
ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಸತತ 9 ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ.



ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಅವರು ದೇಶದ ರೈತರಿಗೆ ಉಡುಗೊರೆಯನ್ನು ಘೋಷಿಸಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಶೇಷ ಗಮನ ನೀಡಬೇಕು ಎಂದು ಅವರು ಹೇಳಿದ್ದಾರೆ. ಉತ್ಪಾದಕತೆಯನ್ನು ಹೆಚ್ಚಿಸಲು ಹಣಕಾಸು ಸಚಿವರು ತೆಂಗಿನಕಾಯಿ ಉತ್ಪಾದನಾ ಯೋಜನೆಯನ್ನು ಘೋಷಿಸಿದರು. 1 ಕೋಟಿ ರೈತರು ತಮ್ಮ ಜೀವನೋಪಾಯಕ್ಕಾಗಿ ತೆಂಗಿನಕಾಯಿಯನ್ನು ಅವಲಂಬಿಸಿದ್ದಾರೆ ಎಂದು ಅವರು ಹೇಳಿದರು.
ಕಚ್ಚಾ ಗೋಡಂಬಿ ಮತ್ತು ತೆಂಗಿನಕಾಯಿ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ವಿಶೇಷ ಕಾರ್ಯಕ್ರಮವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. 2030 ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಕೋಕೋವನ್ನು ಜಾಗತಿಕ ಪ್ರೀಮಿಯಂ ಬ್ರ್ಯಾಂಡ್ಗಳಾಗಿ ಪರಿವರ್ತಿಸುವುದು ಗುರಿಯಾಗಿದೆ.


ಶ್ರೀಗಂಧವು ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಆಳವಾಗಿ ಬೇರೂರಿದೆ ಎಂದು ಅವರು ಹೇಳಿದರು. ಭಾರತೀಯ ಶ್ರೀಗಂಧದ ಮರದ ಪ್ರತಿಷ್ಠೆಯನ್ನು ಪುನಃಸ್ಥಾಪಿಸಲು ಅದರ ಕೃಷಿ ಮತ್ತು ಸಂಸ್ಕರಣೆಯನ್ನು ಉತ್ತೇಜಿಸಲು ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತದೆ.

ಹಳೆಯ ಮತ್ತು ಕಡಿಮೆ ಇಳುವರಿ ನೀಡುವ ತೋಟಗಳನ್ನು ಪುನರುಜ್ಜೀವನಗೊಳಿಸಲು ಮತ್ತು ವಾಲ್ನಟ್, ಬಾದಾಮಿ ಮತ್ತು ಪೈನ್ ಬೀಜಗಳ ಸುಧಾರಿತ ಕೃಷಿಯನ್ನು ಉತ್ತೇಜಿಸಲು ವಿಶೇಷ ಕಾರ್ಯಕ್ರಮವನ್ನು ಹಣಕಾಸು ಸಚಿವರು ಘೋಷಿಸಿದರು. ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಯುವಕರನ್ನು ತೊಡಗಿಸಿಕೊಳ್ಳುವ ಮೂಲಕ ಈ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸುತ್ತದೆ.
ಎಲ್ಲಾ ವರ್ಗದವರಿಗಾಗಿ ಬಜೆಟ್ ತಯಾರಿಸಲಾಗಿದೆ. ಕುಟುಂಬಳಿಗೆ ಹೆಚ್ಚಿನ ಹಣ ಸಿಗುವಂತೆ ವಿಕಸತಿ ಭಾರತದ ಗುರಿ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬಡತನ ನಿರ್ಮೂಲನೆ ಮಾಡುವ ಕಾರ್ಯ ಮಾಡಿದ್ದೇವೆ. ಶೇ.7 ರಷ್ಟು ಅಭಿವೃದ್ಧಿ ಹೊಂದಿದ್ದೇವೆ. ಮೋದಿ ಅವರು ವಿಕಸಿತ ಭಾರತಕ್ಕೆ ಕರೆ ಕೊಟ್ಟಿದ್ದಾರೆ. ಭಾರತ ಜಗತ್ತಿನ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ ಎಂದರು.
ಖನಿಜ ಸಮೃದ್ಧವಾಗಿರುವ ರಾಜ್ಯಗಳಿಗೆ ಕಾರಿಡಾರ್ ಸ್ಥಾಪನೆ ಮಾಡಲಾಗುತ್ತದೆ. ಕೇಂದ್ರದ ಔಷಧ ಸಾಮಾರ್ಥ್ಯವನ್ನು ಹೆಚ್ಚಿಸಲಾಗುವುದು, ಮೋದಿ ಅವರು ವಿಕಸಿತ ಭಾರತಕ್ಕೆ ಕರೆಕೊಟ್ಟಿದ್ದು, 2047ರ ಗುರಿಯನ್ನು ಮೋದಿ ಇಟ್ಟುಕೊಂಡಿದ್ದಾರೆ.
ಸೆಮಿಕಂಡಕ್ಟರ್ ಮಿಷನ್ ಗೆ 40 ಸಾವಿರ ಕೋಟಿ ರೂ. ಘೋಷಣೆ ಮಾಡಲಾಗುವುದು. ತಮಿಳುನಾಡು, ಆಂಧ್ರ, ಓಡಿಶಾ, ಕೇರಳಕ್ಕೆ ಬಂಪರ್ ಘೋಷಣೆ ಮಾಡಲಾಗಿದೆ.
ಮಹಾತ್ಮಾ ಗಾಂಧಿ ಗ್ರಾಮ್ ಸ್ವರಾಜ್ಯ ಆರಂಭಿಸಲಾಗುವುದು. ಒನ್ ಪ್ರೊಡಕ್ಟ್ ಒನ್ ಸ್ಟೇಟ್ ಯೋಜನೆ ಆರಂಭಿಸಲಾಗುವುದು, ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲು. ಕ್ರೆಡಿಟ್ ಗ್ಯಾರಂಟಿ ಸಪೋರ್ಟ್ ವ್ಯವಸ್ಥೆ ಜಾರಿ, ಹಣಕಾಸು ಹಂಚಿಕೆಗೆ ಕ್ರೆಡಿಟ್ ಗ್ಯಾರಂಟಿ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಸಾಲದ ನೆರವು ಘೋಷಿಸಲಾಗಿದೆ. ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕೇಂದ್ರೀಯ ಔಷಧಿ ನಿಯಂತ್ರಣವನ್ನು ಜಾರಿಗೆ ತರುತ್ತಿದ್ದೇವೆ. ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆ ಬಲಪಡಿಸಲು ಬಯೋಫಾರ್ಮ್ ಶಕ್ತಿ ಯೋಜನೆ ಘೋಷಿಸಲಾಗಿದೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ ಎಂದು ಹೇಳಿದ್ದಾರೆ.
AI ಮಿಷನ್ ಮೂಲಕ ದೇಶದಲ್ಲಿ ದೊಡ್ಡ ಕ್ರಾಂತಿ, ವಿದ್ಯಾರ್ಥಿಗಳು, ರೈತರಿಗೆ ಇದರಿಂದ ಅನುಕೂಲವಾಗಲಿದೆ. ಹೊಸದಾಗಿ 3 ಏಮ್ಸ್ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಮಧುಮೇಹ, ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ ಮಾಡಲಾಗುವುದು, ಪ್ರತಿ ಜಿಲ್ಲೆಗಳಲ್ಲೂ ಬಾಲಕಿಯರ ಹಾಸ್ಟೆಲ್ ನಿರ್ಮಾಣ ಎಂದು ಹೇಳಿದ್ದಾರೆ.
ಕ್ರೀಡಾ ವಲಯದಲ್ಲಿ ಸಾಕಷ್ಟು ಉದ್ಯೋಗ ಸೃಷ್ಠಿಗೆ ಖೇಲೋ ಇಂಡಿಯಾ ಮೀಷನ್ ಆರಂಭಿಸಲಾಗುವುದು,ತೆಂಗು ಕೃಷಿ ಅಭಿವೃದ್ಧಿ ನೂತನ ಯೋಜನೆ ಘೋಷಿಸಲಾಗಿದೆ. ತೆಂಗಿನಕಾಯಿ ಬೆಳೆ, ಸಂಸ್ಕರಣೆ, ರಫ್ತಿಗೆ ಒತ್ತು ನೀಡಲಾಗುವುದು. ವಿದೇಶಿ ಹೂಡಿಕೆದಾರರಿಗೆ ಸಿಹಿಸುದ್ದಿ, ಭಾರತದಲ್ಲಿ ಹೂಡಿಕೆ ಮಾಡಲು ಅನುಕೂಲ ಮಾಡಲಾಗುವುದು.ಮಹಿಳೆಯರಿಗಾಗಿ `SHE ಮಾರ್ಟ್’ ಗ್ರಾಮೀಣ ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬಜೆಟ್ ಪಾರ್ಟ್ ಬಿ
ದೇಶದಲ್ಲಿ ಏಪ್ರಿಲ್ ನಿಂದ ನೂತನ ಐಟಿ ಕಾಯ್ದೆ ಜಾರಿಗೆ ಬರಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ವಿದೇಶ ಯಾತ್ರೆ ಇನ್ಮುಂದೆ ಅಗ್ಗವಾಗಲಿದೆ. ಐಟಿ ರಿಟರ್ನ್ ಮಾಡಲು ಜುಲೈ 31ರವರೆಗೆ ಅವಕಾಶ. ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶೇ. 100 ರಷ್ಟು ದಂಡ. ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮೋಟಾರು ಆಕ್ಸಿಡೆಂಟ್ ಕ್ಲೇಮುಗಳಿಗೆ ತೆರಿಗೆ ಇಲ್ಲ. ಶಿಕ್ಷಣ, ಆರೋಗ್ಯ, ಕ್ಷೇತ್ರದಲ್ಲಿ ಶೇ. 2 ರಷ್ಟು TCS ಕಡಿತ ಮಾಡಲಾಗುವುದು ಎಂದು ಹೇಳಿದ್ದಾರೆ.
ಯಾವ ವಸ್ತುಗಳ ಬೆಲೆ ಇಳಿಕೆ? ಯಾವ ವಸ್ತುಗಳ ಬೆಲೆ ಏರಿಕೆ
ಮದ್ಯ ಪ್ರಿಯರಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಮದ್ಯದ ಬೆಲೆಯಲ್ಲಿ ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಬೀಡಿ, ಪಾದರಕ್ಷೆ, ಬ್ಯಾಟರಿ ದರ ಇಳಿಕೆಯಾಗಿದೆ.
ಕ್ಯಾನ್ಸರ್ ನ 17 ಔಷಧಿಗಳ ಬೆಲೆಯಲ್ಲಿ ಇಳಿಕೆಯಾಗಿದೆ.
ಸಿಗರೇಟ್ ಬೆಲೆ ಏರಿಕೆ
ವಿಮಾನದ ಬಿಡಿ ಭಾಗ ಏರಿಕೆ
7 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆ ಇಳಿಕೆ. ಕ್ಯಾನ್ಸರ್ಗೆ ಸಂಬಂಧಿಸಿದ 17 ಪ್ರಮುಖ ಔಷಧಗಳ ಮೇಲಿನ ತೆರಿಗೆ ಕಡಿತ ಮಾಡಲಾಗಿದೆ.

