
ಅಮೆರಿಕದಲ್ಲಿ ಶಾರ್ಟ್ ವಿಡಿಯೋ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ನಿಷೇಧಿಸುವ ಗಡುವು ಪೂರ್ಣಗೊಳ್ಳುವ ಮುನ್ನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅಮೆರಿಕದ ಖರೀದಿದಾರರನ್ನು ಹುಡುಕಲು ಡೊನಾಲ್ಡ್ ಟ್ರಂಪ್ ಟಿಕ್‌ಟಾಕ್‌ಗೆ 75 ದಿನಗಳ ಕಾಲಾವಕಾಶ ನೀಡಿದ್ದಾರೆ. ಈ ಸಂಬಂಧ ಟ್ರಂಪ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಕೆಲ ದಿನಗಳ ಹಿಂದೆ ಟಿಕ್‌ಟಾಕ್ ಖರೀದಿಸಲು ಅಮೆಜಾನ್ ಪ್ರಯತ್ನಿಸಿತ್ತು ಎಂಬುದು ಗಮನಾರ್ಹ.


ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿ, ”ಟಿಕ್‌ಟಾಕ್ ಉಳಿಸಲು ನನ್ನ ಆಡಳಿತವು ತುಂಬಾ ಶ್ರಮಿಸುತ್ತಿದೆ. ಇದರಲ್ಲಿ ನಾವು ಅಗಾಧ ಪ್ರಗತಿ ಸಾಧಿಸಿದ್ದೇವೆ. ಈ ಒಪ್ಪಂದಕ್ಕೆ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ಪಡೆಯಲು ಹೆಚ್ಚಿನ ಕೆಲಸ ಅಗತ್ಯವಿದೆ. ಆ ಕಾರಣದಿಂದಾಗಿ ಟಿಕ್‌ಟಾಕ್ ಅನ್ನು ಹೆಚ್ಚುವರಿಯಾಗಿ 75 ದಿನಗಳವರೆಗೆ ಚಾಲನೆಯಲ್ಲಿಡಲು ನಾನು ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕುತ್ತಿದ್ದೇನೆ. ಒಪ್ಪಂದವನ್ನು ಪೂರ್ಣಗೊಳಿಸಲು ಟಿಕ್‌ಟಾಕ್ ಮತ್ತು ಚೀನಾದೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ” ಎಂದು ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಟಿಕ್‌ಟಾಕ್ ಸಂಕಷ್ಟ: ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಚೀನಾದವರಾಗಿದ್ದು, ಈ ಅಪ್ಲಿಕೇಶನ್ ಬಳಕೆದಾರರ ಡೇಟಾವನ್ನು ಚೀನಾ ಸರ್ಕಾರದೊಂದಿಗೆ ಹಂಚಿಕೊಳ್ಳಬಹುದು ಎಂಬುದು ಅಮೆರಿಕದ ಆತಂಕವಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಕರೆದ ಅಮೆರಿಕ, ಬೈಟ್‌ಡ್ಯಾನ್ಸ್ ಟಿಕ್‌ಟಾಕ್‌ನ ಮಾಲೀಕತ್ವವನ್ನು ಅಮೆರಿಕನ್ ಕಂಪನಿಗೆ ಹಸ್ತಾಂತರಿಸಬೇಕು ಅಥವಾ ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂಬ ಕಾನೂನನ್ನು ಜಾರಿಗೆ ತಂದಿತ್ತು.


ಬೈಟ್‌ಡ್ಯಾನ್ಸ್ ಬ್ರೌಸಿಂಗ್ ಹಿಸ್ಟರಿ, ಸ್ಥಳ ಮತ್ತು ಬಯೋಮೆಟ್ರಿಕ್ಸ್‌ನಂತಹ ಬಳಕೆದಾರರ ಡೇಟಾವನ್ನು ಚೀನಾದ ಸರ್ವಾಧಿಕಾರಿ ಸರ್ಕಾರದೊಂದಿಗೆ ಹಂಚಿಕೊಳ್ಳಬಹುದು ಎಂದು ಎಫ್‌ಬಿಐ ಮತ್ತು ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ ಎರಡೂ ಎಚ್ಚರಿಸಿದ್ದವು. ಆದರೆ ಟಿಕ್‌ಟಾಕ್, ಇದನ್ನು ಎಂದಿಗೂ ಮಾಡಿಲ್ಲ ಮತ್ತು ಹಾಗೆ ಮಾಡುವ ಉದ್ದೇಶವಿಲ್ಲ ಎಂದು ಹೇಳಿದೆ. ಈ ಬಗ್ಗೆ ಅಮೆರಿಕ ಸರ್ಕಾರ ಯಾವುದೇ ಪುರಾವೆಗಳನ್ನೂ ಒದಗಿಸಿಲ್ಲ ಎಂದು ಟಿಕ್‌ಟಾಕ್ ಹೇಳಿದೆ. ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಟಿಕ್‌ಟಾಕ್‌ಗೆ ನಿಷೇಧದಿಂದ ಕೆಲವು ದಿನಗಳ ವಿನಾಯಿತಿ ನೀಡಿದ್ದರು.

ಟಿಕ್‌ಟಾಕ್ ಖರೀದಿಗೆ ಸ್ಪರ್ಧಿಗಳು ಯಾರು?: ಅಮೆರಿಕದಲ್ಲಿನ ಟಿಕ್‌ಟಾಕ್ ಕಾರ್ಯಾಚರಣೆಗಳನ್ನು ಖರೀದಿಸಲು ಅನೇಕ ದೊಡ್ಡ ಕಂಪನಿಗಳು ಪೈಪೋಟಿಯಲ್ಲಿವೆ. ಅವುಗಳಲ್ಲಿ ಮೊದಲನೆಯದು ಟೆಕ್ ಕಂಪನಿ ಒರಾಕಲ್. ಇದು ಈಗಾಗಲೇ ಟಿಕ್‌ಟಾಕ್ ಗ್ಲೋಬಲ್‌ನಲ್ಲಿ 12.5% ಪಾಲನ್ನು ಹೊಂದಿದೆ ಮತ್ತು ಅದರ ಕ್ಲೌಡ್ ತಂತ್ರಜ್ಞಾನ ಪಾಲುದಾರ ಕೂಡ ಆಗಿದೆ.
ಇದಲ್ಲದೆ ಹೂಡಿಕೆ ಸಂಸ್ಥೆ ಬ್ಲಾಕ್‌ಸ್ಟೋನ್ ಕೂಡ ಟಿಕ್‌ಟಾಕ್ ಖರೀದಿಸಲು ಆಸಕ್ತಿ ತೋರಿಸುತ್ತಿದೆ. AI ಸ್ಟಾರ್ಟ್ಅಪ್ ಪರ್ಪ್ಲೆಕ್ಸಿಟಿ AI ಕೂಡ ಟಿಕ್‌ಟಾಕ್‌ನ ಅಮೆರಿಕನ್ ವ್ಯವಹಾರವನ್ನು ತನ್ನೊಂದಿಗೆ ವಿಲೀನಗೊಳಿಸಲು ಪ್ರಸ್ತಾಪಿಸಿದೆ. ಟಿಕ್‌ಟಾಕ್‌ನ ಅಲ್ಗಾರಿದಮ್ ಅನ್ನು ಅಮೆರಿಕದ ಡೇಟಾ ಭದ್ರತಾ ಮಾನದಂಡಗಳಿಗೆ ಅನುಗುಣವಾಗಿ ಮರುವಿನ್ಯಾಸಗೊಳಿಸುವುದಾಗಿ ಕಂಪನಿ ಹೇಳಿದೆ.
ಬಿಲಿಯನೇರ್ ಫ್ರಾಂಕ್ ಮೆಕ್‌ಕಾರ್ಡ್ ಅವರ ಒಕ್ಕೂಟವೂ ಸಹ ಟಿಕ್‌ಟಾಕ್‌ಗಾಗಿ 20 ಬಿಲಿಯನ್ ಡಾಲರ್‌ಗಳನ್ನು ನೀಡಿದೆ ಮತ್ತು ರೆಡ್ಡಿಟ್ ಸಹ-ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಅವರು ಸಲಹೆಗಾರರಾಗಿ ಮಂಡಳಿಯಲ್ಲಿದ್ದಾರೆ. ಅಲ್ಲದೆ, Employer.com ಸಂಸ್ಥಾಪಕ ಜೆಸ್ಸಿ ಟಿನ್ಸ್ಲೆ 30 ಬಿಲಿಯನ್ ಡಾಲರ್ ಮತ್ತು ವ್ಯೋಮಿಂಗ್ ಉದ್ಯಮಿ ರೀಡ್ ರಾಸ್ನರ್ 47.5 ಬಿಲಿಯನ್ ಡಾಲರ್ ನೀಡುವುದಾಗಿ ಹೇಳಿದ್ದಾರೆ.
ಟಿಕ್‌ಟಾಕ್‌ನ ಭವಿಷ್ಯ ಹೇಗಿರುತ್ತದೆ?: ಟಿಕ್‌ಟಾಕ್ ನಿಷೇಧ ಅಥವಾ ಮಾರಾಟದಿಂದಾಗಿ ಅಮೆರಿಕ ಆಡಳಿತದ ನೀತಿಯಲ್ಲಿ ಮಹತ್ತರ ಬದಲಾವಣೆಯಾಗುವ ಸಾಧ್ಯತೆ ಇದೆ. ಕುತೂಹಲಕರವೆಂಬಂತೆ, ಸ್ವತಃ ಟ್ರಂಪ್ ಕೂಡ ಟಿಕ್‌ಟಾಕ್‌ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದು, ಯುವ ಮತದಾರರನ್ನು ಅವರಿಗೆ ಇದೊಂದು ಪ್ರಮುಖ ವೇದಿಕೆಯಾಗಿತ್ತು.