
Read Time:39 Second
ಧರ್ಮಸ್ಥಳ: ಗ್ರಾಮದ ಮುಳಿಕ್ಕಾರು ನಿವಾಸಿ ವಿನುತ ಅವರು ಆಗಸ್ಟ್ 6 ರಂದು ರಾತ್ರಿ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ವಿನುತ ಅವರು ಧರ್ಮಸ್ಥಳದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನಷ್ಟೆ ಪತ್ತೆಯಾಗಬೇಕಾಗಿದೆ.ಮೃತರು ಪತಿ ಸಂದೇಶರನ್ನು ಅಗಲಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.