ಉಡುಪಿ :ಆನ್ ಲೈನ್ ನಲ್ಲಿ ವಿಡಿಯೋ ಕರೆ ಮಾಡಿ ವಂಚನೆ ಆರೋಪಿ ಹಾಗೂ ಸ್ವತ್ತು ವಶ

0 0
Read Time:3 Minute, 27 Second

ದೂರುದಾರರಿಗೆ ಫೇಸ್ ಬುಕ್ ನಲ್ಲಿ ಯುವತಿಯ ಪರಿಚಯವಾಗಿ, ದೂರುದಾರರಿಗೆ ವಿಡಿಯೋ ಕಾಲ್ ಮಾಡಿದ್ದು ಪಿರ್ಯಾದಿದಾರರು ವಿಡಿಯೋ ಕರೆ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪಿರ್ಯಾದಿದಾರರ ಮುಖ ಇರುವ ಮಾರ್ಪಿಂಗ್ ಮಾಡಿದ ನಗ್ನ ವಿಡಿಯೋವನ್ನು ಪಿರ್ಯಾದಿದಾರರ ವಾಟ್ಯಾಪ್ ನಂಬರಿಗೆ ಕಳುಹಿಸಿ, ಅಪರಿಚಿತ ವ್ಯಕ್ತಿಗೆ ಹಣವನ್ನು ನೀಡದಿದ್ದರೆ ಪಿರ್ಯಾದಿದಾರರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡುವುದಾಗಿ ಪಿರ್ಯಾದಿದಾರರಿಗೆ ಬೆದರಿಸಿ ಪಿರ್ಯಾದಿದಾರರಿಂದ ಹಂತ-ಹಂತವಾಗಿ ಒಟ್ಟು 4,44,999.97/- ಹಣವನ್ನ ವರ್ಗಾಯಿಸಿಕೊಂಡು ಮೊಸ ಮಾಡಿರುತ್ತಾರೆ. ಪಿರ್ಯಾದಿದಾರರು ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಅ.ಕ್ರ.41/2025 ಕಲಂ: 308(2), 318(4) ಬಿ ಎನ್ ಎಸ್ ಹಾಗೂ 66(ಇ), ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್‌ ಶಂಕರ್‌ ರವರ ಆದೇಶದಂತೆ ಹಾಗೂ ಹೆಚ್ಚುವರಿ ಪೊಲೀಸ್‌‌‌‌ ಅಧೀಕ್ಷಕರಾದ ಸುಧಾಕರ ನಾಯಕ್‌ ಮತ್ತು ಕಾರ್ಕಳ ಸಹಾಯಕ ಪೊಲೀಸ್‌ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದ ರವರ ನಿರ್ದೇಶನ ಮೇರೆಗೆ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ರವರ ಹಾಗೂ ಪಿ.ಎಸ್.ಐ ಹರೀಶ್‌ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆರೋಪಿಯಾದ ಕಾನೂನು ಸಂಘರ್ಷ ಒಳಗಾದ ಬಾಲಕನನ್ನು ವಶಕ್ಕೆ ಪಡೆದು ಹಾಗೂ ಆರೋಪಿ ಜೈದ್ ಮೊಹಮ್ಮದ್ @ ಜೈದ್ ಖಾನ್, ತಂದೆ: ದೀನ್ ದಾರ್, ಪ್ರಾಯ: 19 ವರ್ಷ ಬಡಿ ಮಸೀದಿ ಹತ್ತಿರ, ಮಂಚಿ ಗ್ರಾಮ, ಔಲಂದ ಪೋಸ್ಟ್, ಡೀಗ್ ಜಿಲ್ಲೆ, ರಾಜಸ್ತಾನ ರಾಜ್ಯ ಎಂಬತನನ್ನು ದಸ್ತಗಿರಿ ಮಾಡಿ ಅವರಿಂದ ಒಟ್ಟು 5 ಮೊಬೈಲ್ ಪೋನ್ ಗಳನ್ನು ಹಾಗೂ ಆರೋಪಿಗಳಿಂದ ರೂ 2,00,000/- ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಸದ್ರಿ ಪ್ರಕರಣದ ಇತರ ಆರೋಪಿಗಳು ತಲೆಮರೆಸಿ ಕೊಂಡಿದ್ದು ಅವರ ದಸ್ತಗಿರಿಗೆ ಬಾಕಿ ಇರುತ್ತದೆ.ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರ ನೇತೃತ್ವದಲ್ಲಿ ಠಾಣಾ ಪಿ.ಎಸ್.ಐ ಹರೀಶ್‌. ಆರ್, ಸೆನ್ ಪೊಲೀಸ್ ಠಾಣೆಯ ಎ.ಎಸ್.ಐ ಉಮೇಶ್‌ ಜೋಗಿ, ಸಿಬ್ಬಂದಿಗಳಾದ ಪ್ರವೀಣ್‌ ಕುಮಾರ್‌, ಹೇಮರಾಜ್, ನಿಲೇಶ್ ರವರನ್ನೊಳಗೊಂಡ ವಿಶೇಷ ತಂಡವು ರಾಜಸ್ಥಾನ ರಾಜ್ಯ ,ಗೋವಾ ರಾಜ್ಯ ಕಡೆಗಳಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಗೋವಾ ರಾಜ್ಯದ ಮಡಗಾಂವ್‌ ನಗರದ ರೈಲು ನಿಲ್ದಾಣದ ಬಳಿ ವಶಕ್ಕೆ ಪಡೆದಿರುತ್ತಾರೆ ಹಾಗೂ ಯತೀನ್‌ , ರಾಘವೇಂದ್ರ ಕಾರ್ಕಡ, ಪ್ರವೀಣ್‌ ಶೆಟ್ಟಿಗಾರ್‌, ರಾಜೇಶ್‌ , ವೇಂಕಟೇಶ್‌, ಧರ್ಮಪ್ಪ, ಜ್ಯೋತಿ, ದೀಕ್ಷಿತ್‌, ಪವನ್. ಮುತ್ತೆಪ್ಪ , ಮಾಯ್ಯಪ್ಪ, ವೈಶಾಲಿ ಸೆನ್ ಪೊಲೀಸ್ ಠಾಣೆರವರು ಹಾಗೂ ದಿನೇಶ್. ಎಂ, ಅಜೆಕಾರು ಠಾಣೆ (ಟೆಕ್ನ್ ಕಲ್) ರವರು ಸಹಕರಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *