ಸಮಾಜದ ಪ್ರೀತಿ, ಗೌರವಕ್ಕೆೆ ಸದಾ ಋಣಿ: ‘ಕುಲಾಲ ಪರ್ಬ’ ದಲ್ಲಿ ಗೌರವಾಭಿನಂದನೆ ಸ್ವೀಕರಿಸಿ ಸುನಿಲ್ ಸಾಲ್ಯಾಾನ್

0 0
Read Time:5 Minute, 56 Second

ಮಂಗಳೂರು: ಸಮಾಜ ಸೇವೆ ರಕ್ತಗತವಾಗಿ ಬಂದಿದೆ. ಅದು ನನ್ನ ಹವ್ಯಾಾಸ. ಸಮಾಜ ನೀಡುತ್ತಿಿರುವ ಗೌರವ, ಪ್ರೀತಿ, ಆಶೀರ್ವಾದಕ್ಕೆೆ ಸದಾ ಋಣಿಯಾಗಿರುತ್ತೇನೆ ಎಂದು ಮುಂಬೈ ಉದ್ಯಮಿ, ಮಹಾದಾನಿ ಸುನಿಲ್ ಸಾಲ್ಯಾಾನ್ ಹೇಳಿದ್ದಾಾರೆ.


ಕುಲಾಲ ಪ್ರತಿಷ್ಠಾಾನ ಮಂಗಳೂರು ವತಿಯಿಂದ ಮಂಗಳೂರಿನ ಉರ್ವಸ್ಟೋೋರ್ ಅಂಬೇಡ್ಕರ್ ಭವನದ ದಿ ಸುಮಿತ್ರ ರಾಜು ಸಾಲ್ಯಾಾನ್ ವೇದಿಕೆಯಲ್ಲಿ ರವಿವಾರ ಜರಗಿದ ‘ಕುಲಾಲ ಪರ್ಬ’ದ ಸಮಾರೋಪ ಸಮಾರಂಭದಲ್ಲಿ ಗೌರವಾಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜದ ಅಶಕ್ತರಿಗೆ ಮಾಡುವ ಸಹಾಯ ಸಂತೃಪ್ತಿಿ ನೀಡುತ್ತದೆ. ಸಮಾಜದ ಋಣವನ್ನು ತೀರಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಗಳಿಕೆಯ ಪಾಲನ್ನು ಸಮಾಜಕ್ಕೆೆ ನೀಡುತ್ತಾಾ ಬಂದಿದ್ದೇನೆ. ಕುಲಾಲ ಪ್ರತಿಷ್ಠಾಾನ ಹಮ್ಮಿಿಕೊಂಡ ಅಶಕ್ತರಿಗೆ ಸಹಾಯ, ಸಾಧಕರಿಗೆ ಸಮ್ಮಾಾನ ಮತ್ತು ಪ್ರತಿಭಾ ಪ್ರದರ್ಶನ ಮಾದರಿ ಕಾರ್ಯಕ್ರಮ. ಇಂತಹ ಅರ್ಥಪೂರ್ಣ ಕಾರ್ಯಕ್ರಮದಿಂದ ಸಂತಸಗೊಂಡು 5 ಲ.ರೂ.ಗಳನ್ನು ನೀಡುತ್ತಿಿರುವುದಾಗಿಯೂ ಸುನಿಲ್ ಸಾಲ್ಯಾಾನ್ ಹೇಳಿದರು.


ರೇಕಿಗುರು ವಿಜಯ ಸುವರ್ಣ ಮಾದುಕೋಡಿ ದಿವ್ಯ ಉಪಸ್ಥಿಿತರಾಗಿದ್ದರು. ಕುಲಾಲ ಪ್ರತಿಷ್ಠಾಾನದ ಅಧ್ಯಕ್ಷ ಸುರೇಶ್ ಕುಲಾಲ್ ಮಂಗಳಾದೇವಿ ಅಧ್ಯಕ್ಷತೆ ವಹಿಸಿದ್ದರು. ಮಹಾದಾನಿಗಳಾದ ಸುನಿಲ್ ಸಾಲ್ಯಾಾನ್ ಮತ್ತು ದೇವಕಿ ಸಾಲ್ಯಾಾನ್ ದಂಪತಿಯನ್ನು ಸಮ್ಮಾಾನಿಸಲಾಯಿತು.


ಒಗ್ಗಟ್ಟಿಿನಿಂದ ಬಲಿಷ್ಠ
ದ.ಕ ಜಿಲ್ಲಾಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಾಲ್ ಮಾತನಾಡಿ, ಸಮಾಜದಲ್ಲಿರುವ ಅಶಕ್ತರನ್ನು ಗುರುತಿಸಿ ಅವರಿಗೆ ಸಹಾಯ ಮಾಡಿ ಕಣ್ಣೀರು ಒರೆಸುವ ಕೆಲಸ ಇನ್ನಷ್ಟು ನಡೆಯಬೇಕು. ಅರ್ಹ ಫಲಾನುಭವಿಗಳಿಗೆ ಸಹಾಯ ಸಿಗಬೇಕು. ಇಂತಹ ಕೆಲಸಕ್ಕೆೆ ದಾನಿಗಳ ಸಹಾಯ ಸದಾ ಇರುತ್ತದೆ ಎಂಬ ವಿಶ್ವಾಾಸವಿದೆ.ಕುಲಾಲ ಪ್ರತಿಷ್ಠಾಾನ ಮಾಡುತ್ತಿಿರುವ ಕಾರ್ಯ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಕುಲಾಲ ಸಂಘದ ಶತಮಾನೋತ್ಸವ ಕಾರ್ಯಕ್ರಮ ಶೀಘ್ರದಲ್ಲಿಯೇ ನಡೆಯಲಿದೆ. ಮಂಗಳೂರಿನಲ್ಲಿ ವಿದ್ಯಾಾರ್ಥಿನಿಯರಿಗಾಗಿ ಹಾಸ್ಟೆೆಲ್ ಕೂಡ ಲೋಕಾರ್ಪಣೆಗೊಳ್ಳಲಿದೆ. ಕುಲಾಲ ಸಮಾಜ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಾಾ ಬೆಳೆಯುತ್ತಿಿದೆ. ಇನ್ನಷ್ಟು ಒಗ್ಗಟ್ಟಿಿನಿಂದ ಮುನ್ನಡೆದು ಬಲಿಷ್ಠಗೊಳ್ಳಬೇಕಿದೆ ಎಂದು ಹೇಳಿದರು.


ಪ್ರಾಾಮಾಣಿಕತೆಯ ಸಮುದಾಯ
ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ಅವರು ಮಾತನಾಡಿ, ಕುಲಾಲ ಸಮುದಾಯ ಪ್ರಾಾಮಾಣಿಕತೆಗೆ ಹೆಸರಾಗಿದೆ. ಸಾಮರಸ್ಯದೊಂದಿಗೆ ಎಲ್ಲ ಜಾತಿ ಸಮುದಾಯದವರೊಂದಿಗೆ ಬೆರೆಯುವ ಸಮಾಜ. ಎಲ್ಲ ಜಾತಿಗಳ ನಾಯಕರ ಸಹಕಾರದಿಂದ ಕುಲಾಲ ಸಮುದಾಯ, ಸಂಘ ಬೆಳೆಯುತ್ತಿಿದೆ. ಸುನಿಲ್ ಸಾಲ್ಯಾಾನ್ ಮುಂಬೈಯ ದೊಡ್ಡ ಉದ್ಯಮಿಯಾದರೂ ಕುಲಾಲ ಸಮುದಾಯಕ್ಕೆೆ ಸಹಾಯಹಸ್ತ ನೀಡುವಲ್ಲಿ ಮುಂಚೂಣಿಯಲ್ಲಿದ್ದಾಾರೆ. ‘ಕುಲಾಲ ಪರ್ಬ’ ಕೂಡು ಕುಟುಂಬದ ಪರ್ವದಂತೆ ಮೂಡಿಬಂದಿದೆ ಎಂದು ಹೇಳಿದರು.


ಜಿ.ಪಂ. ಮಾಜಿ ಉಪಾಧ್ಯಕ್ಷೆೆ ಕಸ್ತೂರಿ ಪಂಜ ಅವರು ಮಾತನಾಡಿ, ಇದು ಸದಾ ಸ್ಮರಣೀಯವಾದ ಕಾರ್ಯಕ್ರಮ. ಸತ್ಯ, ನ್ಯಾಾಯ ನಿಷ್ಠೆೆಯಿಂದ ಬದುಕಿ ಸಮಾಜದ ಹೆಸರನ್ನು ಶಾಶ್ವತವಾಗಿ ಉಳಿಸೋಣ. ರಾಷ್ಟ್ರಪ್ರೇಮ ಬೆಳೆಸೋಣ ಎಂದು ಹೇಳಿದರು.


ಶ್ರೀ ವೀರ ನಾರಾಯಣ ದೇವಸ್ಥಾಾನದ ಆಡಳಿತ ಮೊಕ್ತೇಸರ ಸುಂದರ್ ಕುಲಾಲ್ ಶಕ್ತಿಿನಗರ ಅವರು ಮಾತನಾಡಿ, ಎಲ್ಲರನ್ನು ಒಂದುಗೂಡಿಸಿ ದಾನಿಗಳನ್ನು ಸೇರಿಸಿ ಅವರಿಂದ ಸಮಾಜಕ್ಕೆೆ ನೆರವು ಸಿಗುವಂತೆ ಮಾಡುತ್ತಿಿರುವ ಪ್ರತಿಷ್ಠಾಾನದ ಕಾರ್ಯ ಶ್ಲಾಾಘನೀಯ ಎಂದು ಹೇಳಿದರು
ಮುಂಬೈ ಜ್ಯೋೋತಿ ಕೋ-ಆಪರೆಟಿವ್‌ನ ಕಾರ್ಯಾಧ್ಯಕ್ಷ ಗಿರೀಶ್ ಬಿ.ಸಾಲ್ಯಾಾನ್, ಶ್ರೀ ವೀರನಾರಾಯಣ ದೇವಸ್ಥಾಾನ ಜೀರ್ಣೋದ್ಧಾಾರ ಸಮಿತಿಯ ಅಧ್ಯಕ್ಷ ಎ.ದಾಮೋದರ್, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘುಮೂಲ್ಯ ಪಾದೆಬೆಟ್ಟು, ಮುಂಬೈಯ ಉದ್ಯಮಿಗಳಾದ ಡಾ ಸುರೇಖಾ ರತನ್ ಕುಲಾಲ್, ಜಗದೀಶ್ ಬಂಜನ್, ಮತ್ತು ಲೋಕನಾಥ ಶೆಟ್ಟಿಿ, ರಮಾನಂದ ಬಂಗೇರ ನಾಸಿಕ್, ಅಶೋಕ್ ಮೂಲ್ಯ ಧಾಣೆ, ಸುಕುಮಾರ್ ಬಂಟ್ವಾಾಳ, ಕುಲಾಲ ಪ್ರತಿಷ್ಠಾಾನದ ಆಡಳಿತ ಟ್ರಸ್ಟಿಿ ಬಿ.ಸುರೇಶ್ ಕುಲಾಲ್, ಟ್ರಸ್ಟಿಿಗಳಾದ ಮಾಸ್ಟರ್ ಬಿ.ಸೀತಾರಾಮ ಕುಲಾಲ್, ಬಿ.ನಾಗೇಶ್ ಕುಲಾಲ್, ನ್ಯಾಯವಾದಿ ಲಕ್ಷ್ಮಣ್ ಕುಂದರ್ ಉಪಸ್ಥಿಿತರಿದ್ದರು. ಟ್ರಸ್ಟಿಿಗಳಾದ ದಿನೇಶ್ ಕುಲಾಲ್ ಮತ್ತು ಪ್ರೇಮಾನಂದ್ ಕೋಡಿಕಲ್ ಸ್ವಾಾಗತಿಸಿದರು. ನವೀನ್ ಪುತ್ತೂರು ಮತ್ತು ಪ್ರವೀಣ್ ಬಸ್ತಿಿ ಕಾರ್ಯಕ್ರಮ ನಿರ್ವಹಿಸಿದರು.


ಆರ್ಥಿಕ ಸಹಾಯ, ಸಾಧಕರಿಗೆ ಸಮ್ಮಾಾನ
ಕುಲಾಲ ಸಮಾಜದ 25 ಮಂದಿ ಅಶಕ್ತರಿಗೆ ಆರ್ಥಿಕ ಸಹಾಯ ವಿತರಿಸಲಾಯಿತು. ಕುಲಾಲ ಸಮಾಜದ 25 ಸಾಧಕರಿಗೆ ‘ಕುಲಾಲ ಸಾಧಕ ಪ್ರಶಸ್ತಿಿ’ ಪ್ರದಾನ ಮಾಡಲಾಯಿತು. ಸಂಗೀತ ನೃತ್ಯ, ಕಿರುನಾಟಕ ನಡೆಯಿತು. ಕುಲಾಲ ಪರ್ಬದಲ್ಲಿ ಕುಲಾಲ ಸಮಾಜದ ಪ್ರತಿಭೆಗಳ ಅನಾವರಣಗೊಂಡಿತು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *