
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇನ್ನೇನು ಚಿನ್ನದ ಪದಕದ ಬೇಟೆಗೆ ಸಿದ್ಧರಾಗಿದ್ದ ಭಾರತದ ಗಟ್ಟಿಗಿತ್ತಿ ವಿನೇಶ್ ಫೋಗಾಟ್ ರವರನ್ನು ಪಂದ್ಯದಿಂದ ಅನರ್ಹಗೊಳಿಸಿದ್ದರು. ಈ ಬೆನ್ನಲ್ಲೇ ವಿನೇಶ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಾಕುವುದರ ಮೂಲಕ ಕುಸ್ತಿ ಪಂದ್ಯಕ್ಕೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಭಾವುಕ ಸಂದೇಶ ಪ್ರಕಟಿಸಿರುವ ಅವರು ‘ಅಮ್ಮಾ ನನ್ನ ವಿರುದ್ದ ಕುಸ್ತಿ ಗೆದ್ದಿದೆ, ನಾನು ಸೋಲನ್ನು ಅನುಭವಿಸಿದ್ದೇನೆ” ಎಂದಿದ್ದಾರೆ.ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳೆ ಕುಸ್ತಿ ಪಂದ್ಯದಲ್ಲಿ ಫೈನಲ್‌ಗೆ ತಲುಪಿರುವುದು. ಆದರೆ ಕೇವಲ 100 ಗ್ರಾಂ ತೂಕ ಹೆಚ್ಚಳದ ಕಾರಣಕ್ಕೆ ಸ್ಪರ್ಧೆಯಿಂದ ಅನರ್ಹಳನ್ನಾಗಿಸಿರುವುದು ಬೇಸರ ತಂದಿದೆ. ಕುಸ್ತಿ ಪಂದ್ಯದ ಫೈನಲ್‌ಗೆ ಅನರ್ಹ ಎಂಬ ಘೋಷಣೆಯ ಬಳಿಕ ಒಂದೇ ದಿನದಲ್ಲಿ ವಿನೇಶ್ ಪೋಗಾಟ್ ಕುಸ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.


ವಿನೀಶ್ ಭಾವುಕ ಸಂದೇಶ..
‘ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ, ಕ್ಷಮಿಸಿ. ನಿನ್ನ ಕನಸು, ನನ್ನ ಧೈರ್ಯ ಎಲ್ಲ ಭಗ್ನವಾಯಿತು. ನನ್ನ ಧೈರ್ಯ ಸಂಪೂರ್ಣ ಛಿದ್ರ ಛಿದ್ರವಾಗಿದೆ, ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ’ ಎಂದು ವಿನೇಶ್ ಫೋಗಟ್ ಭಾವುಕವಾಗಿ ಬರೆದುಕೊಂಡಿದ್ದಾರೆ. ‘ಕುಸ್ತಿಗೆ ವಿದಾಯ. ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿರುತ್ತೇನೆ, ಕ್ಷಮಿಸಿ’ ಎಂದು ವಿನೇಶ್ ಫೋಗಟ್ ಎಕ್ಸ್ ಸಂದೇಶದಲ್ಲಿ ಉಲ್ಲೇಖ ಮಾಡಿದ್ದಾರೆ.
माँ कुश्ती मेरे से जीत गई मैं हार गई माफ़ करना आपका सपना मेरी हिम्मत सब टूट चुके इससे ज़्यादा ताक़त नहीं रही अब।
— Vinesh Phogat (@Phogat_Vinesh) August 7, 2024
अलविदा कुश्ती 2001-2024 🙏
आप सबकी हमेशा ऋणी रहूँगी माफी 🙏🙏
ತೂಕ ಇಳಿಸಲು ರಾತ್ರಿ ಇಡೀ ವಿನೇಶ್ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ. ತನ್ನ ಕೂದಲು, ಉಗುರುಗಳನ್ನು ಕತ್ತರಿಸಿದ್ದಾರೆ. ಅಲ್ಲದೇ ದೇಹದಲ್ಲಿದ್ದ ರಕ್ತವನ್ನು ಹೊರಗೆ ತೆಗೆದಿದ್ದಾರೆ. ರಾತ್ರಿ ಪೂರ್ತಿ ಒಂದು ತೊಟ್ಟು ನೀರೂ ಕುಡಿಯದೆ ಬೆವರು ಸುರಿಸಿ ವರ್ಕೌಟ್ ಮಾಡಿದ್ದಾರೆ. ಇದಾಗಿಯೂ ಕೇವಲ 2 ಕೆ ಜಿ ತೂಕ ಇಳಿಸಿದ್ದರು. ಕುಸ್ತಿ ಪಂದ್ಯಾಟಕ್ಕೆ 50 ಕೆ ಜಿ ಗಿಂತ ತೂಕ ಹೆಚ್ಚಾಗಿದ್ದರೆ ಪಂದ್ಯದಿಂದ ಅನರ್ಹ ಎಂಬ ನಿಯಮ ವಿದೆ. ಫೈನಲ್ ಪಂದ್ಯಕ್ಕಿಂತ ಮೊದಲು ಬೆಳಿಗ್ಗಿನ ವೇಳೆ ವಿನೇಶ್ ತೂಕ 100 ಗ್ರಾಂ ಹೆಚ್ಚಳವಿತ್ತು. ಹೀಗಾಗಿ ಅವರನ್ನು ಫೈನಲ್ ಪಂದ್ಯದಿಂದ ಅನರ್ಹಳನ್ನಾಗಿ ಘೋಷಣೆ ಮಾಡಿದ್ದಾರೆ. ವಿನೀಶ್ ಒಲಿಂಪಿಕ್ಸ್ ಚಿನ್ನದ ಪದಕದ ಕನಸು ನುಚ್ಚುನೂರಾಗಿದೆ. ಪದ್ಯದಿಂದಲೇ ಅನರ್ಹರಾಗಿದ್ದರಿಂದ ಇವರಿಗೆ ಯಾವುದೇ ಪದಕಗಳು ದೊರಕುವುದಿಲ್ಲ ಎಂದು ಹೇಳಲಾಗಿದೆ. ತೂಕ ಇಳಿಸಲು ನಡೆಸಿದ ಪ್ರಯತ್ನದ ಪರಿಣಾಮವಾಗಿ ನಿರ್ಜಲೀಕರಣದಿಂದ ವಿನೇಶ್ ಆಸ್ಪತ್ರೆಗೆ ದಾಖಲಾಗಿದ್ದರು.



ಕ್ರೀಡಾ ನ್ಯಾಯಾಲಯಕ್ಕೆ ವಿನೇಶ್ ಮನವಿ
ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಪಂದ್ಯದಲ್ಲಿ ಅನರ್ಹತೆಯನ್ನು ಪ್ರಶ್ನಿಸಿ ವಿನೇಶ್ ಫೋಗಾಟ್ ಅಂತರಾಷ್ಟ್ರೀಯ ಮಧ್ಯವರ್ತಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. 100 ಗ್ರಾಂ ಹೆಚ್ಚಳ ಎಂಬ ಕಾರಣಕ್ಕೆ ಅನರ್ಹಗೊಳಿಸಲಾಗಿದೆ. ಹಾಗಾಗಿ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ವಿನೇಶ್ ಫೋಗಾಟ್ ಮನವಿ ಸಲ್ಲಿಸಿದ್ದಾರೆ.
