ಮಂಗಳೂರು: ಯುವಕರಿಗೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಉಗಾಂಢ ಮೂಲದ ಮಹಿಳೆಯ ಬಂಧನ!

ಮಂಗಳೂರು: ಯುವಕರಿಗೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದ 6ಜನ ವ್ಯಾಪಾರಿಗಳಿಗೆ ವ್ಯವಸ್ಥಿತವಾಗಿ ಬೆಂಗಳೂರು ಸರಹದ್ದಿನಿಂದ ಡ್ರಗ್ಸ್ ನೀಡುತ್ತಿದ್ದ ಉಗಾಂಢ ಮೂಲದ ಮಹಿಳೆಯನ್ನು4ಕೆಜಿ ಎಂಡಿಎಂನೊಂದಿಗೆ ಜಿಗ್ನಿ ಸರಹದ್ದಿನಲ್ಲಿ ಸಿಸಿಬಿ ಪೋಲಿಸರು ಬಂಧಿಸಿದ್ದಾರೆ. ಇದರೊಂದಿಗೆ ಮಂಗಳೂರು ಸರಹದ್ದಿನಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಸಪ್ಲೆಯರ್‍,ಗೆ ಇದ್ದ ಒಂದು ಮೂಲವನ್ನು ಬಂಧಿಸಿದ ಹಾಗೆ ಆಗಿದೆ. ಈಗಾಗಲೇ ಡ್ರಗ್ಸ್ ಸಾಗಾಟ ಮಾಡುತ್ತಿದ್ದ 6ಜನ ವ್ಯಾಪಾರಿಗಳನ್ನು ಬಂಧಿಸಿ ಅವರು JC(ನ್ಯಾಯಾಂಗ ಬಂಧನ) ಯಲ್ಲಿದ್ದಾರೆ. NCB ಲೆಕ್ಕಾಚಾರದ ಪ್ರಕಾರ ಸುಮಾರು 4ಕೋಟಿ ಬೆಲೆಬಾಳುವಷ್ಟು 4ಕೆಜಿ ಎಂಡಿಎಂನೊಂದಿಗೆ ಇವರನ್ನು ಬಂಧಿಸಿ…

Read More

ಮಂಗಳೂರು ಮೂಲದ ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್..!!

ಬೆಂಗಳೂರು: ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಕೇಸ್ ಗೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಕೊಲೆಯಾದ ಟೆಕ್ಕಿ ಶರ್ಮಿಳಾ ಮೊಬೈಲ್ ಫೋನ್ ಕಾಣೆಯಾಗಿದ್ದು, ತೆರೆದ ಕಿಟಕಿ, ಬೆಂಕಿ ಅವಘಡಕ್ಕೆ ಕಾರಣವೇನೆಂದು ತಿಳಿದು ಬಂದಿರಲಿಲ್ಲ. ಆಕೆಯ ಮೊಬೈಲ್ ನಾಪತ್ತೆಯಾಗಿದ್ದು ಪೊಲೀಸರು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಭೇದಿಸಲು ಕಾರಣವಾಯಿತು. ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ 18 ವರ್ಷದ ದ್ವಿತೀಯ ಪಿಯು ವಿದ್ಯಾರ್ಥಿಯನ್ನು ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಕತ್ತು ಹಿಸುಕಿ…

Read More

ಮಂಗಳೂರು: ರಸ್ತೆ ಬದಿಯ ಸ್ಟಾಲ್ ಮಾಲಿಕನಿಂದ ಹಸುವಿಗೆ ಚೂರಿ ಇರಿತ..!! ದೂರು ದಾಖಲು

ಮಂಗಳೂರು : ಎಡಪದವು ಪುಪಾಡಿಕಲ್ಲು ಎಂಬಲ್ಲಿ ಭಕ್ತರು ಅಯ್ಯಪ್ಪ ಸ್ವಾಮಿ ಬಿರಿ ( ಟೆಂಟ್ ) ಬಳಿ ನಿನ್ನೆ (ಭಾನುವಾರ) ಪೂಜೆಯ ಸಮಾರಂಭ ನಡೆಯುತ್ತಿತ್ತು ಆ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿ ಒರ್ವ ಚರುಮುರಿ ಸ್ಟಾಲನ್ನು ಇರಿಸಿದ್ದನು ಈ ವೇಳೆ ಸ್ಟಾಲಿಗೆ ಟೊಮೇಟೊ ತಿನ್ನಲು ಬಂದ ದನದ ಮುಖಕ್ಕೆ ವ್ಯಕ್ತಿ ಕೋಪಗೊಂಡು ಚೂರಿ ಇರಿದ ಘಟನೆ ನಡೆದಿದೆ. ಚೂರಿ ಇರಿದ ವ್ಯಕ್ತಿಯನ್ನು ಚರಮುರಿ ಸ್ಟಾಲ್ ನ ಉಮರಬ್ಬ ಎಂದು ತಿಳಿದುಬಂದಿದೆ. ಈತ ಜಾತ್ರೆಯ ವೇಳೆ ಹಲವೆಡೆ ಚರುಮುರಿ ಸ್ಟಾಲ್ ಹಾಕಿ…

Read More

ಮಂಜೇಶ್ವರ: ತ್ರೀಸ್ತರ ಪಂಚಾಯತ್ ಚುನಾವಣೆಯಲ್ಲಿ ಚುನಾಯಿತರಾದ ಸದಸ್ಯರಿಗೆ ಅಭಿನಂದನ ಕಾರ್ಯಕ್ರಮ

ಕುಲಾಲ ವೇದಿಕೆ ಮಂಜೇಶ್ವರ ಇದರ ವತಿಯಿಂದ ಕಳೆದ ತ್ರೀಸ್ತರ ಪಂಚಾಯತ್ ಚುನಾವಣೆಯಲ್ಲಿ ಚುನಾಯಿತರಾದ ಸದಸ್ಯರನ್ನು ಅಭಿನಂದನ ಕಾರ್ಯಕ್ರಮ ಮತ್ತು ಕೇರಳ ಮಣ್ ಪಾತ್ರ ಸಮುದಾಯ ಸಭಾ (KMSS) ಇದರ ಯೂನಿಟ್ ರೂಪಿಕರಣ ಸಭೆಯು ಮಜಿಬೈಲ್ ಕೋ ಒಪರೆಟಿವ್ ಬ್ಯಾಂಕಿನ ಸಭಾಂಗಣದಲ್ಲಿ ಜರಗಿತು.

Read More

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಕಳ್ಳತನ- ಇಬ್ಬರು ಆರೋಪಿಗಳ ಬಂಧನ..!!

ಕಾರ್ಕಳ ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಕಟ್ಟಡದಲ್ಲಿ ತಾಮ್ರದ ಹೊದಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಕಳವಾರು ನಿವಾಸಿ ಆರೀಫ್ @ ಮುನ್ನ (37) ಹಾಗೂ ಕಾವೂರು ನಿವಾಸಿ ಅಬ್ದುಲ್ ಹಮೀದ್ (32) ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 2.18 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜ. 3ರಂದು ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮುಖ್ಯ ಬಾಗಿಲನ್ನು ಸಾಧನದ ಸಹಾಯದಿಂದ ಬಲವಂತವಾಗಿ ತೆರೆದು ಒಳಪ್ರವೇಶಿಸಿದ ದುಷ್ಕರ್ಮಿಗಳು, ಕಟ್ಟಡದ…

Read More

ಜ.28ರಿಂದ ಸಂಸತ್ತಿನ ಬಜೆಟ್ ಅಧಿವೇಶನ: ಫೆ.1ರಂದು ಮೊದಲ ಬಾರಿ ಭಾನುವಾರ ಬಜೆಟ್ ಮಂಡನೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಜ.28ರಿಂದ ಆರಂಭವಾಗಿ ಏಪ್ರಿಲ್ 2ರವರೆಗೆ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿವೇಶನಕ್ಕೆ ಅನುಮೋದನೆ ನೀಡಿದ್ದು, ಮೊದಲ ದಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.ಕೇಂದ್ರ ಬಜೆಟ್ ಅನ್ನು ಫೆ. 1ರಂದು ಮಂಡಿಸುವ ಪರಂಪರೆ ಇತ್ತೀಚಿನ ವರ್ಷಗಳಿಂದ ಮುಂದುವರಿದಿದೆ. ಈ ಬಾರಿ ಫೆ.1 ಭಾನುವಾರವಾಗಿರುವ ಹಿನ್ನೆಲೆಯಲ್ಲಿ, ದೇಶದ ಸಂಸತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ಭಾನುವಾರ ಬಜೆಟ್ ಮಂಡನೆಯಾಗಲಿದೆ. 2025–26ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್…

Read More

ಬಂಟ್ವಾಳ: ಶಬರಿಮಲೆ ದರ್ಶನ ಮುಗಿಸಿ ವಾಪಸು ಬರುತ್ತಿದ್ದ ವೇಳೆ ಕಾರಿಗೆ ಲಾರಿ ಡಿಕ್ಕಿ – ಬಾಲಕ ಮೃತ್ಯು

ಬಂಟ್ವಾಳ: ಶಬರಿಮಲೆ ಯಾತ್ರೆ ಕೈಗೊಂಡು ದೇವರ ದರ್ಶನ ಮುಗಿಸಿ ವಾಪಸು ಮನೆಗೆ ಬರುವ ವೇಳೆ ಲಾರಿ ಡಿಕ್ಕಿಯಾಗಿ ಬಂಟ್ವಾಳದ ವೃತದಾರಿ ಬಾಲಕನೋರ್ವ ಮೃತಪಟ್ಟ ಘಟನೆ ಕೇರಳ ರಾಜ್ಯದ ಕ್ಯಾಲಿಕಟ್ ಸಮೀಪದ ಕೋಟೆಕಲ್ ಎಂಬಲ್ಲಿ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ. ಕುರಿಯಾಳ ಗ್ರಾಮದ ದುರ್ಗಾನಗರ ಸಮೀಪದ ಕೊಪ್ಪಳ ನಿವಾಸಿ ಅಶೋಕ್ ಪೂಜಾರಿ ಅವರ ಪುತ್ರ ಲಕ್ಮೀಶ ಪೂಜಾರಿ( 15) ಎಂಬಾತ ಲಾರಿ ಅಪಘಾತದಲ್ಲಿ ಮೃತಪಟ್ಟ ಬಾಲಕ. ಇನ್ನು ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿಗಳಾದ ಅಶೋಕ್ ಪೂಜಾರಿ,…

Read More

ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲ ಗೆಹ್ಲೊಟ್ ತಡೆ.!

ಬೆಂಗಳೂರು : ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ತಡೆ ನೀಡಿದ್ದಾರೆ. ಪ್ರತಿಪಕ್ಷಗಳ ವಿರೋಧದ ನಡುವೆಯೇ ಸರ್ಕಾರ ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿ ಲೋಕಭವನಕ್ಕೆ ಕಳುಹಿಸಿತ್ತು. ಬಳಿಕ ಬಿಜೆಪಿ, ಜೆಡಿಎಸ್ ಮುಖಂಡರು, ಸಹಿ ಮಾಡದಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದರು. ಆದ್ದರಿಂದ ರಾಜ್ಯಪಾಲರು ಕೆಲ ಆಕ್ಷೇಪಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಬೆಳಗಾವಿಯ ವಿಧಾನ ಮಂಡಲದ ಚಳಿಗಾಲದ…

Read More

ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಪ್ರಕರಣ : ಮುಖ್ಯ ಅರ್ಚಕ ಬಂಧನ

ತಿರುವನಂತಪುರಂ: ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಪ್ರಕರಣದ ಮಹತ್ವದ ಬೆಳವಣಿಯಲ್ಲಿ ಎಸ್‌ಐಟಿ ಅಧಿಕಾರಿಗಳು ದೇಗುಲದ ಪ್ರಧಾನ ಅರ್ಚಕನನ್ನು ಅರೆಸ್ಟ್ ಮಾಡಿದ್ದಾರೆ. ಕಂಡರಾರು ರಾಜೀವ್ ಬಂಧಿತ ಆರೋಪಿಯಾಗಿದ್ದು, ದೇಗುಲದ ಪ್ರಧಾನ ಅರ್ಚಕನಾಗಿ ಕೆಲಸ ಮಾಡುತ್ತಿದ್ದರು. ಚಿನ್ನ ಕಳ್ಳತನದ ಹಿಂದೆ ದೊಡ್ಡ ಸಂಚು ಮತ್ತು ಮಧ್ಯವರ್ತಿಗಳ ಲಿಂಕ್ ಇರುವ ಬಗ್ಗೆ ಎಸ್‌ಐಟಿ ಶಂಕೆ ವ್ಯಕ್ತಪಡಿಸಿದೆ. ಕಂಡರಾರು ರಾಜೀವ್, ತಂತ್ರಿ ಉಣ್ಣಿಕೃಷ್ಣನ್ ಪೊಟ್ಟಿಯವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಫಲಕಗಳಿಗೆ ಚಿನ್ನ ಲೇಪಿಸುವ ನೆಪದಲ್ಲಿ ನಡೆದ ಪ್ರಾಯೋಜಕತ್ವದ ನಂತರ ಚಿನ್ನದ…

Read More

ವಿಟ್ಲ: ಕುಖ್ಯಾತ ಕ್ರಿಮಿನಲ್ ಶೌಕತ್ ಮೂಡಿಗೆರೆಗೆ ಗಡಿಪಾರು

ವಿಟ್ಲ: ವಿಟ್ಲ ಕಸಬ ಗ್ರಾಮದ ನಿವಾಸಿ ಅಬ್ದುಲ್ ಖಾದರ್ ಯಾನೆ ಶೌಕತ್ ಎಂಬ ಕ್ರಿಮಿನಲ್‌ನನ್ನು ಪೊಲೀಸರು ಚಿಕ್ಕಮಗಳೂರಿಗೆ ಗಡಿಪಾರು ಮಾಡಿದ್ದಾರೆ. ಈತನ ವಿರುದ್ಧ ಹಲ್ಲೆ, ನಿಷೇಧಿತ ಮಾದಕ ವಸ್ತುಗಳ ಸೇವನೆ ಮತ್ತು NDPS ಕಾಯ್ದೆಯಡಿ ಉಲ್ಲಂಘನೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿವೆ. ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಗಡಿಪಾರು ಮಾಡಲಾಗಿದೆ. ವಿಟ್ಲ ಕಸಬ ಗ್ರಾಮ ಬಂಟ್ವಾಳ ತಾಲೂಕಿನ ಅಬ್ದುಲ್ ಖಾದ‌ರ್ ಗಡಿಪಾರು ಆದ ಆರೋಪಿ. ಆರೋಪಿ ವಿರುದ್ಧ ಹಲ್ಲೆ ದೊಂಬಿ, ನಿಷೇಧಿತ ಮಾದಕ ದ್ರವ್ಯ ಸೇವನೆ, ಎನ್‌ಡಿಪಿಎಸ್‌…

Read More