
ಮಂಗಳೂರು ಮಂಡಲ ಬಿ.ಜೆ.ಪಿ ವತಿಯಿಂದ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ 2024 ಮತದಾರರ ಸಂವಾದ ಕಾರ್ಯಕ್ರಮ ಅಸೈಗೋಳಿ ಬಂಟರ ಭವನದಲ್ಲಿ ಆದಿತ್ಯವಾರ ನಡೆಯಿತು.



ಉಳ್ಳಾಲದ ಮಾಜಿ ಶಾಸಕ ಜಯರಾಮ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಮಾತನಾಡಿ ಪದವೀಧರರು ಅನುಭವಿಸುತ್ತಿರುವ ತೊಂದರೆ ನನಗೆ ತಿಳಿದಿದೆ ಅವರ ಧ್ವನಿಯಾಗಿ ಕೆಲಸಮಾಡುತ್ತೇನೆ, 85 ಸಾವಿರ ಮತದಾರರಿದ್ದು ಅವರೆಲ್ಲರನ್ನೂ ಸಂಪರ್ಕಿಸಿಸಲು ಸಾಧ್ಯವಿಲ್ಲ ಆದ್ದರಿಂದ ಕಾರ್ಯಕರ್ತರಾದ ನೀವೆಲ್ಲರೂ ಸಂಪರ್ಕಿಸಿ ಮತಯಾಚಿಸಬೇಕು,
ನನ್ನಲ್ಲಿರುವ ಶಕ್ತಿ ಸಂಘಟನೆ, ನನ್ನ ಮನಸ್ಸು, ಕಾರ್ಯವೈಕ್ಯತೆ ಎಲ್ಲವೂ ಸಂಘಟನೆಯಾಗಿದೆ ಎಂದರು.
ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್ ಬೋಜೇಗೌಡ ಮಾತನಾಡಿ ಶಿಸ್ತು , ಪಕ್ಷ ನಿಷ್ಠೆ, ಸಂಘಟನೆಗೆ ಹೆಸರುವಾಸಿಯಾದ ಪಕ್ಷ ಬಿ.ಜೆ.ಪಿಯಾಗಿದೆ, ಕಾರ್ಯಕರ್ತರು ಮತದಾರರೊಂದಿಗೆ ಉತ್ತಮ ಸಂಭಂದ ಹೊಂದಿ ಸಂಭಂದದ ಸೇತುವೆಯಾಗಿ ಕೆಲಸಮಾಡಬೇಕು ಎಂದರು.

ಬಿ.ಜೆ.ಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.
ದ.ಕ ಜಿಲ್ಲಾ ಲೋಕ ಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ, ಜೆ.ಡಿ.ಎಸ್ ಯುವ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ, ಪದವೀಧರ ಕ್ಷೇತ್ರದ ಸಂಚಾಲಕ ವಿಕಾಸ್ ಪುತ್ತೂರು, ರಾಜ್ಯ ಸಂಯೋಜಕ ದತ್ತಾತ್ರೇಯ, ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಾಜಿ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದಿನೇಶ್ ಅಂಟೂರು, ಆರ್.ಸಿ ನಾರಾಯಣ, ಗೀತಾ ದಾಮೋಧರ್, ಮಾಂತೇಶ್ ಶಿವಮೊಗ್ಗ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಮಂಡಲ ಬಿ.ಜೆ.ಪಿ ಅಧ್ಯಕ್ಷ ಜಗದೀಶ್ ಆಳ್ವ ಕುವ್ವತ್ತಬೈಲ್ ಸ್ವಾಗತಿಸಿದರು, ಜೀವನ್ ಕುಮಾರ್ ತೊಕ್ಕೋಟ್ಟು ಕಾರ್ಯಕ್ರಮ ನಿರೂಪಿಸಿದರು, ದಯಾನಂದ್ ತೊಕ್ಕೋಟ್ಟು ವಂದಿಸಿದರು,
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಾಸ್ತವಿಕವಾಗಿ ಮಾತನಾಡಿದರು, ಹರಿಯಪ್ಪ ಸಾಲಿಯಾನ್ ವರದಿವಾಚಿಸಿದರು.

