
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ/ಕುಂಬಾರರ ಯುವವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಉಳ್ಳಾಲ ಇದರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವು ದಿನಾಂಕ ಮೇ.18ರಂದು ರವಿವಾರ ಶ್ರೀರಕ್ತೇಶ್ವರಿ ಅಮ್ಮನವರ ಸನ್ನಿಧಿ ಟ್ರಸ್ಟ್ (ರಿ.) ವಿದ್ಯಾನಗರ ನರಿಂಗಾನ ಇಲ್ಲಿ ನಡೆಯಿತು.


2024-25ನೇ ಸಾಲಿನಲ್ಲಿ ನಡೆದ SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಶ್ರೀ ವೈಷ್ಣವಿ ಕ್ಷೇತ್ರ ಮುಳಿಯ ದೀಪ ಪ್ರಜ್ವಲನೆ ಗೈದರು.
ಅಧ್ಯಕ್ಷತೆ ಶ್ರೀ ಅಂಬೆಂಬಳ ಸದಾಶಿವ ನಾವಡ ಅಧ್ಯಕ್ಷರು ಅಮ್ಮನವರ ಸನ್ನಿಧಿ ನರಿಂಗಾನ ವಹಿಸಿದ್ದರು.



ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳು:

ಅಪೇಕ್ಷಾ, ಪುಣ್ಯಕೋಟ ವಿದ್ಯಾನಗರ
ನಿಹರಿ, ವಿಶ್ವಮಂಗಳ, ದೇವಿನಗರ
ಸಾನ್ವಿ, ಪುಣ್ಯಕೋಟ
ತನ್ವಿತ ಕುಲಾಲ್, ಪುಣ್ಯಕೋಟ ಕೊಡಕಲ್
ಶೈಲಶ್ರೀ, ಪುಣ್ಯಕೋಟ
ವೀಕ್ಷಿತ್ ,ಪುಣ್ಯಕೋಟ ಬಾಕಿಮಾರ್
ಕೌಶಿಕ್, ಪುಣ್ಯಕೋಟ ಕೊಡಕಲ್
ರಕ್ಷಾ, ಪುಣ್ಯಕೋಟ ಅಂಬೈಲು
ಜಾನೇಶ್ ಕೆ.ವಿ, ನವೋದಯ ನಡುಪದವು
ತೇಜಸ್, ನವೋದಯ
ಕಾರ್ಯಕ್ರಮದಲ್ಲಿ ಕೃಷ್ಣ ಮೂಲ್ಯ ಕೈರಂಗಳ ಹಿರಿಯ ಯಕ್ಷಗಾನ ಕಲಾವಿದರು, ಮಂಜುನಾಥ ಮೂಲ್ಯ ಮಜಲು ಹಿರಿಯ ಪ್ರಗತಿಪರ ಕೃಷಿಕರು ಕುರ್ನಾಡು, ಲಯನ್ ಅನಿಲ್ ದಾಸ್ ಅಂಬಿಕಾ ರೋಡು, ಪೂವಪ್ಪ ಮುನ್ನಿಪ್ಪಾಡಿ ಮಾಜಿ ಅಧ್ಯಕ್ಷರು ಕುಲಾಲ ಸಂಘ ಪೈವಳಿಕೆ, ಶ್ರೀಮತಿ ಶಕೀಲಾ ಕೊಡಕಲ್ಲು ಸೇವಾ ಪ್ರತಿನಿಧಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸತೀಶ್ ಕುಲಾಲ್ ಚೇಳೂರು ಯುವ ಉದ್ಯಮಿ , ನವೀನ್ ಕುಲಾಲ್ ಪದಮಾಲೆ ಅಧ್ಯಕ್ಷರು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಉಳ್ಳಾಲ ವಿಧಾನಸಭಾ ಕ್ಷೇತ್ರ, ಪ್ರಾರ್ಥನೆ ಸ್ವಾಗತ ನಿರೂಪಣೆ ಹೇಮಚಂದ್ರ ಕೈರಂಗಳ, ಪುರಸ್ಕೃತ ಪ್ರತಿಭೆಗಳ ಪರಿಚಯ ಪ್ರವೀಣ್ ಅಮ್ಮoಬಳ ವಂದನಾರ್ಪಣೆ ಜಯಂತಿ ಸಂಕೋಳಿಗೆ ಉಪಸ್ಥಿತರಿದ್ದರು.