ಇಂದು ಮಂಗಳೂರಿನ ಪುರಭವನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ‘ಪಂಚಮ ವಾರ್ಷಿಕ ಸಂಭ್ರಮ’

0 0
Read Time:1 Minute, 39 Second

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಇದರ ಮಂಗಳೂರು ನಗರ ಘಟಕದ ‘ಪಂಚಮ ವಾರ್ಷಿಕ ಸಂಭ್ರಮ’ವು ಇಂದು (ದಿನಾಂಕ 23-05-2024) ರಂದು ಸಂಜೆ ಗಂಟೆ 3-00ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.

ಸಂಜೆ ಗಂಟೆ 3-00ರಿಂದ ‘ಯಕ್ಷ ಹಾಸ್ಯ ವೈಭವ’ದಲ್ಲಿ ಭಾಗವತರಾಗಿ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಮದ್ದಳೆ – ಶ್ರೀ ಗುರುಪ್ರಸಾದ್ ಬೊಳಿಂಜಡ್ಕ, ಚಂಡೆ – ಶ್ರೀ ಪ್ರಶಾಂತ್ ವಗೆನಾಡು, ಚಕ್ರತಾಳ – ಪೂರ್ಣೇಶ್ ಆಚಾರ್ಯ ಮತ್ತು ಮುಮ್ಮೇಳದಲ್ಲಿ ದಿನೇಶ್ ಶೆಟ್ಟಿಗಾರ್ ಕೋಡಪದವು, ದಿನೇಶ್ ರೈ ಕಡಬ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಸುಂದರ್ ಬಂಗಾಡಿ ಇವರುಗಳು ಸಹಕರಿಸಲಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ಜೆಪ್ಪು ಅರೆಕೆರೆಬೈಲ್ ಇಲ್ಲಿನ ಅಂಬಾ ಮಹೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಸೀತಾರಾಮ್ ಎ. ಇವರು ಜ್ಯೋತಿ ಪ್ರಜ್ವಲನೆ ಮಾಡಲಿದ್ದು, ಬಂಟರ ಸಂಘ ಜೆಪ್ಪು ಇದರ ಅಧ್ಯಕ್ಷರಾದ ಲಯನ್ ವಸಂತ್ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿಶು ಶೆಟ್ಟಿ ಅಂಬಲಪಾಡಿ ಇವರಿಗೆ ‘ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ರಜ ಕ್ಷೇತ್ರ ಪಾವಂಜೆ ಇವರು ‘ಅಯೋಧ್ಯಾ ದೀಪ’ ಎಂಬ ಯಕ್ಷಗಾನ ಬಯಲಾಟವನ್ನು ಪ್ರಸ್ತುತ ಪಡಿಸಲಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *