ನರಿಕೊಂಬು: 13ನೇ ವಯಸ್ಸಿನಲ್ಲಿ ಮನೆ ಬಿಟ್ಟು 62 ವರ್ಷ ನಂತರ ಮನೆಗೆ ಮರಳಿದ ವ್ಯಕ್ತಿ

ಬಂಟ್ವಾಳ: ತನ್ನ 13ನೇ ವಯಸ್ಸಿನಲ್ಲಿ ಮನೆ ಬಿಟ್ಟು ಮುಂಬಯಿಗೆ ತೆರಳಿದ್ದ ನರಿಕೊಂಬಿನ ವ್ಯಕ್ತಿಯೊಬ್ಬರು ಸುಮಾರು 62 ವರ್ಷಗಳ ಬಳಿಕ ಮನೆಗೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ.ನರಿಕೊಂಬು ಗ್ರಾಮದ ಕರ್ಬೆಟ್ಟು ಗೌಂಡ್ಲೆಪಾಲ್‌ ಸಂಜೀವ ಪೂಜಾರಿ (75) ಅವರು 62 ವರ್ಷಗಳ ಹಿಂದೆ ಸ್ಥಳೀಯ ನಿವಾಸಿ ತನಿಯಪ್ಪ ಅವರ ಜತೆಗೆ ಮುಂಬಯಿಗೆ ಕೆಲಸಕ್ಕಾಗಿ ತೆರಳಿದ್ದರು. ಬಳಿಕ ತಾವು ಹೋಗಿದ್ದ ಕೆಲಸವನ್ನು ಬಿಟ್ಟು ಮನೆಯವರ ಸಂಪರ್ಕವನ್ನೂ ಕಳೆದುಕೊಂಡಿದ್ದರು.ಮನೆಯವರು ಅಂದು ಅವರನ್ನು ಹುಡುಕುವ ಪ್ರಯತ್ನ ಮಾಡಿದ್ದರೂ ಪತ್ತೆಯಾಗಿರಲಿಲ್ಲ. ಆದರೆ ಗುರುವಾರ ಮಧ್ಯಾಹ್ನ ಅವರು ನರಿಕೊಂಬಿಗೆ…

Read More