
Read Time:56 Second
ಮಂಗಳೂರು ಹೊರವಲಯದಲ್ಲಿ ಯುವಕನ ಮೇಲೆ ತಲವಾರು ದಾಳಿ ನಡೆದಿದೆ. ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಮೇಲೆ ದಾಳಿ ನಡೆದಿದೆ. ದಾಳಿಯಿಂದಾಗಿ ಅಖಿಲೇಶ್ ಅವರ ಕೈಗೆ ತರಚಿದ ಗಾಯಗಳಾಗಿವೆ.



ಮೊಬೈಲ್ ನಲ್ಲಿ ಬೈಕ್ ನಲ್ಲಿ ತಲವಾರು ಹಿಡಿದು ಸಾಗುತ್ತಿದ್ದವರನ್ನು ಅಖಿಲೇಶ್ ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದರು. ವಿಡಿಯೋ ಮಾಡಿದ್ದನ್ನು ಆಕ್ಷೇಪಿಸಿ ಅಖಿಲೇಶ್ ಮೇಲೆ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳಿಂದ ದಾಳಿ ನಡೆದಿದೆ.
ಗಾಯಗೊಂಡ ಅಕಿಲೇಶ್ ಮೂಡಬಿದ್ರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ತೆರಳಿ ಬಜಪೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.



