
ಅಹಮದಾಬಾದ್‌ನಲ್ಲಿ ವಿಮಾನ ಅಪಘಾತ: ಪತ್ತನಂತಿಟ್ಟ ನರ್ಸ್ ರಂಜಿತಾ ನಿಧನ
ಕೇರಳ : ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಮಾನ ಅಪಘಾತದಲ್ಲಿ ಕೇರಳ ಮೂಲದ ನರ್ಸ್ ಒಬ್ಬರು ಸಾವನಪ್ಪಿದ್ದಾರೆ. ರಂಜಿತಾ ಗೋಪಕುಮಾರನ್ ಅವರು ಕೇರಳದ ಪತ್ತನಂತಿಟ್ಟ ಜಿಲ್ಲೆಯವರು. ಯುನೈಟೆಡ್ ಕಿಂಗ್‌ಡಂನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಮನೆ ನಿರ್ಮಾಣದ ಮೇಲ್ವಿಚಾರಣೆಗಾಗಿ ರಜೆ ಮೇಲೆ ಕೇರಳಕ್ಕೆ ಬಂದಿದ್ದರು. ರಜೆ ಮುಗಿಸಿ ವಾಪಸ್ ಲಂಡನ್ ಗೆ ಹೊರಟಿದ್ದರು. ರಂಜಿತಾ ಅವರ ಕನಸಿನ ಹೊಸ ಮನೆಯ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಮಗಳನ್ನು ಕಳೆದುಕೊಂಡು ದುಃಖಿಸುತ್ತಿರುವ ತಾಯಿ, ತಾಯಿಗಾಗಿ ಅಳುತ್ತಿರುವ 10 ನೇ ತರಗತಿಯಲ್ಲಿ ಓದುತ್ತಿರುವ ಮಗ…