
Read Time:1 Minute, 8 Second
ಕಾರವಾರ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಿಸಿದ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ.


ಮೈಸೂರು ಮೂಲದ ಅಭಿ ಹಾಗೂ ಇನ್ನೋರ್ವ ಪ್ರವಾಸಿಗನನ್ನು ಇಲ್ಲಿನ ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಇವರಿಬ್ಬರು ರಜೆಯ ಹಿನ್ನಲೆ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದರು. ಸಮುದ್ರದಲ್ಲಿ ಈಜಾಡುವ ವೇಳೆ ಅಲೆಗಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದರು. ಇದನ್ನು ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿಗಳಾದ ಶಿವಪ್ರಸಾದ್, ಮೋಹನ್, ಶಿವಪ್ರಸಾದ್ ಅಂಬಿಗ ಎನ್ನುವವರು ಯುವಕರನ್ನು ರಕ್ಷಿಸಿದ್ದಾರೆ.


ಇನ್ನು ರಕ್ಷಿಸಲ್ಪಟ್ಟ ಇನ್ನೊರ್ವ ಪ್ರವಾಸಿಗ ಲೈಫ್‌ಗಾರ್ಡ್ ಸಿಬ್ಬಂದಿಗೆ ಮಾಹಿತಿ ನೀಡದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
