
ಉಪ್ಪಿನಂಗಡಿ : ಹಲವು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಾಸನ ಮೂಲದ ಆರೋಪಿ ಸೊಹೈಲ್ ಅಲಿಯಾಸ್ ಸೊಹಿಬ್ನನ್ನು (24) ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.


ಒಟ್ಟು ಎಂಟು ಕಳ್ಳತನ ಪ್ರಕರಣಗಳಲ್ಲಿ ಸೊಹೈಲ್ ಭಾಗಿಯಾಗಿರುವುದನ್ನು ಪತ್ತೆಹಚ್ಚಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 2020 ಮತ್ತು 2022ರಲ್ಲಿ ಅವನ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. 2020ರಲ್ಲಿ ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. 2022ರಲ್ಲಿ ಕೇರಳದ ಕಣ್ಣಾಪುರ ಪೊಲೀಸ್ ಠಾಣೆಯಲ್ಲಿ ಅವನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇತ್ತೀಚೆಗೆ ಆತ ಮಂಗಳೂರಿನ ಸಮೀಪ ತಲಪಾಡಿಯಲ್ಲಿ ವಾಸಿಸುತ್ತಿದ್ದ. ಆದರೆ ನಂತರ ಬೇರಡೆಗೆ ಹೋಗಿದ್ದ. ಪೊಲೀಸರು ಅವನನ್ನು ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯಲ್ಲಿ ಪತ್ತೆಹಚ್ಚಿ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.


ಉಪ್ಪಿನಂಗಡಿ ಎಸ್ಐ ಕೌಶಿಕ್ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಶಿವರಾಮ್, ಶ್ರೀಶೈಲ ಮತ್ತು ಮೊಹಮ್ಮದ್ ಮೌಲಾನಾ ಅವರ ನೆರವಿನೊಂದಿಗೆ ಬಂಧನ ಕಾರ್ಯಾಚರಣೆ ನಡೆಸಲಾಯಿತು.
