
ಮಂಗಳೂರು: ಸಂಜೀವಿನಿ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ದಾಸ್ ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗದಲ್ಲಿ ದಿನಾಂಕ 17-07-2024 ಬುಧವಾರ ದಂದು ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.



ಸಂಜೀವಿನಿ ಟ್ರಸ್ಟಿನ ಅಧ್ಯಕ್ಷರುಗಳಾದ ಶ್ರೀಯುತ ಪ್ರಸಾದ್ ಮತ್ತು ದಾಸ್ ಚಾರಿಟೇಬಲ್ ಟ್ರಸ್ಟಿನ ಶ್ರೀಯುತ ಲಯನ್ ಅನಿಲ್ ದಾಸ್ ರವರು ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಈಗಾಗಲೇ ಸುಮಾರು ಮೂರು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡುವುದರ ಮೂಲಕ ಹಸಿರು ಕ್ರಾಂತಿ ಮಾಡುತ್ತಿರುವ ಮಂಗಳೂರಿನ ವನ ಚಾರಿಟೇಬಲ್ ಟ್ರಸ್ಟಿನ ಶ್ರೀಯುತ ಜೀತ್ ರೋಚ್ ರವರನ್ನು ಸನ್ಮಾನಿಸಲಾಯಿತು.



ವನಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕ ಪರಿಸರದಲ್ಲಿ ಸುಮಾರು 30ಕ್ಕೂ ಹಚ್ಚು ಗಿಡಗಳನ್ನು ನೆಡಲಾಯಿತು. ಪರಿಸರ ಹಾಗೂ ಇಂದಿನ ಪರಿಸ್ಥಿತಿಯ ಬಗ್ಗೆ ಲಯನ್ ಅನಿಲ್ ದಾಸ್ ಮಾತಾಡಿದರು. ಟ್ರಸ್ಟಿನ ಸದಸ್ಯರುಗಳಾದ ಕ್ಲೇಮೆಂಟ್ ಡಿಸೋಜ, ಮೆಂಡನ್, ರಾಕೇಶ್ ಡಿಸೋಜ, ಸೋಮಣ್ಣ, ಗಣೇಶ್, ರೂಡೋಲ್ಫ್ ರವರು ಸಸಿ ನೆಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರೀಯುತ ಮೇಲ್ವಿನ್ ರವರು ಕಾರ್ಯಕ್ರಮ ನಿರೂಪಿಸಿದರು. ಸೋಮಣ್ಣ ವಂದಿಸಿದರು.
