
Read Time:1 Minute, 18 Second
ಪಡುಬಿದ್ರಿ : ಖಾಸಗಿ ವೇಗದೂತ ಬಸ್ಸಿನ ಚಾಲಕನಿಗೆ ಅಪಸ್ಮಾರ ಸಂಭವಿಸಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಧರಗೆ ಚಲಿಸಿದ ಘಟನೆ ಬುಧವಾರ ಬೆಳಿಗ್ಗೆ ಎರ್ಮಾಳು ತೆಂಕ ಜಾಮಿಯಾ ಮಸೀದಿ ಬಳಿ ಸಂಭವಿಸಿದೆ.


ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ವೇಗದೂತ ಬಸ್ಸಿನ ಚಾಲಕ ಶಂಭು ಮುಲ್ಕಿಯವರು ಎರ್ಮಳು ತೆಂಕ ಸಮೀಪಿಸುತ್ತಿದ್ದಂತೆ ಅವರಿಗೆ ಅಪಸ್ಮಾರ ಸಂಭವಿಸಿದೆ. ಇದೇ ಸಂದರ್ಭ 24 ಬಸ್ಸು ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಧರೆಗೆ ಚಲಿಸಿದೆ.
ಈ ಸಂದರ್ಭ ಮೂರು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿ, ವಿದ್ಯುತ್ ತಂತಿಗಳು ತುಂಡಾಗಿ, ವಿದ್ಯುತ್ ವ್ಯತ್ಯಯ ಉಂಟಾಗಿದೆ.ಬಸ್ಸಿನಲ್ಲಿದ್ದ ಹತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಅಂಬುಲೆನ್ಸ್ ಮೂಲಕ ಉಡುಪಿ ಆಸ್ಪತ್ರೆಗೆ ರವಾನಿಸಲಾಗಿದೆ.


ಚಾಲಕ ಶಂಬುರವರು ಚೇತರಿಸುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
