
ಆದಿಶಕ್ತಿ ಕ್ಷೇತ್ರದಲ್ಲಿ ಮರುಕಳ್ಳತನ ಯತ್ನ ವಿಫಲ – ಕಳ್ಳ ಪೊಲೀಸರ ವಶಕ್ಕೆ
ಹೆಬ್ರಿ : ಒಂದು ಬಾರಿ ದೈವಸ್ಥಾನದ ಕಾಣಿಕೆ ಹುಂಡಿ ಕದ್ದಿದ್ದ ಕಳ್ಳ ಮತ್ತೊಮ್ಮೆ ಅದೇ ದೈವಸ್ಥಾನದಲ್ಲಿ ಕಾಣಿಕೆ ಹುಂಡಿ ಕದಿಯಲು ಬಂದು ಸಿಕ್ಕಿಹಾಕಿಕೊಂಡ ಘಟನೆ ಮುದ್ರಾಡಿ ಗ್ರಾಮದ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರದಲ್ಲಿ ನಡೆದಿದೆ. ಈ ಹಿಂದೆ ಕಳ್ಳತನ ನಡೆದಾಗ ದೈವ ನೀಡಿದ್ದ ಅಭಯದಂತೆ ಕಳ್ಳ ಸಿಕ್ಕಿದ್ದು ದೈವದ ಕಾರಣಿಕ ಎಂದು ಜನರು ನಂಬಿದ್ದಾರೆ. ಮುದ್ರಾಡಿ ಗ್ರಾಮದ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರದಲ್ಲಿ ದೇವರ ಹುಂಡಿ ಹಾಗೂ ಕಲ್ಕುಡ ಕಲ್ಲುರ್ಟಿಯ ಕಾಣಿಕೆ ಡಬ್ಬಿಯಿಂದ ಮೇ…