
ಕ್ರೇನ್ ಬಾಸ್ಕೆಟ್‌ನಿಂದ ಬಿದ್ದು ದುರಂತ: ಮನೆ ಸೋರಿಕೆ ಪರಿಶೀಲನೆ ವೇಳೆ ಅಪಘಾತ
ಉಡುಪಿ, ಜೂ. 14 : ಮನೆ ಸೋರಿಕೆಯನ್ನು ಪರಿಶೀಲಿಸಲು ಬಳಸುತ್ತಿದ್ದ ಕ್ರೇನ್ ಬಾಸ್ಕೆಟ್‌ನಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಕೋರ್ಟ್ ಬ್ಯಾಕ್ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ (ಪಿಡಬ್ಯೂಡಿ) ಕಚೇರಿ ಬಳಿ ಜೂನ್ 14 ರಂದು ನಡೆದಿದೆ. ಮನೆಯ ಮೇಲ್ಛಾವಣಿಯ ಸ್ಲ್ಯಾಬ್‌ನಲ್ಲಿನ ಸೋರಿಕೆಯನ್ನು ಪರಿಶೀಲಿಸಲು ಕ್ರೇನ್ ಅನ್ನು ಬಳಸಿಕೊಂಡು ಇಬ್ಬರು ವ್ಯಕ್ತಿಗಳನ್ನು ಅದರ ಬಾಸ್ಕೆಟ್‌ನಲ್ಲಿ ಮೇಲೆತ್ತಲಾಗುತ್ತಿತ್ತು. ಆದರೆ ಈ ವೇಳೆ ಬಾಸ್ಕೆಟ್ ಓರೆಯಾದ ಕಾರಣ, ಅದರಲ್ಲಿದ್ದ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಸ್ಥಳಕ್ಕೆ ಧಾವಿಸಿದ…