
Read Time:50 Second
ಉಜ್ವಲ್ ಯೋಜನೆಯಡಿ, ಬಿಪಿಎಲ್ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಕೇಂದ್ರ ಹೊಂದಿದೆ.
ಉಜ್ವಲ 2.0 ಅಡಿಯಲ್ಲಿ, ಕೇಂದ್ರ ಸರ್ಕಾರ ಬಡವರಿಗೆ ಸುಮಾರು 10 ಮಿಲಿಯನ್ ಅನಿಲ ಸಂಪರ್ಕಗಳನ್ನು ಉಚಿತ ರೀಫಿಲ್ ಮತ್ತು ಒಲೆಯೊಂದಿಗೆ ವಿತರಿಸಲಿದೆ. ಈ ಯೋಜನೆಯ ಲಾಭವನ್ನು ಪಡೆಯಲು ಪ್ರಮುಖ ದಾಖಲೆಗಳೆಂದರೆ, ಪಾಸ್ಪೋರ್ಟ್ ಫೋಟೋ, ಪಡಿತರ ಚೀಟಿ, ಸ್ವಯಂ ಘೋಷಿತ ಪ್ರಮಾಣ ಪತ್ರ, ಕುಟುಂಬ ಸದಸ್ಯರ ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC. ಇವೆಲ್ಲವನ್ನೂ ತೆಗೆದುಕೊಂಡು ನಿಮ್ಮ ಹತ್ತಿರ ಗ್ರಾಂ ಒನ್ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿ. ಉಚಿತ ಸಿಲಿಂಡರ್ ಪಡೆಯಬಹುದು.

