
ದ.ಕ ಜಿಲ್ಲೆಯಲ್ಲಿ ಲ| ಅನಿಲ್ ದಾಸ್ ನೇತ್ರತ್ವದ ಹಾಗೂ ಜಿಲ್ಲಾಧ್ಯಕ್ಷರಾಗಿ ಬಲಿಷ್ಠ ಕುಂಬಾರ ಯುವ ವೇದಿಕೆ ತಂಡವನ್ನು ಕಟ್ಟಿ, ಸಮಾಜದಲ್ಲಿ ಕುಲಾಲ/ ಕುಂಬಾರ ಸಮುದಾಯದ ಬಡ ವರ್ಗದ ಜನರ ಪಾಲಿಗೆ ಬೆಳಕಾಗಿ ನಿಂತಿದೆ. ಶ್ರಮದಾನ, ಸೇವೆ, ಸಂಘಟನೆ ಹಾಗು ಹೋರಾಟಕ್ಕೆ ಮತ್ತೊಂದು ಹೆಸರೇ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಒಕ್ಕೂಟ



ಬಂಟ್ವಾಳ : ಕಳೆದ 2025 ರ ಡಿಸಂಬರ್ ತಿಂಗಳಲ್ಲಿ ಬಾಡಿಗೆ ಮನೆ ಬೆಂಕಿಗಾಹುತಿಯಾಗಿ ಬಡ ಕುಟುಂಬ ನಿರ್ಗತಿಕರಾಗಿದ್ದವರಿಗೆ ಕರ್ನಾಟಕ ರಾಜ್ಯ ಕುಂಬಾರ/ಕುಲಾಲ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದ.ಕ ಜಿಲ್ಲಾ ಸಮಿತಿ ಶಾಶ್ವತ ನೆಲೆಯಾಗಿ ಮನೆಯ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಚಾಲನೆ ಕೊಟ್ಟಿತ್ತು. ಹಾಗೆ ಈ ಯುವವೇದಿಕೆ ಜಿಲ್ಲಾಸಮಿತಿಯು ದ.ಕ.ಜಿಲ್ಲೆಯ ಯುವವೇದಿಕೆ ತಾಲೂಕು ಸಮಿತಿಯಲ್ಲಿ ಈ ಸಮುದಾಯದ ಈ ನತದೃಷ್ಟೆಬಡ ಕುಟುಂಬಕ್ಕೆ ಶಾಶ್ವತ ವಸತಿ ಕಲ್ಪಿಸಲು ವಿವಿಧ ರೀತಿಯ ಸಹಾಯಹಸ್ತಕ್ಕೆ ಕೋರಿ ಮನವಿ ಮಾಡಿತ್ತು.

ಈ ಪ್ರಕಾರ ಜಿಲ್ಲಾ ಕುಲಾಲ ಯುವ ವೇದಿಕೆ ಮುಂಗಡ ಹಣ ನೀಡಿದ ನಿವೇಶನದ ಮನೆ ರಿಪೇರಿಗೆ ಉಳ್ಳಾಲ ತಾಲೂಕಿನ ಕರ್ನಾಟಕ ರಾಜ್ಯ ಕುಂಬಾರ ಕುಲಾಲ ಯುವ ವೇದಿಕೆ ಯ ಸದಸ್ಯರು ಮಾಡಿನ ಹಂಚು ತೆಗೆಯುವ ಶ್ರಮದಾನ ಮಾಡಿದರು. ಇದರ ಅಧ್ಯಕ್ಷ ನವೀನ್ ಕುಲಾಲ್ ಪಿದಮಲೆ ಕುರ್ನಾಡು ಶ್ರಮದಾನದ ನಿರ್ವಹಣೆ ಮಾಡಿದರು .


ಶ್ರೀ ಗುರು ಚೈತನ್ಯದ ಹೊನ್ನಯ್ಯ ಕಾಟಿಪಳ್ಳ ಪ್ರವೀಣ್ ಅಮ್ಮೆಂಬಳ, ಶೇಖರ ನವಗ್ರಾಮ ಮುಡಿಪು ,ಮೊನಪ್ಪ ಮೂಲ್ಯ ಮದಕ, ಮನೋಜ್ ಕುಲಾಲ್ ಮದಕ , ಮಧುಸೂದನ್ ಕುಲಾಲ್, ಲತೇಶ್ ಪಾಣೆಮಂಗಳೂರು, ಹಾಗು ಫಲಾನುಭವಿ ಮನೆಯವರು ಈ ಶ್ರಮದಾನದಲ್ಲಿ ಪಾಲ್ಗೋಂಡಿದ್ದರು.


