
Read Time:1 Minute, 1 Second
ಮಂಗಳೂರು: ಮದ್ಯದ ನಶೆಯಲ್ಲಿ ಮೋರಿಗೆ ಬಿದ್ದ ಕುಡುಕನೋರ್ವನನ್ನು ಸಂಚಾರಿ ಪೊಲೀಸರಿಬ್ಬರು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಮಂಗಳೂರಿನ ಪಂಪ್‌ವೆಲ್ ಬಳಿ ಇಂದು ಬೆಳಗ್ಗೆ ನಡೆದಿದೆ.


ಆರೇಳು ಅಡಿ ಆಳವಿದ್ದ ಈ ಮೋರಿಯಲ್ಲಿ ಮಳೆಯ ಕಾರಣ ನೀರು ರಭಸವಾಗಿ ಹರಿಯುತ್ತಿತ್ತು. ಕೊಂಚ ಹೆಚ್ಚು ಕಡಿಮೆಯಾದರೂ ಮೋರಿಗೆ ಬಿದ್ದ ವ್ಯಕ್ತಿ ನೀರಿನಲ್ಲಿ ಕೊಚ್ಚಿಹೋಗುವ ಸಾಧ್ಯತೆಯಿತ್ತು.
ಇದನ್ನು ಗಮನಿಸಿದ ಮಂಗಳೂರು ನಗರ ಜೆಪ್ಪಿನಮೊಗರು ಸಂಚಾರಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ವಿಲ್ಸನ್ ಫೆರ್ನಾಂಡಿಸ್ ಅವರು ಸ್ವತಃ ಮೋರಿಗಿಳಿದು ಹರಸಾಹಪಟ್ಟು ಮೇಲಕ್ಕೆತ್ತಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭ ಸಾರ್ವಜನಿಕರು ಸಹಕರಿಸಿದ್ದಾರೆ.

