BJP ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ದೇವದಾಸ್ ಕಾಪಿಕಾಡ್ ಮನೆಗೆ ಭೇಟಿ ನೀಡಿದ್ದು ನಿಜ- ಸತೀಶ್ ಕುಂಪಲ

0 0
Read Time:1 Minute, 41 Second

ಮಂಗಳೂರು: ತುಳು ಚಿತ್ರನಟ ದೇವದಾಸ್ ಕಾಪಿಕಾಡರ ಬಿಜೆಪಿ ಪಕ್ಷ ಸೇರ್ಪಡೆ ವಿವಾದ ಕುರಿತು ಮಾದ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡಿದ  ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು BJP ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಡಿ ದೇವದಾಸ್ ಕಾಪಿಕಾಡ್ ಮನೆಗೆ ಭೇಟಿ ನೀಡಿದ್ದು ನಿಜ. ಪಕ್ಷದ ಸದಸ್ಯನಾಗಿ ಮಾಡುವ ಉದ್ಧೇಶದಿಂದ ಅವರ ಮನೆಗೆ ಹಿರಿಯರು ಭೇಟಿ ನೀಡಿದ್ದರು. ಸದಸ್ಯತ್ವ ಅಭಿಯಾನದ ವಿಚಾರದಲ್ಲಿ ಅವರು ಪೂರಕವಾಗಿ ಸ್ಪಂದಿಸಿದ್ದರು. ಪಕ್ಷಾತೀತವಾಗಿರುವ ಸೆಲೆಬ್ರೆಟಿಗಳ ಮನೆಗೆ ಪಕ್ಷದ ಮುಖಂಡರು ಭೇಟಿಯಾಗೋದು ಸಾಮಾನ್ಯವಾಗಿದ್ದು ಅವರು ಪಕ್ಷದ ಕಾರ್ಯಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಾರೆ ಎಂದಲ್ಲ.

ದೇವದಾಸ್ ಕಾಪಿಕಾಡ್ ರನ್ನು ಇತರ ಪಕ್ಷದವರೂ ಭೇಟಿಯಾಗುತ್ತಾರೆ. ಇದೇ ವಿಚಾರವನ್ನಿಟ್ಟು ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎನ್ನುವ ಸುಳ್ಳು ಸುದ್ಧಿ ಹರಡಲಾಗಿದೆ. ದೇವದಾಸ್ ಕಾಪಿಕಾಡ್ ತುಳು ಭಾಷೆಯನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಿದಂತಹ ಕಲಾವಿದರಾಗಿದ್ದಾರೆ. ಸ್ವಭಾವಿಕವಾಗಿ ಅವರು ಪಕ್ಷದ ಹಿತ ಚಿಂತಕರು ಆಗಿರಬಹುದು. ಈ ಹಿನ್ನಲೆಯಲ್ಲಿ ಅವರನ್ನು ಭೇಟಿ ಮಾಡಿರೋದು‌ ಸತ್ಯ ಅದರೆ ಈ‌ ವಿಚಾರದಲ್ಲಿ ಅವರ ಕಲಾ ಬದುಕಿಗೆ ತೊಂದರೆಯನ್ನುಂಟು ಮಾಡುವ ಪ್ರಯತ್ನ ನಡೆದಿದೆ ಎಂದಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *