
Read Time:51 Second
ಪುತ್ತೂರು: ಇಬ್ಬರು ಯುವತಿಯರು ನಾಪತ್ತೆಯಾಗಿರುವ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪುತ್ತೂರಿನ ಇನಾಮೊಗ್ರುವಿನ ಮೋನಿಶಾ (23) ಮತ್ತು ಮಂಡ್ಯದ ಪಾಂಡವಪುರದ ದಿವ್ಯಾ (20) ನಾಪತ್ತೆಯಾದ ಯುವತಿಯರು ಎಂದು ಗುರುತಿಸಲಾಗಿದೆ.
ಇವರಿಬ್ಬರೂ ಮಂಡ್ಯದಲ್ಲಿ ಒಂದೇ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದರು. ವರದಿಯ ಪ್ರಕಾರ, ಇವರಿಬ್ಬರೂ ನಾಲ್ಕು ದಿನಗಳ ಹಿಂದೆ ಮೋನಿಶಾ ಅವರ ಮನೆಗೆ ಬಂದಿದ್ದು, ಅಂದಿನಿಂದ ನಾಪತ್ತೆಯಾಗಿದ್ದಾರೆ. ಈ ಇಬ್ಬರೂ ಯುವತಿಯರು ಶ್ರವಣ ಮತ್ತು ಮಾತಿನ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

