ಮಂಗಳೂರು – ಮುಂಬಯಿ ಸಹಿತ 10 ವಿಮಾನಗಳಿಗೆ ಮತ್ತೆ ಬೆದರಿಕೆ ಕರೆ

0 0
Read Time:1 Minute, 6 Second

ಮಂಗಳೂರು: ಸೋಮವಾರವೂ ಮಂಗಳೂರಿನಿಂದ ಹೊರಡುವ ವಿಮಾನ ಸಹಿತ ಒಟ್ಟು 10 ವಿಮಾನಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಬೆದರಿಕೆ ಕರೆ ಬಂದಿರುವ ಪ್ರಕರಣ ವರದಿಯಾಗಿದೆ. ಇದರಲ್ಲಿ ಮಂಗಳೂರಿನಿಂದ ಮುಂಬಯಿಗೆ ಹೋಗುವ ಇಂಡಿಗೋ ವಿಮಾನವೂ ಸೇರಿತ್ತು. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಚೇತನ್ ಸಿಂಗ್ ಎಂಬಾತನ ಖಾತೆಯಿಂದ ಈ ಬೆದರಿಕೆ ಸಂದೇಶ ಬಂದಿದ್ದು, ಮಂಗಳೂರು ವಿಮಾನ ನಿಲ್ದಾಣದವರು ನೀಡಿರುವ ದೂರಿನಂತೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ರಾತ್ರಿ ಮಂಗಳೂರಿನಿಂದ ಮುಂಬಯಿಗೆ ಹೊರಡುವ ಇ-164 ವಿಮಾನದಲ್ಲಿ ಬಾಂಬ್‌ ಇರಿಸಿರುವದಾಗಿ ಬೆದರಿಕೆ ಇತ್ತು. ಆದರೆ ಈ ಎಕ್ಸ್ ಸಂದೇಶ ಹಾಕುವಾಗ ವಿಮಾನ ಮುಂಬಯಿಯಲ್ಲಿ ಇಳಿದಾಗಿತ್ತು. ಹಾಗಾಗಿ ಇದು ಹುಸಿ ಬೆದರಿಕೆಯಾಗಿರಬಹುದು ಎಂದು ಬಜಪೆ ಠಾಣೆ ಪೊಲೀಸರು ತಿಳಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *