
ಸಮಾಜವು ಹೆಚ್ಚು ಆಧುನಿಕವಾಗುತ್ತಿದ್ದಂತೆ, ಮನುಷ್ಯರಲ್ಲಿ ಕ್ರೂರತ್ವ ಕೂಡ ಹೆಚ್ಚಾಗುತ್ತಿದೆ. ಕೇರಳ ಒಂದು ಕಂಪನಿಯಲ್ಲಿ ತಮ್ಮ ಸಿಬ್ಬಂದಿಯನ್ನು ನಾಯಿಗಿಂತ ಕಡೆಯಾಗಿ ನಡೆಸಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನಾಯಿಯಂತೆ ಕೇವಲ ನೋಟದಿಂದ ನೋಡುವುದಲ್ಲ ಬದಲಾಗಿ ಸಿಬ್ಬಂದಿ ಕುತ್ತಿಗೆಗೆ ಸರಪಳಿ ಕಟ್ಟಿ ನಾಯಿಯಂತೆ ನಡೆಸಿಕೊಂಡು ಹೋಗುತ್ತಾರೆ, ಪರಸ್ಪರ ಗುಪ್ತಾಂಗವನ್ನು ಹಿಡಿಯಬೇಕು, ನಾಯಿಯಂತೆ ನಡೆಯಬೇಕು, ನಾಯಿಯಂತೆ ತಿನ್ನಬೇಕು ಈ ರೀತಿ ಕ್ರೂರವಾದ ಶಿಕ್ಷೆಯನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ.


ಕೇರಳದ ಕೊಚ್ಚಿಯಲ್ಲಿರುವ ಹಿಂದೂಸ್ತಾನ್ ಪವರ್ ಲಿಂಕ್ಸ್ ಎಂಬ ಕಂಪನಿಯಲ್ಲಿ ಉದ್ಯೋಗಿಗಳನ್ನು ನಾಯಿಗಳಂತೆ ಕಿರುಕುಳ ನೀಡಲಾಗುತ್ತಿದೆ .ಕಂಪನಿಯ ಗುರಿಗಳನ್ನು ತಲುಪದ ಉದ್ಯೋಗಿಗಳ ಜೊತೆ ಮ್ಯಾನೇಜರ್ ಕ್ರೂರವಾಗಿ ವರ್ತಿಸುತ್ತಿರುವುದನ್ನು ತೋರಿಸುವ ವೀಡಿಯೊಗಳು ಬೆಳಕಿಗೆ ಬಂದಿವೆ.
ನಾಯಿಗಳಂತೆ ಬೆಲ್ಟ್‌ಗಳಿಂದ ಕಟ್ಟುವುದು, ನಾಲ್ಕು ಕಾಲುಗಳ ಮೇಲೆ ನಡೆಯುವುದು ಮತ್ತು ಬಾಯಿಂದ ನಾಣ್ಯಗಳನ್ನು ಎತ್ತಿಕೊಳ್ಳುವಂತೆ ಒತ್ತಾಯಿಸುವುದು ಸೇರಿದಂತೆ ನಾಯಿಗಳು ಮಾಡುವ ಕೆಲಸಗಳನ್ನು ನೌಕರರು ಮಾಡುವಂತೆ ಒತ್ತಾಯಿಸಲಾಯಿತು. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.


ಇವರೆಲ್ಲರೂ ಮಾರ್ಕೆಟಿಂಗ್ ಉದ್ಯೋಗಿಗಳಾಗಿದ್ದಾರೆ, ಅವರೆಲ್ಲರೂ ಮನೆ ಮನೆಗಳಿಗೆ ಹೋಗಿ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಲಸ ಹೊಂದಿದ್ದಾರೆ. ಟಾರ್ಗೆಟ್ ರೀಚ್ ಆಗಲು ವಿಫಲರಾದವರಿಗೆ ಇಂತಹ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅವರೆಲ್ಲರೂ 10 ಸಾವಿರಕ್ಕಿಂತಲೂ ಕಡಿಮೆ ಸಂಬಳ ಹೊಂದಿರುವವರಾಗಿದ್ದಾರೆ.

ಕಂಪನಿಯ ವರ್ತನೆಗೆ ಟೀಕೆಗೆ ಗುರಿಯಾಗಿರುವ ಕೇರಳ ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ ತಕ್ಷಣವೇ ತನಿಖೆಗೆ ಆದೇಶಿಸಿದರು. ಕಂಪನಿಯ ಮಾಲೀಕನನ್ನು ಈ ಹಿಂದೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ಗುರುತಿಸಲಾಗಿದೆ. ಅವರು ಪ್ರಸ್ತುತ ಜಾಮೀನಿನ ಮೇಲೆ ಇದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೌಕರರ ಹಕ್ಕುಗಳ ಕುರಿತು ಚರ್ಚೆಗೆ ನಾಂದಿ ಹಾಡಿದೆ.
ಆದರೆ, ಕಂಪನಿಯ ಮಾಲೀಕರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಘಟನೆಗೂ ತಮ್ಮ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಅವರು ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳುತ್ತಾರೆ.