ಮಂಗಳೂರು: ಲವ್‌ ಜಿಹಾದ್ ಗೆ ಬಲಿಯಾದ ಪುತ್ರಿಯನ್ನು ರಕ್ಷಿಸುವಂತೆ ಯುವತಿಯ ತಂದೆ ಕಣ್ಣೀರು..!

0 0
Read Time:2 Minute, 24 Second

ಮಂಗಳೂರು: ಜಿಲ್ಲೆಯಲ್ಲಿ ಮತ್ತೆ ಲವ್‌ ಜಿಹಾದ್ ಕರಿನೆರಳು ಕಾಣಿಸಿಕೊಂಡಿದೆ. ನಟೋರಿಯಸ್ ಕ್ರಿಮಿನಲ್‌ನೊಂದಿಗೆ ಕಾಸರಗೋಡಿನ ಹಿಂದೂ ಯುವತಿ ಪರಾರಿಯಾಗಿದ್ದಾಳೆ. ಇದೀಗ ಆಕೆಯ ತಂದೆ ತಮ್ಮ ಪುತ್ರಿಯನ್ನು ರಕ್ಷಿಸಿಕೊಡುವಂತೆ ವಿಎಚ್‌ಪಿ ಕಚೇರಿ ಮುಂದೆ ಕಣ್ಣೀರು ಹಾಕಿದ್ದಾರೆ.

ಈ ದೃಶ್ಯ ಎಂಥವರ ಕರಳು ಕಿವುಚುವಂತಿತ್ತು. ಇನ್ನೂ 20ರ ಪ್ರಾಯದ ಈಕೆ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿನಿಯಾಗಿದ್ದಾಳೆ. ಉಳ್ಳಾಲದ ಬಂದಿಕೊಟ್ಯದಲ್ಲಿ ಸಹೋದರಿ ಮನೆಯಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದಳು. ಈಕೆಗೆ ಕಾಸರಗೋಡಿನ ಮಹಮ್ಮದ್ ಅಶ್ಫಕ್‌ನೊಂದಿಗೆ ಪ್ರೇಮಾಂಕುರವಾಗಿದೆ. ಜೂನ್ 30ರಂದು ಆತನೊಂದಿಗೆ ಉಳ್ಳಾಲದ ಮನೆಯಿಂದ ಪರಾರಿಯಾಗಿದ್ದಾಳೆ. ಹೆತ್ತವರು ಯುವತಿಯನ್ನು ಹುಡುಕಾಟ ನಡೆಸಿದಾಗ ಕೇರಳದಲ್ಲಿ ಅಶ್ಫಕ್‌ನೊಂದಿಗೆ ಇರುವುದು ಗೊತ್ತಾಗಿದೆ. ಬರುವಂತೆ ಮನವಿ ಮಾಡಿದರೂ ಆಕೆ ಅಶ್ಫಕ್‌ನನ್ನು ತೊರೆದುಬರಲು ಸುತಾರಾಂ ಒಪ್ಪುತ್ತಿರಲಿಲ್ಲ. ಆದ್ದರಿಂದ ಆಕೆಯ ತಂದೆ ಮಂಗಳೂರು ಪೊಲೀಸ್ ಕಮಿಷನರ್ ಮೊರೆಹೋಗಿ, ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಹೊರಟವಳನ್ನು ರಕ್ಷಿಸುವಂತೆ ಅವಲತ್ತುಕೊಂಡಿದ್ದಾರೆ. ಸದ್ಯ ಪೊಲೀಸರು ಯುವತಿಯನ್ನು ಕೇರಳದಿಂದ ಕರೆತಂದು ಮುಡಿಪುವಿನ ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರದಲ್ಲಿಟ್ಟಿದ್ದಾರೆ. ಅಶ್ಫಕ್ ಹಿನ್ನೆಲೆಯೇ ಬಡ ತಂದೆಯನ್ನು ದಂಗುಬಡಿಸಿದೆ. ನಟೋರಿಯಸ್ ಕ್ರಿಮಿನಲ್ ಆಗಿರುವ ಈತನ ಮೇಲೆ ಕಾಸರಗೋಡಿನ ವಿವಿಧ ಠಾಣೆಗಳಲ್ಲಿ 12ಕ್ಕೂ ಅಧಿಕ ಪ್ರಕರಣಗಳಿವೆ. ಈಗಾಗಲೇ ಎರಡೆರಡು ವಿವಾಹವಾಗಿದ್ದ ಆತ ಇದೀಗ ಹಿಂದೂ ಯುವತಿಯನ್ನು ಬಲೆಗೆ ಬೀಳಿಸಿಕೊಂಡಿದ್ದಾನೆ. ಆದ್ದರಿಂದ ಪುತ್ರಿಯನ್ನು ಆತನ ಬಲೆಯಿಂದ ಪಾರುಮಾಡುವಂತೆ ತಂದೆ ವಿಎಚ್‌ಪಿ ಕದತಟ್ಟಿದ್ದಾರೆ. ಹಿಂದೂ ಸಂಘಟನೆಗಳು ಇದೊಂದು ಲವ್‌ ಜಿಹಾದ್ ಎಂದು ಆರೋಪಿಸಿದ್ದು, ಆಕೆಯ ಮನವೊಲಿಸಲು ಮುಂದಾಗಿದೆ. ಇದು ಎಷ್ಟು ಫಲಪ್ರದವಾಗಲಿದೆ ಎಂದು ಕಾದುನೋಡಬೇಕಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *