
ಕುಂದಾಪುರ ಮಹಿಳೆ ನಾಪತ್ತೆ ಪ್ರಕರಣ: ಮೂರು ದಿನಗಳಿಂದ ಹೀನಾ ಕೌಸರ್ ಸುಳಿವೇ ಇಲ್ಲ
ಕುಂದಾಪುರ, ಜೂ. 12 : ಕುಂದಾಪುರದ ವಡೇರಹೋಬಳಿ ಗ್ರಾಮದ ವಿಠಲವಾಡಿ, ಜೆಎಲ್‌ಬಿ ರಸ್ತೆಯ ನಿವಾಸಿ ಹೀನಾ ಕೌಸರ್(32) ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಇದುವರೆಗೂ ಅವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಪೊಲೀಸರು ಹೀನಾ ಕೌಸರ್ ಪತ್ತೆಗಾಗಿ ಎಲ್ಲ ಆಯಾಮಗಳಿಂದಲೂ ಹುಡುಕಾಟ ನಡೆಸುತ್ತಿದ್ದು, ಆದರೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆಕೆಯ ಮೊಬೈಲ್ ಸಹ ಸ್ವಿಚ್‌ಆಫ್ ಆಗಿದೆ. ಪತ್ನಿ ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿ ಮಹಮ್ಮದ್ ಇಕ್ಬಾಲ್ ಊರಿಗೆ ಮರಳಿದ್ದಾರೆ.ಜೆಎಲ್‌ಬಿ ರಸ್ತೆಯ ಮನೆಯಲ್ಲಿ ತಾಯಿ ಹಾಗೂ…