ಬಜಪೆ : ದನದ ಮಾಂಸ ಸಾಗಾಟ – ಇಬ್ಬರ ಬಂಧನ

0 0
Read Time:2 Minute, 35 Second

ಬಜಪೆ: ಬಜಪೆ ಪೋಲಿಸ್ ಠಾಣಾ ವ್ಯಾಪ್ತಿಯ ಬಡಗ ಎಡಪದವು ಗ್ರಾಮದ ಬೈತಾರಿ ಎಂಬಲ್ಲಿನ ಗೋಪಾಲಕೃಷ್ಣ ಭಜನಾ ಮಂದಿರದ ಬಳಿ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತಿದ್ದ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂಡುಬಿದ್ರೆಯ ಹಂಡೇಲು ನಿವಾಸಿಗಳಾದ ಮೊಹಮ್ಮದ್ ಆರೀಫ್ (24) ಹಾಗೂ ಮೊಹಮ್ಮದ್ ಸುಲ್ತಾನ್ (19) ಎಂದು ಗುರುತಿಸಲಾಗಿದೆ.

ಬಜಪೆ ಪೊಲೀಸ್ ಠಾಣೆಯ ಪಿ.ಎಸ್.ಐ ರೇವಣಸಿದ್ದಪ್ಪ ರವರು ಸಿಬ್ಬಂದಿಯೊಂದಿಗೆ ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಬೈತಾರಿ ಎಂಬಲ್ಲಿ ಗೋಪಾಲಕೃಷ್ಣ ಭಜನಾ ಮಂದಿರದ ಬಳಿ ತಪಾಸಣೆ ವೇಳೆ ವಾಹನದಲ್ಲಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಒಟ್ಟು 750 ಕೆ.ಜಿ ತೂಕದ ದನದ ಮಾಂಸವನ್ನು ತುಂಬಿಸಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು , ನ್ಯಾಯಾಂಗ ಬಂಧನದಲ್ಲಿದ್ದಾರೆ.ವಿಚಾರಣೆ ಸಮಯ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿತರ ಜೊತೆ ಸೇರಿ ಕಾರ್ಕಳ, ಹೆಬ್ರಿ ಕಡೆಗಳಿಂದ ದನಗಳನ್ನು ತಂದು ಮೂಡುಬಿದ್ರೆ ತಾಲೂಕು ಪುತ್ತಿಗೆ ಗ್ರಾಮದ ಮುಂಡೇಲು ಎಂಬಲ್ಲಿ ಪರವಾಣಿಗೆ ಇಲ್ಲದೆ ಅಕ್ರಮವಾಗಿ ಕಡಿದು ಮಾಂಸ ಮಾಡಿರುದು ದೃಡಪಟ್ಟಿದೆ.ಆರೋಪಿ ಮೊಹಮ್ಮದ್ ಆರೀಫ್ ನ ವಿರುದ್ದ ಚಿಕ್ಕಮಗಳೂರು ಜಿಲ್ಲೆಯ ಬನಕಲ್ ಮತ್ತು ಬಜಪೆ ಪೊಲೀಸ್ ಠಾಣೆಯಲ್ಲಿ ದನ ಕಳವು ಪ್ರಕರಣಗಳು ದಾಖಲಾಗಿದೆ.ಪ್ರಮುಖ ಆರೋಪಿಗಳ ಪತ್ತೆಗೆ ಬಾಕಿಇದ್ದು, ಪೊಲೀಸರು ಇವರ ಪತ್ತೆಯ ಬಗ್ಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪತ್ತೆ ಕಾರ್ಯದಲ್ಲಿ ಬಜಪೆ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ ಪಿ.ಎಸ್.ಐ ರೇವಣಸಿದ್ದಪ್ಪ, ಪಿ.ಎಸ್.ಐ ಕುಮಾರೇಶನ್, ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರಾದ ರಶೀದ ಶೇಖ್, ಸುಜನ್, ದೇವಪ್ಪ ಹೊಸಮನಿ, ದುರ್ಗಾಪ್ರಸಾದ, ಜಗದೀಶ್, ಬಸವರಾಜ್ ಪಾಟೀಲ್, ಪ್ರೇಮ್ ಕುಮಾರ್, ಭಿಮಪ್ಪ, ಭರಮಾ ಬಡಿಗೇರ್, ಪ್ರಕಾಶ್, ಚಂದ್ರಕಾಂತ್, ಚಿದಾನಂದ, ವಿರುಪಾಕ್ಷ ಮತ್ತು ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *