
ಮಂಗಳೂರು: ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ನ ಮೂಲಕ ಕಳೆದ 12 ವರ್ಷಗಳಿಂದ ಸೇವಾ ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಟ್ರಸ್ಟ್ ನ ವತಿಯಿಂದ ನಡೆಸಲ್ಪಡುವ ಎರಡನೇ ಸೇವಾ ಯೋಜನೆ ದಾಸ್ ಒಲ್ಡ್ ಏಜ್ ಹೆಲ್ತ್ ಕೇರ್ ಹೋಂ ಇದೀಗ ಕುಡುಪುವಿನ ಕಮಲ ನಿವಾಸ ಕಟ್ಟಡದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನ್ ದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಮಾಣಿಲ ಇವರ ದಿವ್ಯ ಆಶೀರ್ವಚನದೊಂದಿಗೆ ಹಾಗೂ ಜಿಲ್ಲಾ ಲಯನ್ಸ್ ಗವರ್ನರ್ ಶ್ರೀ ಬಿ ಎಂ ಭಾರತಿರವರ ದಿವ್ಯ ಹಸ್ತದಲ್ಲಿ ಉದ್ಘಾಟನೆಗೊಂಡಿತು.


ಜಿಲ್ಲಾ ಲಯನ್ಸ್ ಗವರ್ನರ್ ಶ್ರೀ ಬಿ ಎಂ ಭಾರತಿ ಹಾಗೂ ಮುಂತಾದವರ ಉಪಸ್ಥಿತಿಯಲ್ಲಿ ಸಮಾಜ ಸೇವಕ ಹಾಗೂ ಸಾಧನೆಗೈದ ಈಶ್ವರ್ ಮಲ್ಪೆ ಇವರನ್ನು ವಿಶೇಷವಾಗಿ ಸನ್ಮಾನಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಿಎಚ್ಒ ಡಾ.ತಿಮ್ಮಯ್ಯ, ವೀರನಾರಾಯಣ ದೇವಸ್ಥಾನ ಟ್ರಸ್ಟಿ ಪುರುಷೋತ್ತಮ ಕಲ್ಬವಿ, ಪ್ರೇಮಾನಂದ ಕುಲಾಲ್, ಮೆಲ್ವಿನ್ ಡಿಸೋಜ, ಸಂಜಿತ್ ಶೆಟ್ಟಿ, ರೊನಾಲ್ಡ್ ಗೋಮ್ಸ್, ವೇಣಿ ಮರೋಳಿ, ಭಾರತಿ ಶೆಟ್ಟಿ, ಸುಜನ್ ದಾಸ್ ಕುಡುಪು, ರಾಜಕೀಯ ಮುಖಂಡರು ಹಾಗೂ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸಂಸ್ಥೆಯ ಹಿನ್ನೆಲೆ ಮತ್ತು ಇಲ್ಲಿಯವರೆಗೆ ನಡೆಸಿಕೊಂಡು ಬಂದ ಸೇವಾ ಕಾರ್ಯ:

ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಮಂಗಳೂರು ಕಂಕನಾಡಿಯಲ್ಲಿ 2013ರಲ್ಲಿ ಪ್ರಾರಂಭಗೊಂಡು ಸಮಾಜ ಸೇವೆ ಪರಿಕಲ್ಪನೆಯೊಂದಿಗೆ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಾದದೊಂದಿಗೆ ಕಟೀಲ್ ನ ಅನುವಂಶಿಕ ಅರ್ಚಕರಾದ ಶ್ರೀ ಅನಂತಪದ್ಮನಾಭ ಅಷ್ಟಣ್ಣರವರ ದಿವ್ಯ ಆಶೀರ್ವಾದ ಮತ್ತು ನಾಡಿನ ಗಣ್ಯಾದಿಗಣ್ಯ ಮಹಾಶಯರ ಶುಭಾಶೀರ್ವಾದದೊಂದಿಗೆ ಅದ್ದೂರಿಯ ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಕಲಾ ವೈಭವದೊಂದಿಗೆ ನಗರದ ಪುರಭವನದಲ್ಲಿ ಶ್ರೀ ಶ್ರೀ ಶ್ರೀ ಮೋಹನ್ ದಾಸ ಪರಮಹಂಸ ಸ್ವಾಮೀಜಿ ಆಶೀರ್ವಾದದೊಂದಿಗೆ ಚಾಲನೆ ಮಾಡಿದರು.

ಸಮಾಜದಲ್ಲಿರುವ ಹಲವಾರು ಆಶಕ್ತರ ಸೇವೆ, ವೈದ್ಯಕೀಯ ಚಿಕಿತ್ಸಾ ಸಹಾಯಧನ, ಆರೋಗ್ಯವಿಮೆ, ಕಣ್ಣಿನ ಚಿಕಿತ್ಸಾ ಶಿಬಿರ, ಅರೋಗ್ಯ ಶಿಬಿರ, ಮುಂತಾದ ಹಲವಾರು ಸೇವಾ ಚಟುವಟಿಕೆಗಳನ್ನು ಟ್ರಸ್ಟಿನ ಮುಖಾಂತರ ಹಮ್ಮಿಕೊಳ್ಳಲಾಗಿದೆ.
ದಾಸ್ ಚಾರಿಟೇಬಲ್ ಸೇವಾ ಟ್ರಸ್ಟಿನ ಪ್ರಧಾನ ಕಛೇರಿ ನಗರದ ಕಂಕನಾಡಿಯಲ್ಲಿರುವ ಇಂಫೋರಿಂ ಕಮರ್ಷಿಯಲ್ ಕಾಂಪ್ಲೆಕ್ಸ್ ಎರಡನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿದೆ. ಈ ಟ್ರಸ್ಟಿನ ಸಂಸ್ಥಾಪಕದಲ್ಲಿ ಓರ್ವರಾದ ಲಯನ್ ಅನಿಲ್ ದಾಸ್ ಹಾಗೂ ಆಶಾಲತಾ ದಾಸ್ ಮತ್ತು ಮಹೇಶ್ ಕುಮಾರ್, ಕಿರಣ್ ಕುಮಾರ್ ಅಟ್ಟಲೂರ್ ಕಾರ್ಯನಿರ್ವಾಹಕರಾಗಿರುತ್ತಾರೆ. ಸಂಸ್ಥೆ ಯಿಂದ ಸೇವಾ ಯೋಜನೆ ಅಡಿಯಲ್ಲಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಲಯನ್ಸ್ ಸೇವಾ ಸಂಸ್ಥೆ ಸಂಯೋಜನೆಯಲ್ಲಿ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ.
ಕೊರೋನಾ ಸಂದರ್ಭದಲ್ಲಿ ಸಂಸ್ಥೆಯಿಂದ ಉಚಿತ ಅಕ್ಕಿ ವಿತರಣೆ ದವಸಧಾನ್ಯ ವಿತರಣೆ ಹಾಗೂ ಆಸ್ಪತ್ರೆಗಳಲ್ಲಿ ಉಚಿತ ಸೇವೆಯನ್ನು ಸಲ್ಲಿಸುವ ಮೂಲಕ ತನ್ನ ಸೇವಾ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ.

ಮುಂದಿನ ದಿನಗಳಲ್ಲಿ ಸೇವಾ ಯೋಜನೆಯ ಮಹತ್ವದ ಹೆಜ್ಜೆ ಓಲ್ಡ್ ಏಜ್ ಹೆಲ್ತ್ ಕೇರ್ ಹೋಂ ಹಿರಿಯ ನಾಗರಿಕರಿಗೆ ಉಚಿತ ಸೇವೆಯನ್ನು ಕಲ್ಪಿಸುವ ಯೋಜನೆಯಾಗಿದೆ. ಹಾಗೂ ಆರೋಗ್ಯ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ. ತುರ್ತು ಸೇವೆ ಆರೈಕೆ ಮಾಡುವ ವ್ಯವಸ್ಥೆ ಇರುತ್ತದೆ.
ಸೇವೆಯೇ ಪರಮಧ್ಯೇಹದೊಂದಿಗೆ ಇದೀಗ. 2 ನೇ ಅಂಗ ಸಂಸ್ಥೆ ಕುಡುಪು ವಿನ ಕಮಲ ನಿವಾಸದಲ್ಲಿ ಸುಸಜ್ಜಿತವಾದ ವ್ಯವಸ್ಥೆಯೊಂದಿಗೆ ರೋಗಿಗಳ ವೃದ್ಧರ ಆರೈಕೆಯೊಂದಿಗೆ ಸಾಂತ್ವನ ಕೇಂದ್ರವಾಗಿ ಮಾಡಲು ಸಜ್ಜಾಗಿದೆ. ಉತ್ತಮ ವೈದ್ಯರ ತಂಡದೊಂದಿಗೆ ವೈದ್ಯರ ತಂಡದ ಸಲಹೆಸೇವಾ ಜವಾಬ್ದಾರಿ ಇರುವಂತಹ ನಿಷ್ಠಾವಂತ ಸಿಬ್ಬಂದಿಗಳು ನಿರಂತರವಾಗಿ ಸೇವೆಯಲ್ಲಿ ಇರುತ್ತಾರೆ.
