ಇನ್ಮುಂದೆ ಮೊಬೈಲ್‌ನಿಂದ ಸಿಮ್ ತೆಗೆದರೆ ವಾಟ್ಸಪ್ ಸ್ಥಗಿತ!

0 0
Read Time:4 Minute, 29 Second

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಲ್ಲಿ ಯಾವುದೇ ಒಂದು ಸಂದೇಶ ಅಥವಾ ಮೇಲ್ ಬಂದಾಗ ಆದಷ್ಟು ಜಾಗರೂಕರಾಗಿರಬೇಕು. ಅಪ್ಪಿತಪ್ಪಿಯೂ ಎಡವಟ್ಟಾದರೆ ನಿಜಕ್ಕೂ ಬೆಲೆ ತೆರಬೇಕಾಗುತ್ತದೆ.

ನಾವೆಲ್ಲರೂ ತುಂಬಾ ಕಡೆ ನೋಡಿರುತ್ತೇವೆ ಅಲ್ಲದೆ ಅದು ನಮ್ಮ ಅನುಭವಕ್ಕೂ ಬಂದಿರುತ್ತದೆ. ಸಾಮಾನ್ಯವಾಗಿ ಮೊಬೈಲ್‌ನಿಂದ ಸಿಮ್‌ನ್ನು ಹೊರತೆಗೆದಾಗ ವೈಫೈ ಮೂಲಕ ವಾಟ್ಸಪ್ ಬಳಸಬಹುದು. ಜೊತೆಗೆ ಟೆಲಿಗ್ರಾಂ ಅನ್ನು ಕೂಡ ಒಂದು ಬಾರಿ ಲಾಗಿನ್‌ ಆದರೆ ಸಿಮ್ ಇಲ್ಲದೆ ಬಳಸಬಹುದು. ಇದೀಗ ದೂರ ಸಂಪರ್ಕ ಇಲಾಖೆ ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್, ಸ್ನಾಪ್ ಚಾಟ್, ಶೇರ್ ಚಾಟ್ ಸೇರಿದಂತೆ ಹೆಚ್ಚಿನ ಆಪ್‌ಗಳು ಮೊಬೈಲ್‌ನಲ್ಲಿ ಸಿಮ್ ಇದ್ದರೆ ಮಾತ್ರ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಸೂಚಿಸಿದೆ.

ನಿಮ್ಮ ಮೊಬೈಲ್‌ನಲ್ಲಿರುವ ಸಿಮ್‌ಅನ್ನು ಹೊರತೆಗೆದಾಗ ವಾಟ್ಸಪ್, ಟೆಲಿಗ್ರಾಂ ಸೇರಿದಂತೆ ಇನ್ನಿತರ ಆಪ್ ಗಳು ಮೊಬೈಲ್ ಇಂಟರ್ನೆಟ್ ಇಲ್ಲದೆ ವೈಫೈ ಮೂಲಕ ಕಾರ್ಯನಿರ್ವಹಿಸುತ್ತವೆ. ಇನ್ನು ಮುಂದೆ ಮೊಬೈಲ್ ನಲ್ಲಿ ಸಿಮ್ ಇಲ್ಲದಿದ್ದರೆ ಈ ಕೆಲವು ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಇದೇ ವಿಷಯವಾಗಿ ಸರ್ಕಾರ ಹೊಸ ಬದಲಾವಣೆಯೊಂದನ್ನು ತರುತ್ತಿದೆ. ಇದನ್ನೇ ಸಿಮ್ ಬೈಂಡಿಂಗ್ ಎಂದು ಕರೆಯಲಾಗುತ್ತದೆ.

ವಾಟ್ಸಪ್‌, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್‌ಚಾಟ್, ಶೇರ್‌ಚಾಟ್, ಜಿಯೋಚಾಟ್, ಅರಟ್ಟೈ ಮತ್ತು ಜೋಶ್‌ನಂತಹ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಆರಂಭದದಲ್ಲಿ ಸಿಮ್‌ ಮೂಲಕ ಒಟಿಪಿ ಪಡೆದು ಲಾಗಿನ್‌ ಆಗುತ್ತದೆ. ಒಂದು ಬಾರಿ ಲಾಗಿನ್‌ ಆದ ಬಳಿಕ ಸಿಮ್‌ ಕಾರ್ಡ್‌ ಮೊಬೈಲ್‌ನಲ್ಲಿ ತೆಗೆದರೂ ಅದು ಸಕ್ರಿಯವಾಗಿರುತ್ತದೆ.

ಈ ರೀತಿ ಸಿಮ್‌ ಸಕ್ರಿಯವಾಗಿರುವುದು ಸೈಬರ್‌ ಅಪರಾಧ ಕೃತ್ಯಗಳಿಗೆ ಬಳಕೆಯಾಗುತ್ತಿರುವುದು ಕೇಂದ್ರದ ಗಮನಕ್ಕೆ ಬಂದಿದೆ. ಭಾರತದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧಿಗಳು, ಸಿಮ್‌ಗಳನ್ನು ಬದಲಾಯಿಸಿದ ಅಥವಾ ನಿಷ್ಕ್ರಿಯಗೊಳಿಸಿದ ನಂತರವೂ ಈ ಅಪ್ಲಿಕೇಶನ್‌ಗಳನ್ನು ಬಳಸಿ ಕೃತ್ಯ ಎಸಗುತ್ತಿದ್ದಾರೆ. ಇದರಿಂದಾಗಿ ಕರೆ ದಾಖಲೆಗಳು, ಸ್ಥಳ ದಾಖಲೆಯ ಮೂಲಕ ವಂಚನೆಯ ಚಟುವಟಿಕೆಯನ್ನು ಪತ್ತೆಹಚ್ಚುವುದು ಅಸಾಧ್ಯವಾಗಿದೆ. ಈ ಕೃತ್ಯಗಳನ್ನು ತಡೆಗಟ್ಟಲು ಸರ್ಕಾರ ನಿಯಮವನ್ನು ಬಿಗಿಗೊಳಿಸುತ್ತಿದೆ.

ಬಳಕೆದಾರರ ಮೊಬೈಲ್‌ನಲ್ಲಿ ಸಕ್ರಿಯವಾಗಿರುವ ಸಿಮ್‌ ಇದ್ದಾಗ ಮಾತ್ರ ವಾಟ್ಸಪ್‌ ಸೇರಿದಂತೆ ಆ್ಯಪ್‌ ಆಧಾರಿತ ಸಂವಹನ ಸೇವೆ ಕಾರ್ಯನಿರ್ವಹಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಕುರಿತಂತೆ 120 ದಿನಗಳೊಳಗಾಗಿ ದೂರಸಂಪರ್ಕ ಇಲಾಖೆಗೆ(DoT) ಅನುಪಾಲನಾ ವರದಿಯನ್ನು ಸಲ್ಲಿಸಬೇಕು. ವರದಿ ಸಲ್ಲಿಸಲು ವಿಫಲವಾದಲ್ಲಿ ದೂರಸಂಪರ್ಕ ಕಾಯ್ದೆ 2023, ಟೆಲಿಕಾಂ ಸೈಬರ್ ಭದ್ರತಾ ನಿಯಮ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆ್ಯಪ್‌ ಆಧಾರಿತ ಕಂಪನಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಹೊಸ ನಿಯಮದಲ್ಲಿ ಏನಿದೆ?

ಹೊಸ ನಿಯಮದ ಅಡಿಯಲ್ಲಿ ಈ ಅಪ್ಲಿಕೇಶನ್‌ಗಳು 90 ದಿನಗಳಲ್ಲಿ ಸಿಮ್ ಕಾರ್ಡ್‌ಗಳು ತಮ್ಮ ಸೇವೆಗಳಿಗೆ ನಿರಂತರವಾಗಿ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಇದರ ಜೊತೆ ವೆಬ್ ಬ್ರೌಸರ್ ಲಾಗಿನ್‌ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿದೆ.

ಹೊಸ ಸಿಮ್-ಬೈಂಡಿಂಗ್ ಪದ್ಧತಿಯಡಿಯಲ್ಲಿ, ಬಳಕೆದಾರರು ಸಿಮ್-ಬೌಂಡ್ ಮೊಬೈಲ್ ಫೋನ್ ಮೂಲಕ ಸೆಷನ್ ಅನ್ನು ಮರುಪರಿಶೀಲಿಸದ ಹೊರತು, ಈ ಡೆಸ್ಕ್‌ಟಾಪ್ ಸೆಷನ್‌ಗಳನ್ನು ಪ್ರತಿ ಆರು ಗಂಟೆಗಳಿಗೊಮ್ಮೆ ಬಲವಂತವಾಗಿ ಲಾಗೌಟ್‌ ಮಾಡಲಾಗುತ್ತದೆ. ಅಂದರೆ ಪ್ರತಿ ಆರು ಗಂಟೆಗಳಿಗೊಮ್ಮೆ, ಬಳಕೆದಾರರು QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತೊಮ್ಮೆ ಲಾಗಿನ್‌ ಆಗಬೇಕಾಗುತ್ತದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *