ಮಂಗಳೂರು: ಫೆಬ್ರವರಿ 17ರಂದು ವಾಹನಗಳ ಸಂಚಾರ ಗಣತಿ

0 0
Read Time:1 Minute, 40 Second

ಮಂಗಳೂರು,: ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರದ ಗಣತಿಯನ್ನು ನಡೆಸಲಾಗುತ್ತಿದೆ.

2025ನೇ ಸಾಲಿನಲ್ಲಿ ರಸ್ತೆ ಸಂಚಾರ ಗಣತಿಯನ್ನು ಫೆಬ್ರವರಿ 17ರಂದು ಬೆಳಗ್ಗೆ 6ರಿಂದ ಫೆಬ್ರವರಿ 24ರ ಬೆಳಗ್ಗೆ 6ರವರೆಗೆ ಸತತವಾಗಿ 7 ದಿನಗಳ ಕಾಲ ನಡೆಸಲಾಗುವುದು.

ದ.ಕ. ಜಿಲ್ಲೆಯಲ್ಲಿ ಈ ಗಣತಿಗೆ ಸುಮಾರು 126 ಗಣತಿ ಕೇಂದ್ರಗಳನ್ನು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಆಯ್ಕೆ ಮಾಡಲಾಗಿದೆ.

ವಾಹನ ಸಂಚಾರದ ಬೆಳವಣಿಗೆಯ ತೀವ್ರತೆಯನ್ನು ಗಮನಿಸಿ ರಸ್ತೆಗಳ ಮೇಲೈಯನ್ನು ಅಭಿವೃದ್ಧಿ ಪಡಿಸುವುದು, ರಸ್ತೆಗಳನ್ನು ಅಗಲಪಡಿಸುವುದು ಹಾಗೂ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಇತ್ಯಾದಿ ರಸ್ತೆಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರಕಾರವು ರೂಪಿಸಲು ಮತ್ತು ಕೈಗೆತ್ತಿಗೊಳ್ಳುವ ಉದ್ದೇಶದಿಂದ ವಾಹನಗಳ ಸಂಚಾರ ಗಣತಿ ನಡೆಸಲಾಗುತ್ತದೆ.

ವಾಹನ ಸಂಚಾರ ವಿವರಗಳನ್ನು ಸಂಗ್ರಸಲು ದ.ಕ. ಜಿಲ್ಲೆಯ 126 ಗಣತಿ ಕೇಂದ್ರಗಳಲ್ಲಿ ಸಹಾಯಕ ಇಂಜಿನಿಯರ್/ಕಿರಿಯ ಇಂಜಿನಿಯರ್‌ಗಳನ್ನು ನೇಮಿಸಲಾಗಿದೆ.

ಈ ವಾಹನ ಸಂಚಾರದ ಗಣತಿಗೆ ಚಾಲಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *