
Read Time:1 Minute, 1 Second
ಉಪ್ಪಿನಂಗಡಿ: ದಿಢೀರ್ ಅನಾರೋಗ್ಯಕ್ಕೀಡಾಗಿ ಕಾಲೇಜು ವಿದ್ಯಾರ್ಥಿಯೋರ್ವನು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ಶನಿವಾರ ನಡೆದಿದೆ. ಉಪ್ಪಿನಂಗಡಿಯ ಸರಕಾರಿ ಪ.ಪೂ.ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮುಹಮ್ಮದ್ ಸಿರಾಜುದ್ದೀನ್ (17) ಮೃತಪಟ್ಟವನು. ಕೊಯಿಲದ ಗಂಡಿಬಾಗಿಲು ನಿವಾಸಿ ಸಿರಾಜುದ್ದೀನ್ ಕಾಲೇಜಿಗೆಂದು ಬೆಳಗ್ಗೆ ತನ್ನ ಸ್ನೇಹಿತರೊಂದಿಗೆ ಬಂದಿದ್ದಾನೆ. ಕಾಲೇಜಿನ ದಾರಿ ಮಧ್ಯೆ ಬಿ.ಪಿ. ಲೋ ಸಮಸ್ಯೆಯಿಂದ ತಲೆ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಜೊತೆಗಿದ್ದವರು ಸಿರಾಜುದ್ದೀನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಿರಾಜುದ್ದೀನ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

