admin

ಭಾರತೀಯ ಸೇನೆಯಲ್ಲಿ ‘ಅಗ್ನಿವೀರ್’ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಏ.25 ಕೊನೆಯ ದಿನ 

ನವದೆಹಲಿ : ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿ 2025 ಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ ಇದೆ. ಈ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಹೊಸ ದಿನಾಂಕದ ಪ್ರಕಾರ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈಗ ಏಪ್ರಿಲ್ 25, 2025 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಭರ್ತಿ ಮಾಡಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ joinindianarmy.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಈ ಮೊದಲು…

Read More

ಉಡುಪಿ: ಹೊಟೇಲ್‌ನಲ್ಲಿ ಅಗ್ನಿ ಅವಘಡ..! ಭಾರೀ ನಷ್ಟ

ಉಡುಪಿ: ಹೊಟೇಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಭಾರೀ ನಷ್ಟ ಉಂಟಾದ ಘಟನೆ ಉಡುಪಿಯ ಮಲ್ಪೇ ಬೀಚ್ ಬಳಿ ಹೊಟೇಲ್‌ನಲ್ಲಿ ನಡೆದಿದೆ. ಸಚಿನ್ ಅವರ ಮಾಲಕತ್ವದ ಅಮ್ಮ ಹೋಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ನಡೆದಿದೆ ಎನ್ನಲಾಗಿದೆ. ಐದಾರು ಫ್ರಿಡ್ಜ್, ಗ್ರೈಂಡರ್, ಪಾತ್ರೆ, ದಿನಸಿ ಬೆಂಕಿಗಾಹುತಿಯಾಗಿದ್ದು, ಸುಮಾರು 15 ಲಕ್ಷ ರೂಪಾಯಿ ವೆಚ್ಚದ ವಸ್ತುಗಳು ಸುಟ್ಟು ಕರಕಲಾಗಿದೆ ಎನ್ನಲಾಗಿದೆ. ಹೋಟೆಲ್ ಬಂದ್ ಮಾಡಿ ಹೋದ ನಂತರ ಫ್ರಿಡ್ಜ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆ ಇದೆ….

Read More

ಮಂಗಳೂರು: ಸಮುದ್ರ ಪಾಲಾದ ಇಬ್ಬರು ಯುವಕರು..!!

ಮಂಗಳೂರು: ಸಮುದ್ರದ ಅಲೆಗೆ ಸಿಲುಕಿದ ಮುಂಬೈ ಮೂಲದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಎನ್ಐಟಿಕೆ ಬಳಿಯ ಕಡಲ ತೀರದಲ್ಲಿ ಜರುಗಿದೆ. ಮುಂಬೈನಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ಧ್ಯಾನ್ ಬಂಜನ್ (18) ಮೃತ ವಿದ್ಯಾರ್ಥಿ. ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಹನೀಶ್ ಕುಲಾಲ್ (15) ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಸುರತ್ಕಲ್‌ನಲ್ಲಿ ನಡೆದ ಮದುವೆಗೆ ಮುಂಬೈನಿಂದ ಬಂದಿದ್ದ ಹತ್ತು ಮಂದಿಯಿದ್ದ ಕುಟುಂಬ ಆಗಮಿಸಿತ್ತು. ಸುರತ್ಕಲ್ ಸಮೀಪದ ಸೂರಿಂಜೆಯ ಪ್ರಖ್ಯಾತ್ ಎಂಬವರ ಮನೆಗೆ ಮದುವೆ ಕಾರ್ಯಕ್ರಮಕ್ಕೆಂದು ಬಂದಿತ್ತು. ಮಂಗಳವಾರ…

Read More

ಉಡುಪಿ: ಮಸೀದಿಗೆ ಸಂಬಂಧಿಸಿದ ಕಟ್ಟಡವೊಂದರ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ‌ ಪತ್ತೆ

ಉಡುಪಿ: ಮಸೀದಿಗೆ ಸಂಬಂಧಿಸಿದ ಕಟ್ಟಡವೊಂದರ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ‌ ಪತ್ತೆಯಾದ ಘಟನೆ ನಡೆದಿದೆ. ಮಸೀದಿಯ ವ್ಯವಸ್ಥಾಪಕ ಸುಹೇಲ್‌ ಅವರು ನಿನ್ನೆ ಶೌಚಾಲಯಕ್ಕೆ ಹೋದಾಗ ನವಜಾತ ಶಿಶು ಮೃತಪಟ್ಟ‌ ಸ್ಥಿತಿಯಲ್ಲಿ ಬಿದ್ದಿತ್ತು. ತಕ್ಷಣವೇ ಅವರು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು,‌ ಶಿಶು ಜನನಕ್ಕೆ ಮುಂಚೆ ಅಥವಾ ಆ ತರುವಾಯ ಅಥವಾ ಜನನದ ಕಾಲದಲ್ಲಿ ಮರಣ ಹೊಂದಿದ್ದು, ಯಾರೋ ಅಪರಿಚಿತರು ಆ ಮಗುವಿನ ಮೃತದೇಹವನ್ನು ರಹಸ್ಯವಾಗಿ ವಿಲೇ ಮಾಡಿ, ಮಗುವಿನ…

Read More

ಉಪ್ಪಿನಂಗಡಿ: ಕೆಎಸ್‌ಆರ್‌ಟಿಸಿ ಬಸ್ಸು ಅಪಘಾತ – 10 ಪ್ರಯಾಣಿಕರಿಗೆ ಗಾಯ,ಮೂವರು ಗಂಭೀರ

ಉಪ್ಪಿನಂಗಡಿ: ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದು ಡಿವೈಡರ್‌ಗೆ ಢಿಕ್ಕಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಹೆಚ್‌ಪಿ ಪೆಟ್ರೋಲ್ ಪಂಪ್‌ನ ಮುಂಭಾಗದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಅವಘಡದಲ್ಲಿ ಬಸ್ಸಿನಲ್ಲಿದ್ದ ದಂಪತಿ ಸಹಿತ ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದಂತೆ ಬಸ್ಸಿನ ಚಾಲಕ ಸಹಿತ 10 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನೆಲ್ಯಾಡಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕುಂದಾಪುರ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ಸು ಧರ್ಮಸ್ಥಳದಿಂದ ಬೆಂಗಳೂರಿಗೆ…

Read More

8 ತಿಂಗಳ ತುಂಬು ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ!

ಆಂದ್ರಪ್ರದೇಶ: ಪ್ರಿತಿಸಿ ಮದುವೆಯಾಗಿದ್ದು, ಸಣ್ಣ ವಿಚಾರಕ್ಕೆ ನಡೆದ ಜಗಳಕ್ಕೆ ತನ್ನ 8 ತಿಂಗಳ ಗರ್ಭಿಣಿ ಪತ್ನಿಯನ್ನು ಗಂಡ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಸೋಮವಾರ ನಡೆದಿದೆ. ಅನುಷಾ (27) ಮೃತ ಪತ್ನಿ. ಪತಿ ಜ್ಞಾನೇಶ್ವರ್ ಹಾಗೂ ಪತ್ನಿ ಅನುಷಾ ಸೋಮವಾರ ಬೆಳಗ್ಗೆ ಜಗಳವಾಡಿದ್ದು, ಈ ಜಗಳ ತಾರಕಕ್ಕೇರಿ ಜ್ಞಾನೇಶ್ವರ್ ತನ್ನ ಪತ್ನಿಯ ಕತ್ತು ಹಿಸುಕಿದ್ದಾನೆ. ಈ ಸಂದರ್ಭ ಅನುಷಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಪತಿ, ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಷ್ಟರಲ್ಲಾಗಲೇ…

Read More

ಸಮಾಜದ ಪ್ರೀತಿ, ಗೌರವಕ್ಕೆೆ ಸದಾ ಋಣಿ: ‘ಕುಲಾಲ ಪರ್ಬ’ ದಲ್ಲಿ ಗೌರವಾಭಿನಂದನೆ ಸ್ವೀಕರಿಸಿ ಸುನಿಲ್ ಸಾಲ್ಯಾಾನ್

ಮಂಗಳೂರು: ಸಮಾಜ ಸೇವೆ ರಕ್ತಗತವಾಗಿ ಬಂದಿದೆ. ಅದು ನನ್ನ ಹವ್ಯಾಾಸ. ಸಮಾಜ ನೀಡುತ್ತಿಿರುವ ಗೌರವ, ಪ್ರೀತಿ, ಆಶೀರ್ವಾದಕ್ಕೆೆ ಸದಾ ಋಣಿಯಾಗಿರುತ್ತೇನೆ ಎಂದು ಮುಂಬೈ ಉದ್ಯಮಿ, ಮಹಾದಾನಿ ಸುನಿಲ್ ಸಾಲ್ಯಾಾನ್ ಹೇಳಿದ್ದಾಾರೆ. ಕುಲಾಲ ಪ್ರತಿಷ್ಠಾಾನ ಮಂಗಳೂರು ವತಿಯಿಂದ ಮಂಗಳೂರಿನ ಉರ್ವಸ್ಟೋೋರ್ ಅಂಬೇಡ್ಕರ್ ಭವನದ ದಿ ಸುಮಿತ್ರ ರಾಜು ಸಾಲ್ಯಾಾನ್ ವೇದಿಕೆಯಲ್ಲಿ ರವಿವಾರ ಜರಗಿದ ‘ಕುಲಾಲ ಪರ್ಬ’ದ ಸಮಾರೋಪ ಸಮಾರಂಭದಲ್ಲಿ ಗೌರವಾಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ಸಮಾಜದ ಅಶಕ್ತರಿಗೆ ಮಾಡುವ ಸಹಾಯ ಸಂತೃಪ್ತಿಿ ನೀಡುತ್ತದೆ. ಸಮಾಜದ ಋಣವನ್ನು ತೀರಿಸುವ ಹೊಣೆಗಾರಿಕೆ ಎಲ್ಲರ…

Read More

ಮಂಗಳೂರು: ಪೂರ್ವದ್ವೇಷದಿಂದ ಆಟೋಚಾಲಕನ ಹತ್ಯೆ- ಆರೋಪಿ ಸೆರೆ

ಮಂಗಳೂರು: ಮೂಲ್ಕಿಯ ಆಟೋರಿಕ್ಷಾ ಚಾಲಕ ಮುಹಮ್ಮದ್ ಶರೀಫ್ (52) ಕೊಲೆಗೆ ಪೂರ್ವ ದ್ವೇಷವೇ ಕಾರಣ ಎಂಬ ವಿಚಾರ ಆರೋಪಿಯ ವಿಚಾರಣೆಯಿಂದ ತಿಳಿದುಬಂದಿದೆ. ಮಂಗಳೂರಿನಲ್ಲಿ ರಿಕ್ಷಾ ಬಾಡಿಗೆ ಮಾಡುತ್ತಿದ್ದ ಮೂಲ್ಕಿಯ ಮುಹಮ್ಮದ್‌ ಶರೀಫ್‌ ಅವರನ್ನು ಕೇರಳ ಗಡಿಯ ಮಂಜೇಶ್ವರ ಸಮೀಪದ ಕುಂಜತ್ತೂರು ಪದವು ಎಂಬಲ್ಲಿಗೆ ಕೊಂಡೊಯ್ದು ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದಿದ್ದ ಆರೋಪಿ ಅಭಿಷೇಕ್‌ ಶೆಟ್ಟಿ ಎಂಬಾತನನ್ನು ಮಂಗಳೂರು ಪೊಲೀಸರು ನಿನ್ನೆ ಬಂಧಿಸಿದ್ದಾರೆ.ಆರೋಪಿ ಅಭಿಷೇಕ್ ಶೆಟ್ಟಿ (40) ಸುರತ್ಕಲ್‌ನ ನಿವಾಸಿ. ತಾನು ಓರ್ವನೇ ಈ ಕೃತ್ಯ ಎಸಗಿರುವುದಾಗಿ…

Read More

ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 9970 ಲೋಕೋಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು : ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 9,970 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಅರ್ಜಿ ನೋಂದಣಿ  ಪ್ರಾರಂಭವಾಗಿದೆ. 9,970 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅಭ್ಯರ್ಥಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ವಿವರಗಳನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದು. ಭಾರತೀಯ ರೈಲ್ವೆ 9,970 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರದ ಪ್ರತ್ಯೇಕ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರೈಲ್ವೆ…

Read More

ಬೆಳ್ತಂಗಡಿ: ಬೈಕ್‌-ಟಿಪ್ಪರ್ ನಡುವೆ ಅಪಘಾತ..!! ಬೈಕ್‌ ಸವಾರ ಸಾವು

ಬೆಳ್ತಂಗಡಿ: ಬೈಕ್‌ ಮತ್ತು ಟಿಪ್ಪರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯ ಪಣೆಜಾಲಿನ ರತ್ನಗಿರಿ ಎಂಬಲ್ಲಿ ನಡೆದಿದೆ. ಮೃತಪಟ್ಟ ಬೈಕ್‌ ಸವಾರನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ನಿವಾಸಿ ಉಪೇಂದ್ರ (29) ಎಂದು ಗುರುತಿಸಲಾಗಿದೆ. ಇವರಿಬ್ಬರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಇದ್ದ ಕಾರಣ ಮೋಹನ್‌ರನ್ನು ಉಪ್ಪಿನಂಗಡಿಗೆ ಬಿಟ್ಟು ಬರಲು ಉಪೇಂದ್ರ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ…

Read More