ್ ಶುಕುರ್ (43) ಎಂಬವರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು.

