
Read Time:1 Minute, 19 Second
ಬೆಂಗಳೂರು: ಅಯೋಧ್ಯೆಯ ರಾಮಲಲ್ಲಾ ಮೂರ್ತಿಯ ಶಿಲ್ಪಿ ಅರುಣ್ ಯೋಗಿ ರಾಜ್ ಅವರಿಗೆ ಅಮೇರಿಕಾ ವೀಸಾ ನೀಡುವುದನ್ನು ನಿರಾಕರಿಸಿದೆ. ಈ ಮೂಲಕ ಶಿಲ್ಪಿ ಅರುಣ್ ಯೋಗಿ ರಾಜ್ ಅವರಿಗೆ ಅಮೇರಿಕಾದಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.


ಅಕ್ಕ ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಅಮೇರಿಕಾದಲ್ಲಿ ಭಾಗಿಯಾಗೋದಕ್ಕಾಗಿ ಶಿಲ್ಪಿ ಅರುಣ್ ಯೋಗಿ ರಾಜ್ ಅವರು ಅಮೇರಿಕಾ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೇ ಅವರಿಗೆ ವಿಸಾವನ್ನು ಅಮೇರಿಕಾ ನಿರಾಕಿರಿಸಿರುವುದಾಗಿ ತಿಳಿದು ಬಂದಿದೆ.
20 ದಿನಗಳ ಪ್ರವಾಸಕ್ಕಾಗಿ ಅಮೇರಿಕಾಕ್ಕೆ ಅರುಣ್ ಯೋಜಿರಾಜ್ ತೆರಳೋದಕ್ಕಾಗಿ ವೀಸಾಗೆ ಅರ್ಜಿ ಸಲ್ಲಿಸಿದ್ದರು. ಅಕ್ಕ ಸಮ್ಮೇಳನದಲ್ಲೂ ಅವರು ಭಾಗಿಯಾಗೋದಕ್ಕೆ ಆಹ್ವಾನ ಬಂದಿದ್ಧರಿಂದ ವೀಸಾಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೇ ಇದೀಗ ಅಮೇರಿಕಾ ರಾಮಲಲ್ಲಾ ಮೂರ್ತಿಯ ಶಿಲ್ಪಿ ಅರುಣ್ ಯೋಗಿ ರಾಜ್ ಅವರಿಗೆ ವಿಸಾ ನೀಡಲು ನಿರಾಕಿರಿಸಿದೆ.

