
Read Time:54 Second
ಉಡುಪಿ : ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಸಾಲ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಆಣೆ ಪ್ರಮಾಣ ಕಾರ್ಯಕ್ರಮ ಸಂದರ್ಭದಲ್ಲಿ ಅನ್ಯಕೋಮಿನ ಮಂದಿ ದೇವಾಲಯ ಪ್ರವೇಶಿಸಿರುವುದು ಹಿಂದೂಗಳ ಕಣ್ಣು ಕೆಂಪಾಗಿಸಿದೆ.


ತಲೆತಲಾಂತರದಿಂದ ಪಾಲಿಸಿಕೊಂಡು ಬಂದ ಹಿಂದೂ ಧರ್ಮಾಚರಣೆಗೆ ವಿರುದ್ಧವಾಗಿ ಗೋಮಾಂಸ ಭಕ್ಷಕರು ಮಾತ್ರವಲ್ಲದೇ ಮೂರ್ತಿ ಪೂಜೆ ವಿರೋಧಿಗಳು ಆಲಯ ಪ್ರವೇಶಿಸುವ ಮೂಲಕ ದೇವಳದ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗಿದೆ.
ದೇವಳದ ಆಡಳಿತ ಮೊಕ್ತೇಸರ ಮಾಜಿ ಶಾಸಕ ರಘುಪತಿ ಭಟ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

