
ಬೆಂಗಳೂರು: ”ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ” ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ರವರ ಪ್ರಧಾನ ಸಂಪಾದಕತ್ವದ 2ನೇ ಆವೃತ್ತಿ ಹಿರಿಯ ಸಾಹಿತಿಗಳಾದ ಶ್ರೀಮತಿ ಸುನಂದಮ್ಮ ಹಾಗು ಶ್ರೀ ವಸುಧೇಂದ್ರ ಮತ್ತು ರಾಜ್ಯ ಐಎಂಏ ಗಣ್ಯರಿಂದ ಅದ್ದೂರಿ ಬಿಡುಗಡೆಗೊಂಡಿತು.



ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿ ಯ ವಿಶ್ರಾಂತ ಕುಲ ಸಚಿವರು ಮತ್ತು ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ:ಆರ್ ಸುನಂದಮ್ಮ,ಖ್ಯಾತ ಕಥೆಗಾರ ಪ್ರಕಾಶಕ ಶ್ರೀ ವಸುಧೇಂದ್ರ, ಡಾ:ಆರ್ಕೆ.ಸರೋಜಾ, ಡಾ:ಸೂರಿ ರಾಜು,ಪ್ರಧಾನ ಸಂಪಾದಕರು ಡಾ: ಅಣ್ಣಯ್ಯ ಕುಲಾಲ್ ಉಲ್ತೂರು & ಅಧ್ಯಕ್ಷತೆ ಡಾ: ಟಿ ಎ.ವೀರಭದ್ರಯ್ಯ ಐಎಂಏ ರಾಜ್ಯಾ ಧ್ಯಕ್ಷರು, ಶ್ರೀ ರತೀಶ್,”ಅರಿವು ಬುಕ್ಸ್ “ಪ್ರಕಾಶಕರು, ಸಂಪಾದಕರುಗಳಾದ ಶ್ರೀ ಶಿವಾನಂದ ಕುಬಸದ್, ಡಾ: ಹೆಚ್ ಎಸ್ ಮೋಹನ್, ಡಾ. ಶಿವರಾಜ್ ಪಾಟೀಲ್, ವೈದ್ಯ ಬರಹಗಾರರ ಬಳಗದ ಡಾ:ಇಂದಿರಾ ದೊಡ್ಡಬಳ್ಳಾಪುರ, ಮುಂತಾದವರು ಉಪಸ್ಥಿತರಿದ್ದು ರಾಜ್ಯ ಹಾಗು ರಾಷ್ಟ್ರ ಮಟ್ಟದ ಅನುಭವ ಆಧಾರಿತ ಚೊಚ್ಚಲ ವೈದ್ಯಕೀಯ ಪುಸ್ತಕದ ಬಗ್ಗೆ ಚಿಂತನ ಮಂಥನ ನಡೆಯಿಸಿದರು.ನಾಡಿನ ಮೂಲೆ ಮೂಲೆಯಿಂದ ಬಂದಿರುವ ಹಿರಿಯ ವೈದ್ಯಸಾಹಿತಿಗಳ ಜೊತೆ ಕಿರಿಯ ವೈದ್ಯರು ಹಾಗು ಬರಹಗಾರರು ಸಂವಾದ ನಡೆಯಿಸಿ ವೈದ್ಯಕೀಯ ವೃತ್ತಿಯ ನೋವು ನಲಿವು ಕಷ್ಟ ಸುಖ ಜಂಜಾಟಗಳ ಬಗ್ಗೆ ತೆರೆದು ಕೊಂಡರು.
2 ವರ್ಷಗಳ ಹಿಂದೆ , ಅನೇಕ ವೈದ್ಯರು ಬರೆದ ೧ನೇ ಆವೃತ್ತಿ ಬಿಡುಗಡೆಗೊಂಡೂ, ಸಫಲತೆ ಕಂಡಿತ್ತು. ಅಂದು 20ಮಂದಿ ಬರೆದಿದ್ದರು, ಈ ಬಾರಿ ೮೩ ಜನ ವೈದ್ಯ ಸಮೂಹ ಬರೆದ ತಮ್ಮ ಅದ್ಭುತ ಅನುಭವ ಗಳನ್ನು, ಸಾಹಿತ್ಯದ, ಭಾಷೆಯ, ಅನುಭಾವದ, ಅಭಿವ್ಯಕ್ತಿಯ ವಿಧಾನ,ಅಭಿರುಚಿ,ವೈದ್ಯ ರ ಜೀವ, ಜೀವನ, ಜಯ ಜಂಜಾಟಗಳ ಒಳನೋಟ , ಶಾಸ್ತ್ರ, ವೃತ್ತಿಪರತೆ, ವಿಮರ್ಶೆ, ಉದಾಹರಣೆ, ಸಂತೋಷ, ಇಡೀ ಸಾಹಿತ್ಯ ದ ಪರಿಕಲ್ಪನೆ, ದುಗುಡವನ್ನೂ ಈ ೪೪೦ ಪುಟದ ಅಮೋಘ ಈ ೨ನೇಆವೃತ್ತಿಯ “ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ” ಗ್ರಂಥದಲ್ಲಿ ದಾಖಲಿಸ ಲಾಗಿದೆ” ಸಹೃದಯರು ಕೊಂಡು ಓದಿ, ವೈದ್ಯಕೀಯ ಜ್ಞಾನ ಹಾಗು ಜನಜಾಗೃತಿ ಮೂಡಿಸಿ ಸಹಕರಿಸಿ ರೆಂದು” ಪ್ರಧಾನ ಸಂಪಾದಕರಾದ ಡಾ ಕುಲಾಲ್ ಕೋರುತ್ತಾ, ಈ ಎರಡೂ ಪುಸ್ತಕಗಳನ್ನ ಆರೋಗ್ಯ ಜಾಗೃತಿಗಾಗಿ ಮಾಡಲಾಗಿದ್ದು, ಇದರಿಂದ ಸಿಗುವ ರಾಯಧನವನ್ನ ( ರಾಯಲ್ಟಿ) ಐಎಂಎ ಯ ಸಮಾಜ ಮುಖಿ ಕೆಲಸಕ್ಕಾಗಿ ನೀಡಲು ತೀರ್ಮಾನಿಸಿ ಘೋಷಿಸಿ ಚೆಕ್ ಹಸ್ತಾಂತರ ಮಾಡಿದರು. ಮುಂದೆ ವೈದ್ಯಕೀಯ ಶಿಕ್ಷಣ, ಕಿರಿಯ ವೈದ್ಯವಿದ್ಯಾರ್ಥಿಗಳ ಸಮಸ್ಯೆಗಳ , ವೈದ್ಯರ ಮೇಲಿನ ದೌರ್ಜನ್ಯ ಮತ್ತು ಕಾನೂನುಗಳ ಬಗೆಯೂ ಒಂದು ಪುಸ್ತಕ ಬರೆಯಬೇಕು ಎಂಬ ಕೋರಿಕೆಗೆ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಬೆಂಗಳೂರಿನಂತೆ ನಾಡಿನ ಹತ್ತಾರು ಕಡೆ ಇದೇ ರೀತಿ ಪುಸ್ತಕ ಬಿಡುಗಡೆ ಹಾಗು ಸಾರ್ವಜನಿಕ ಸಂವಾದ ಕಾರ್ಯಕ್ರಮ ಜರುಗಿಸುವ ಚಿಂತನೆ ಇದೆ ಎಂದು ತಿಳಿಸಿ ಸಹಕಾರಕ್ಕಾಗಿ ವಂದಿಸಿದರು.


ಸಭೆಯನ್ನು ಉದ್ದೇಶಿಸಿ ಎಲ್ಲ ಗಣ್ಯರು, ಅತಿಥಿಗಳು, ವೈದ್ಯರು ಅನಿಸಿಕೆಗಳನ್ನು ಹಂಚಿಕೊಂಡರು.

ಪ್ರದಾನ ಸಂಪಾದಕರು, ಡಾ: ಅಣ್ಣಯ್ಯ ಕುಲಾಲ್ ಉಲ್ತೂರು ತಮ್ಮ ಮನೋಜ್ಞ ಅಭಿರುಚಿಗಳನ್ನು, ಅನುಭವಗಳನ್ನು, ಯೋಜನೆಗಳನ್ನು ಹಂಚಿಕೊಂ ಡರು, ಮತ್ತು ” ಪುಸ್ತಕ ಮಾರಾಟದ ಲಾಭ ವನ್ನು ಸಹ ಐಎಂಏ ಗೇ ಸಲ್ಲಿಸಲಾಗಿದೆ” ಎಂದರು.
ಅಮೋಘ ಕಾರ್ಯಕ್ರಮವನ್ನು ಶ್ರಮವಹಿಸಿ, ಸಂತೋಷದಿಂದ ನಡೆಸಿಕೊಟ್ಟ ಎಲ್ಲರನ್ನೂ “ಕನ್ನಡ ವೈದ್ಯ ಬರಹಗಾರರ ಸಮಿತಿ” ಹೃದಯ ಪೂರ್ವಕ ಶ್ಲಾಘಿಸಲಾಯಿತು.

