ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ದಿ| ಬಿ.ಉಮೇಶ್ ಕುಲಾಲ್ ಮಂಚಿ ರವರ ಪುಣ್ಯ ಸ್ಮರಣೆ

0 0
Read Time:2 Minute, 32 Second

ವೇಣೂರು: ತಾರೀಕು 14/11/2024 ಬೆಳ್ತಂಗಡಿ ಗುಂಡೂರಿ ಗ್ರಾಮ, ಶ್ರೀಗುರುಚೈತನ್ಯಸೇವಾಶ್ರಮ ಗುಂಡೂರಿ ಬೆಳ್ತಂಗಡಿ ತಾಲೂಕು ಇಲ್ಲಿ ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಹಿರಿಯ ಸಮಾಜಸೇವಕ ನಿವೃತ್ತ ಸರಕಾರಿ ಉದ್ಯೋಗಿ ದಿವಂಗತ ಬಿ.ಉಮೇಶ್ ಕುಲಾಲ್ ಮಂಚಿ ರವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮೃತರು ತನ್ನ 19 ನೇ ವಯಸ್ಸಿನಲ್ಲಿ ಸರಕಾರಿ ಶ್ಯಾನುಭೋಗರಾಗಿ ದುಡಿದು ನಂತರ ಗ್ರಾಮಲೆಕ್ಕಿಗರಾಗಿ ಸರಕಾರಿ ಸೇವೆ ಸಲ್ಲಿಸಿದ್ದಾರೆ. ಈ ಸಂಧರ್ಭದಲ್ಲಿ ಅದೆಷ್ಟೋ ಬಡಕುಟುಂಬಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಿಗುವಂತೆ ಪ್ರಾಮಾಣಿಕ ಪ್ರಯತ್ನಪಟ್ಟವರು. ನಿವೃತ್ತಿ ಜೀವನದಲ್ಲಿ ಧಾರ್ಮಿಕ,ಸಮಾಜಿಕ ಸೇವೆಯಲ್ಲಿ ತೊಡಗಿ ಜನರ ಮದ್ಯೆ ಬೆರೆತವರು, ಪನೋಲಿಬೈಲ್ ಕ್ಷೇತ್ರದ ಅಭಿವೃದ್ಧಿ ಸಮಿತಿಯಲ್ಲಿ ತೊಡಗಿಸಿದ ಇವರು ಕ್ಷೇತ್ರದ ಆಡಳಿತದ ದೋಷದ ವಿರುದ್ದ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟದಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ.

ಇವನ್ನೆಲ್ಲಾ ಗಮನಿಸಿದ ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ಇವರ ಸೇವೆಯನ್ನು ನೆನಪಿಸಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಲಾಯಿತು ಎಂದು ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ದ ಹೊನ್ನಯ್ಯ ಕುಲಾಲ್ ರವರು ವಿವರಿಸಿದರು.

ಈ ಕಾರ್ಯಕ್ರಮ ದ ನಿಮಿತ್ತ ಸೇವಾಶ್ರಮ ದ ಆರಾಧ್ಯ ಗುರು ರಾಯರಿಗೆ ಪೂಜೆ ಸಲ್ಲಿಸಲಾಯಿತು. ಆಶ್ರಮವಾಸಿಗಳಿಗೆ ಹಾಗು ಬಂದಂತಹ ಸಭಿಕರಿಗೆ ಸಿಹಿಊಟ ಹಂಚಲಾಯಿತು. ಅಥಿತಿಗಳಾಗಿ ಹಿರಿಯರಾದ ನಿವೃತ್ತ ಅಂಚೆ ಸಿಬ್ಬಂದಿ ಅರಂಬೋಡಿ ಕುಂಜ್ಞಪ್ಪ ಕುಲಾಲ್, ಸಿದ್ಧಕಟ್ಟೆ ಜನೌಷದಿ ಮಾಲಕ ಮನೋಜ್ ಕುಲಾಲ್, ನಡ್ತಿಕಲ್ಲು ಸಮಾಜಸೇವಾ ಸಂಘದ ಉಪಾಧ್ಯಕ್ಷೆ ಶ್ರೀಮತಿ ರಮ್ಯಾ ಕುಮಾರ್ ಕುಲಾಲ್, ಸಿದ್ಧಕಟ್ಟೆ ಕುಲಾಲ ಸಂಘದ ಸದಸ್ಯೆ ಶ್ರೀಮತಿ ಉಷಾ ಕೃಷ್ಣ ಕುಲಾಲ್ ಉಪಸ್ಥಿತರಿದ್ದರು. ಹೊನ್ನಯ್ಯ ಕುಲಾಲ್ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
100 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *