
ಯಲ್ಲಾಪುರ: ಬೆಡಸಗದ್ದೆಯ ಸಮಾನ ಮನಸ್ಕರೆಲ್ಲರೂ ಸೇರಿ ಜಿಲ್ಲಾ ಮಟ್ಟದ `ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ’ ಆಯೋಜಿಸಿದ್ದಾರೆ. ಜನವರಿ 18ರ ಶನಿವಾರ ಮಧ್ಯಾಹ್ನ 3 ಗಂಟೆಗೆ ವನಶ್ರೀ ಕ್ರೀಡಾಂಗಣದಲ್ಲಿ ಈ ಆಟ ಶುರುವಾಗಲಿದೆ. ಹೀಗಾಗಿ ಜನವರಿ 17ಕ್ಕೆ ಹೆಸರು ನೊಂದಾಯಿಸಲು ಕೊನೆ ದಿನ.


ಈ ಆಟದಲ್ಲಿ ಗೆದ್ದ ತಂಡಕ್ಕೆ ಮೊದಲ ಬಹುಮಾನ 10 ಸಾವಿರ ರೂ ಸಿಗಲಿದೆ. ಎರಡನೇ ಬಹುಮಾನ 5 ಸಾವಿರ ರೂ, ಮೂರನೇ ಬಹುಮಾನ 2 ಸಾವಿರ ರೂ ಘೋಷಣೆಯಾಗಿದೆ. ನಾಲ್ಕನೇ ಬಹುಮಾನವಾಗಿ ಆಕರ್ಷಕ ಟ್ರೋಪಿ ನೀಡಲಾಗುತ್ತದೆ. ಇದರೊಂದಿಗೆ ಉತ್ತಮ ಲಿಪ್ಟರ್, ಉತ್ತಮ ಹೊಡೆತಗಾರರನ್ನು ಗುರುತಿಸಿ ಟ್ರೋಪಿ ನೀಡಿ ಗೌರವಿಸಲಾಗುತ್ತದೆ.
ಇನ್ನೂ ಒಂದು ತಂಡದಲ್ಲಿ ಆಡಿದ ಆಟಗಾರರನು ಇನ್ನೊಂದು ತಂಡದಲ್ಲಿ ಭಾಗವಹಿಸುವ ಹಾಗಿಲ್ಲ. ಒಂದೇ ಗ್ರಾ ಪಂ ವ್ಯಾಪ್ತಿಯ ಆಟಗಾರರು ತಂಡದಲ್ಲಿದ್ದು, ಪ್ರತಿಯೊಬ್ಬರು ಆಧಾರ್ ಕಾರ್ಡ ಹೊಂದಿರಬೇಕು. ಆಟಗಾರರು ಊಟದ ವ್ಯವಸ್ಥೆ ಮಾಡಿಕೊಳ್ಳುವಿಕೆ, ಸಮವಸ್ತç ತರುವಿಕೆ ಜೊತೆ ಸಮಯಕ್ಕೆ ಸಹ ಆದ್ಯತೆ ಕೊಡಬೇಕು ಎಂಬ ನಿಯಮಗಳಿವೆ. ಇದರೊಂದಿಗೆ ಪ್ರವೇಶ ತಂಡಕ್ಕೆ 500ರೂ ಶುಲ್ಕವನ್ನು ನಿಗದಿಗೊಳಿಸಲಾಗಿದೆ. ಈ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಇಲ್ಲಿ ಫೋನ್ ಮಾಡಿ: 8904118163, 8050518163 ಅಥವಾ 9071179393

