ಇಂಡೋನೇಷ್ಯಾದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಉಗ್ರರ ಸೆರೆ..!

0 0
Read Time:1 Minute, 37 Second

ನವದೆಹಲಿ: ಇಂಡೋನೇಷ್ಯಾದಲ್ಲಿ ತಲೆಮರೆಸಿಕೊಂಡಿದ್ದ ಪುಣೆಯ ಐಸಿಸ್ ಮಾಡ್ಯೂಲ್ ಪ್ರಕರಣದ ಇಬ್ಬರು ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಹಾ ಲಿಯಾಕತ್ ಖಾನ್ ಎಂಬವರನ್ನು ಇಂಡೋನೇಷ್ಯಾದಲ್ಲಿ ಬಂಧಿಸಿ ಭಾರತಕ್ಕೆ ರವಾನಿಸಲಾಗಿದ್ದು, ಮುಂಬಯಿಯಲ್ಲಿ ಬಂಧಿಸಲಾಗಿದೆ. ಅವರನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಮಹಾರಾಷ್ಟ್ರ, ಗುಜರಾತ್ ಮತ್ತು ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಐಸಿಸ್ ಪ್ರಾಯೋಜಿತ ಪಿತೂರಿಯಲ್ಲಿ ಇಬ್ಬರೂ ತೊಡಗಿದ್ದರು. ಐಇಡಿ ಸ್ಫೋಟದ ಕಾರ್ಯಾಗಾರಗಳನ್ನು ಆಯೋಜಿಸುವುದು, ಗುಂಡು ಹಾರಿಸುವ ಅಭ್ಯಾಸಕ್ಕಾಗಿ ಸ್ಥಳಗಳನ್ನು ಹುಡುಕುವುದು ಮತ್ತು ಕಾಡುಗಳಲ್ಲಿ ಅಡಗಿಕೊಳ್ಳುವುದು, ಹಾಗೆಯೇ ಸಶಸ್ತ್ರ ದರೋಡೆ ಮತ್ತು ಕಳ್ಳತನದ ಮೂಲಕ ಹಣವನ್ನು ಸಂಗ್ರಹಿಸುವುದು ಮುಂತಾದ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ‘ದಿಯಾಪರ್‌ವಾಲಾ’ ಪುಣೆಯ ಕೊಂಡವದಲ್ಲಿರುವ ಮಿತಾನಗರ ನಿವಾಸಿ, ತಲ್ಹಾ ಲಿಯಾಕತ್ ಖಾನ್ ಪುಣೆಯ ವನ್ವಾಡಿ ವಾಸಿಸುತ್ತಿದ್ದರು. ಇಬ್ಬರೂ ತಲೆಮರೆಸಿಕೊಂಡಿದ್ದರು.. ಅವರ ಸುಳಿವಿಗಾಗಿ ಎನ್‌ಐಎ 3 ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *