
Read Time:1 Minute, 5 Second
ಮಂಗಳೂರು: ಪಬ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಾಲ್ವರನ್ನು ಬಂಧಿಸಿರುವ ಘಟನೆ ಪಾಂಡೇಶ್ವರದಲ್ಲಿ ನಡೆದಿದೆ.


ಬಂಧಿತ ಆರೋಪಿಗಳನ್ನು ಪುತ್ತೂರಿನ ವಿನಯ (33), ಮಹೇಶ್ (27), ಪ್ರಿತೇಶ್ (34) ಹಾಗೂ ನಿತೇಶ್ (33) ಎಂದು ಗುರುತಿಸಲಾಗಿದೆ. ಮಂಗಳೂರಿನ ಪಾಂಡೇಶ್ವರ ಫೋರಮ್ ಮಾಲ್‌ನಲ್ಲಿರುವ ಶೆರ್‌ಲ್ಯಾಕ್ ಪಬ್‌ನಲ್ಲಿ ಘಟನೆ ನಡೆದಿತ್ತು. ಸ್ನೇಹಿತೆಯೊಂದಿಗೆ ಪಬ್‌ಗೆ ಬಂದಿದ್ದ ಯುವತಿಯ ಮಾನಭಂಗ ಯತ್ನ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು ಬಿಯರ್ ಬಾಟ್ಲಿಯಲ್ಲಿ ಹಲ್ಲೆ ನಡೆಸಲು ನಾಲ್ವರು ಯತ್ನಿಸಿದ್ದರು.
ಆರೋಪಿಗಳನ್ನು ಬಂಧಿಸಲಾಗಿದ್ದು, ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಾಂಡೇಶ್ವರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.

