
ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ತುಳು ಸಿನಿಮಾ ಜೀಟಿಗೆ ನಿರ್ಮಾಪಕ ಅರುಣ್ ರೈ(Arun Rai) ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಅರುಣ್ ರೈ ವಿರುದ್ಧ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡದ ವೀರಕಂಬಳ ಸಿನಿಮಾವನ್ನು ಸಹ ಅರುಣ್ ನಿರ್ಮಾಣ ಮಾಡುತ್ತಿದ್ದರು. ದೂರು ದಾಖಲಾದ ಬೆನ್ನಲ್ಲೆ ಬಂಧನ ಭೀತಿಯಿಂದಾಗಿ ಅರುಣ್ ರೈ ನಾಪತ್ತೆ ಆಗಿದ್ದಾರೆ.


ಸಿನಿಮಾದ ಲಾಭಾಂಶದಲ್ಲಿ 60 ಲಕ್ಷ ಕೊಡುವುದಾಗಿ ನಿರ್ಮಾಪಕ ಅರುಣ್ ರೈ ಉದ್ಯಮಿಗೆ ನಂಬಿಸಿದ್ದರು. ಕೋವಿಡ್ ವೇಳೆ ಬಂಟ್ವಾಳ ಮೂಲದ ಉದ್ಯಮಿಗೆ 25 ಕೋಟಿ ನಷ್ಟವಾಗಿತ್ತು. ಗೇರು ಬೀಜ ಸಂಸ್ಕರಣ ಘಟಕದಲ್ಲಿ 25 ಕೋಟಿ ರೂಪಾಯಿ ಹಣ ನಷ್ಟವಾಗಿತ್ತು. ಉದ್ಯಮಯ ನಷ್ಟದ ಕಥೆ ಪ್ಲಸ್ ಪಾಯಿಂಟ್ ಅನ್ನು ಅರುಣ್ ರೈ ಅವರು ಮಾಡಿಕೊಂಡಿದ್ದರು. ನನ್ನ ಕಂಪನಿಯಲ್ಲಿ ಹೂಡಿಕೆ ಮಾಡಿ ನಷ್ಟ ಸರಿದೂಗಿಸುತ್ತೇನೆ ಅಂತ ಅರುಣ್ ರೈ ಹೇಳಿದ್ದರು.
ಅಲ್ಲದೆ ದೆಹಲಿಯಲ್ಲಿ 400 ಕೋಟಿ ಹಣ ಹೂಡಿಕೆ ಮಾಡಿದ್ದೇನೆ ಎಂದು ತಿಳಿಸಿದರು. ತಮಿಳುನಾಡಿನ ದಿಂಡಿಗಲ್ ಕಾಳಿ ಸ್ವಾಮಿಯಿಂದ 50 ಕೋಟಿ ಬರಬೇಕಿದೆ ಪಳನಿ ದೇವಾಲಯದ ಟ್ರಸ್ಟ್ ನಿಂದಲೂ ಕೂಡ ಸಾಲ ಕೊಡಿಸುತ್ತೇನೆ. ಜಾರ್ಖಂಡ್ ಸರ್ಕಾರದಿಂದ 50 ಕೋಟಿ ಕೆಲಸದ ಬಿಲ್ ಬಾಕಿ ಇದೆ ಬೆಂಗಳೂರಿನ ಹಲವು ಕಂಪನಿಗಳನ್ನು ತೋರಿಸಿ ಇದು ಎಲ್ಲ ನನ್ನದು ಎಂದು ನಿರ್ಮಾಪಕ ಹೇಳಿದ್ದರು.


ಬೆಂಗಳೂರಿನ ಹಲವು ಕಂಪನಿ ಹಾಗೂ ಕಟ್ಟಡಗಳನ್ನ ತೋರಿಸಿ ಇದೆಲ್ಲವೂ ತನ್ನದೇ ಎಂದು ಹೇಳಿದ್ದ ನಿರ್ಮಾಪಕರ ಅರುಣ್, HSR ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಜಾಜಿನಗರ, ತುಮಕೂರು ಮೈಸೂರಿನ ಹಲವು ಕಡೆ ಕಚೇರಿಗಳಿಗೆ ಕರೆದೊಯ್ದಿದ್ದ ಅವೆಲ್ಲವೂ ತನ್ನದೇ ಎಂದು ಹೇಳಿಕೊಂಡಿದ್ದ. ದುಬೈ, ಗಾಂಬಿಯಾ, ಘಾನ, ಉದುಬಿತ್ಥಾನ, ಮಲೇಷ್ಯಾಗಳಲ್ಲಿ ಅಂತರಾಷ್ಟ್ರೀಯ ವ್ಯವಹಾರ ನನಗೆ ಇದೆ, ಟೆಸ್ಲಾ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ರ ಆಪ್ತ ಸಹ ತನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದಾನೆ ಎಂದು ಅರುಣ್ ಸುಳ್ಳಿನ ಮೇಲೆ ಸುಳ್ಳು ಹೇಳಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

9 ಕೋಟಿ ಹೆಚ್ಚು ಹಣವನ್ನು ಬಂಟ್ವಾಳ ಮೂಲದ ಉದ್ಯಮಿ ಹೂಡಿಕೆ ಮಾಡಿದ್ದಾರೆ. ಹಲವರಿಂದ ಸಾಲ ಪಡೆದು ಉದ್ಯಮಿ 9 ಕೋಟಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ಈ ವೇಳೆ ನಕಲಿ ಕರಾರು ಪತ್ರ ಸೃಷ್ಟಿಸಿ ಉದ್ಯಮಿಯಿಂದ ಹಣ ಪಡೆದು ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಾನು ಮೋಸ ಹೋಗಿರುವುದು ತಿಳಿದ ನಂತರ ಉದ್ಯಮಿ, ಅರುಣ್ ರೈ, ಆತನ ಸಹೋದರ ಅರ್ಜುನ್ ರೈ, ಬನಶಂಕರಿ ರಘು, ಮುಳಬಾಗಿಲು ಗೋವಿಂದಪ್ಪ, ಕೆ.ಪಿ.ಶ್ರೀನಿವಾಸ್ ಎಂಬುವವರ ವಿರುದ್ದ ದೂರು ನೀಡಿದ್ದಾರೆ.