
Read Time:59 Second
ಬೆಳ್ತಂಗಡಿ: ಸುಮಾರು 55 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ನ.23 ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿ ನೀರಿನಲ್ಲಿಪತ್ತೆಯಾಗಿದೆ.


ಮೃತದೇಹದ ಮೈಮೇಲೆ ನಸು ಹಸಿರು ಬಣ್ಣದ ಉದ್ದ ತೋಳಿನ ಶರ್ಟ್, ಅರ್ದ ತೋಳಿನ ಬಿಳಿ ಬಣ್ಣದ ಬನಿಯನ್, ಕಾಫಿ ಬಣ್ಣದ ಒಳಚಡ್ಡಿ, ನಸು ಹಸಿರು ಬಣ್ಣದ ಪಟ್ಟಿ ಇರುವ ಬಿಳಿ ಪಂಚೆ, ಕೆಂಪು ಉಡಿದಾರ ಧರಿಸಿಕೊಂಡಿದ್ದು ಪತ್ತೆಯಾಗಿದೆ.
ಮೃತರ ವಾರೀಸುದಾರರು ಪತ್ತೆಯಾದಲ್ಲಿ ಧರ್ಮಸ್ಥಳ ಠಾಣೆಯ ಪಿಎಸ್ಐ 8277986449 ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರು 9480805336 ನಂಬರಿಗೆ ಮಾಹಿತಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.


