
ಕೊಲ್ಲೂರು ಮೂಕಾಂಬಿಕೆಗೆ 1 ಕೆ.ಜಿ. ನವರತ್ನ ಚಿನ್ನದ ಮುಖವಾಡ ಸಮರ್ಪಣೆ
ಕೊಲ್ಲೂರು : ಭಕ್ತರೊಬ್ಬರು ಶ್ರೀ ಮೂಕಾಂಬಿಕಾ ದೇವಿಗೆ ಕಾಣಿಕೆ ರೂಪದಲ್ಲಿ ನೀಡಿದ 1 ಕೆ.ಜಿ. (90 ಲಕ್ಷ ರೂ. ಮೌಲ್ಯ)ತೂಕದ ನವರತ್ನ ಕಲ್ಲುಗಳುಳ್ಳ ಚಿನ್ನದ ಮುಖವಾಡವನ್ನು ಬುಧವಾರ ಶ್ರೀದೇವಿಗೆ ಸಮರ್ಪಿಸಿದ್ದಾರೆ. ತುಮಕೂರು ಜಿಲ್ಲೆ ಶಿರಾದ ದಾನಿಗಳಾದ ಆಯುರ್ವೇದ ವೈದ್ಯ ಡಾ. ಕೆ. ಲಕ್ಷ್ಮೀನಾರಾಯಣ ಅವರು ದೇವಿಗೆ ಮುಖ ಸಮರ್ಪಣೆ ಮಾಡಿದರು. ಬೆಳಗ್ಗೆ ರಥಬೀದಿಯಿಂದ ವಾದ್ಯಘೋಷ ಗಳೊಡನೆ ಚಿನ್ನದ ಮುಖವಾಡವನ್ನು ದೇಗುಲಕ್ಕೆ ತರಲಾಯಿತು. ಅರ್ಚಕ ಕೆ.ಎನ್. ಸುಬ್ರಹ್ಮಣ್ಯ ಅಡಿಗ, ನರಸಿಂಹ ಭಟ್, ಕಾಳಿದಾಸ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆಯೊಂದಿಗೆ…