ESI ಆಸ್ಪತ್ರೆಗಳಲ್ಲಿ ಔಷಧಿ ಕೊರತೆ: ಕಾರ್ಮಿಕರಿಗೆ ತೀವ್ರ ಸಂಕಷ್ಟ, ಸಚಿವರ ‘ಮಾಹಿತಿ ಇಲ್ಲ’ ಹೇಳಿಕೆಗೆ ಆಕ್ರೋಶ!
ಮಂಗಳೂರು, ಜೂ. 28 : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಇಎಸ್‌ಐ ಆಸ್ಪತ್ರೆಗಳು ಮತ್ತು ಔಷಧಾಲಯಗಳು ಅಗತ್ಯ ಔಷಧಿಗಳ ಕೊರತೆಯನ್ನು ಎದುರಿಸುತ್ತಿದೆ. ಇದರಿಂದಾಗಿ ರೋಗಿಗಳಿಗೆ, ವಿಶೇಷವಾಗಿ ಈ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚು ಅವಲಂಬಿಸಿರುವ ಕಾರ್ಮಿಕ ವರ್ಗದವರಿಗೆ ತೊಂದೆಯುಂಟಾಗಿದೆ. ಇಎಸ್‌ಐ ಔಷಧಾಲಯಗಳಲ್ಲಿ ರೋಗಿಗಳಿಗೆ ದಿನ ಬಳಕೆಯ ಔಷಧಗಳು ಕೆಲವು ವಾರಗಳಿಂದ ಸಿಗುತ್ತಿಲ್ಲ. ಇದರಿಂದಾಗಿ ರೋಗಿಗಳು ಹೆಚ್ಚಿನ ಹಣ ಕೊಟ್ಟು ಖಾಸಗಿ ಔಷಧಾಲಯಗಳಲ್ಲಿ ಖರೀದಿಸಬೇಕಾಗಿದೆ.ಮಂಗಳೂರಿನ ಶಿವಬಾಗ್ ಬಳಿ ಇಎಸ್‌ಐ ಆಸ್ಪತ್ರೆ ಇದ್ದು, ಪುತ್ತೂರು, ಕುಲಶೇಖರ, ಪಣಂಬೂರು, ಕದ್ರಿ, ಬಿಜೈ, ಮೋರ್ಗನ್ಸ್…

