“ಆಧಾರ್ ಕಾರ್ಡ್” ನವೀಕರಿಸಲು ಕೇಂದ್ರದಿಂದ ಪ್ರಮುಖ ನಿರ್ಧಾರ..! 

0 0
Read Time:1 Minute, 58 Second

ಆಧಾರ್ ಕಾರ್ಡ್ ಸಂಬಂಧಿತ ಸೇವೆಗಳನ್ನು ಒದಗಿಸಲು ಕೇಂದ್ರ ಸರ್ಕಾರವು ದೇಶಾದ್ಯಂತ ಒಟ್ಟು 13,352 ಆಧಾರ್ ನೋಂದಣಿ ಮತ್ತು ನವೀಕರಣ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ ಆಧಾರ್ ಕಾರ್ಡ್ ನವೀಕರಿಸಲು ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಹೊರಬರಲು ಅಂಚೆ ಕಚೇರಿಗಳಲ್ಲಿಯೂ ಆಧಾರ್ ಸಂಬಂಧಿತ ಸೇವೆಗಳನ್ನು ಪಡೆಯಬಹುದು ಎಂದು ಇಂಡಿಯಾ ಪೋಸ್ಟ್ ತಿಳಿಸಿದೆ.

ಆಧಾರ್ ಕೇಂದ್ರದ ಕೊರತೆಯಿಂದ ಆಧಾರ್ ಕಾರ್ಡ್ ನವೀಕರಿಸಲು ಉದ್ದನೆಯ ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಜನರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಅಂಚೆ ಇಲಾಖೆ, ಆಧಾರ್ ಸಂಬಂಧಿತ ಸೇವೆಗಳನ್ನು ನೀಡಲು ಪ್ರಾರಂಭಿಸಿದೆ.

ಅಧಿಸೂಚನೆಯ ಪ್ರಕಾರ, ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳು ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಆಧಾರ್ ನೋಂದಣಿಯಲ್ಲಿ ವ್ಯಕ್ತಿಗಳ ಬಯೋಮೆಟ್ರಿಕ್ ಮಾಹಿತಿಯನ್ನು ವಿದ್ಯುನ್ಮಾನವಾಗಿ ನೋಂದಾಯಿಸಬಹುದು. ಆಧಾರ್ ಅಪ್‌ಡೇಟ್‌ನಲ್ಲಿ ಯಾರಾದರೂ ತಮ್ಮ ಹೆಸರು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಮನೆ ವಿಳಾಸ, ಜನ್ಮ ದಿನಾಂಕ, ಫೋಟೋ, ಐರಿಸ್ ಯಾವುದಾದರೂ ತಪ್ಪು ಅಥವಾ ಅವಧಿ ಮುಗಿದಿದ್ದರೆ ನವೀಕರಿಸಬಹುದು

ಈ ಸೇವೆಯು ದೇಶದ 13,352 ಕೇಂದ್ರಗಳಲ್ಲಿ ಲಭ್ಯವಿದೆ. ಯಾವೆಲ್ಲ ಅಂಚೆ ಕಚೇರಿಗಳಲ್ಲಿ ಸೇವೆ ಲಭ್ಯವಿದೆ ಅನ್ನೋದನ್ನು ತಿಳಿಯಲು https://www.indiapost.gov.in/ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು. ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆ ದಾಖಲೆಗಳೊಂದಿಗೆ ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ನವೀಕರಿಸಬೇಕು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *