ಬಂಟ್ವಾಳದಲ್ಲಿ ಜೀಪ್ ಚಾಲಕನ ಮೇಲೆ ತಲವಾರ್ ದಾಳಿ: ಸೈಡ್ ಮಿರರ್ ಪುಡಿ ಪುಡಿ

ಬಂಟ್ವಾಳ : ಜೀಪ್ ಚಾಲನೆ ಮಾಡುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಅಪರಿಚಿತರು ತಲವಾರ್ ಬೀಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೇರಾಜೆ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಜೀಪ ಮುನ್ನೂರು ಗ್ರಾಮದ ಉಮರ್ ಫಾರೂಕ್ (48) ಎಂಬವರು 11.06.2025 ರಂದು ಮುಂಜಾನೆ, ಮನೆಯಿಂದ ಜೀಪ್ ನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಿರುವ ವೇಳೆ ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದ ವೇಳೆ ರಸ್ತೆಯಲ್ಲಿ ವಿರುದ್ದ…

Read More

ಪತಿ ನಾಪತ್ತೆ: ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹೆಬ್ರಿ: ಹೆಬ್ರಿಯ ತಮ್ಮ ಮನೆಯಿಂದ ಕೆಲಸಕ್ಕೆಂದು ಹೋದ ವ್ಯಕ್ತಿಯೊಬ್ಬರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ವಸಂತಿ ಎಂಬವರ ಪತಿ ಪ್ರಭಾಕರ(46ವರ್ಷ) ನಾಪತ್ತೆಯಾದವರು. ಪ್ರಭಾಕರ ಅವರು ಈ ಹಿಂದೆ ಸುಮಾರು 5-6 ಬಾರಿ ಮನೆಯಿಂದ ಕೆಲಸಕ್ಕೆಂದು ಹೋದವರು ಸುಮಾರು 2-3 ತಿಂಗಳವರೆಗೆ ಇದ್ದು ನಂತರ ಮನೆಗೆ ವಾಪಾಸಾಗುತ್ತಿದ್ದರು. ಆದರೆ 2023 ರ ಡಿಸೆಂಬರ್‌ನಲ್ಲಿ ಮನೆಯಿಂದ ಹೋದವರು ಈವರೆಗೂ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆಂದು ಅವರ ಪತ್ನಿ ದೂರು ನೀಡಿದ್ದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More