ಕಂಟೈನರ್ ಹಡಗಿನಲ್ಲಿ ಅಗ್ನಿ ಅವಘಡ: ಭಾರತೀಯ ನೌಕಾಪಡೆಯಿಂದ ಜೀವ ರಕ್ಷಣೆ ಕಾರ್ಯ

ಮಂಗಳೂರು: ಕೇರಳದ ಕೋಯಿಕ್ಕೋಡ್ ಬೇಪೂರ್ ಸಮೀಪ ಸಿಂಗಾಪುರದ ಕಂಟೈನರ್ ಹಡಗು ಎಂ.ವಿ ವಾನ್ ಹಾಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಇನ್ನುಳಿದ 18 ಮಂದಿಯನ್ನು ರಕ್ಷಿಸಿಸಲಾಗಿದ್ದು, ಅವರನ್ನು ಹೊತ್ತ ಭಾರತೀಯ ನೌಕಾಪಡೆಯ ಐಎನ್‌ಎಸ್ ಸೂರತ್ ಹಡಗು ಸೋಮವಾರ ರಾತ್ರಿ 10:45 ಕ್ಕೆ ಪಣಂಬೂರಿನ ನವಮಂಗಳೂರು ಬಂದರು ಪ್ರಾಧಿಕಾರಕ್ಕೆ (ಎನ್‌ಎಂಪಿಎ) ಆಗಮಿಸಿದೆ. ಎಂ.ವಿ. ವಾನ್ ಹಾಯ್ 503 ಹಡಗು ಕೊಲೊಂಬೋದಿಂದ ಮುಂಬೈಯ ನ್ಹಾವಾ ಶೇವಾ ಕಂಟೈನರ್ ಟರ್ಮಿನಲ್‌ಗೆ ಪ್ರಯಾಣಿಸುತ್ತಿತ್ತು. ಆದರೆ ಜೂನ್ 9 ರಂದು ಕೇರಳದ ಬೇಪೂರ್ ಕರಾವಳಿಯಿಂದ…

Read More

ಸುಬ್ರಹ್ಮಣ್ಯದಲ್ಲಿ ಕೊಠಡಿ ವಿಚಾರಕ್ಕೆ ಯುವಕನಿಗೆ ಹಲ್ಲೆ

ಸುಬ್ರಹ್ಮಣ್ಯ: ಕೊಠಡಿ ಬಾಡಿಗೆಗೆ ಪಡೆಯುವ ವಿಚಾರಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ಆದಿ ಸುಬ್ರಹ್ಮಣ್ಯ ಪ್ರದೇಶದಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಲಾಗಿದ್ದು, ಕೃತ್ಯದ ವೀಡಿಯೋ ವೈರಲ್‌ ಆಗಿದೆ. ಯುವಕನೋರ್ವ ಕೊಠಡಿಯನ್ನು ವೀಕ್ಷಿಸಿದ ಬಳಿಕ ಅದನ್ನು ಪಡೆಯದೇ ತೆರಳಿದ ಕಾರಣಕ್ಕೆ ಕೊಠಡಿಯನ್ನು ನಿರ್ವಹಿಸುವ ತಂಡ ವಾಗ್ವಾದಕ್ಕಿಳಿಯಿತು. ಬಳಿಕ ಯುವಕನ ಮೇಲೆ ತಂಡದ ಓರ್ವ ಸದಸ್ಯ ಹಲ್ಲೆ ನಡೆಸಿದನು. ಸುಬ್ರಹ್ಮಣ್ಯದಲ್ಲಿ ಕೆಲವೆಡೆ ಹೊರಗಿನವರು ರೂಂಗಳನ್ನು ಲೀಸ್‌ಗೆ ಪಡೆದುಕೊಂಡು ಯಾತ್ರಿಕರಿಗೆ ಪೂರೈಸುವ ಕೆಲಸ ಮಾಡುತ್ತಿದ್ದು ಅವರು ಈ ಕೃತ್ಯ ಎಸಗಿರಬೇಕು ಎಂದು ಸ್ಥಳೀಯರು ಶಂಕಿಸಿದ್ದಾರೆ….

Read More

ದಕ್ಷಿಣ ಕನ್ನಡದಲ್ಲಿ ಅಣ್ಣನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಯತ್ನ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ತಮ್ಮನೇ ಅಣ್ಣನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಕೋಡಿಂಬಾಳದ ಕೋರಿಯಾರ್ ಸಮೀಪ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಗಾಯಾಳು ಹನುಮಪ್ಪ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಮೂಲದ ಅಣ್ಣ-ತಮ್ಮಂದಿರು ಪುತ್ತೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಭಾನುವಾರ ಮಧ್ಯಾಹ್ನ ಪ್ಯಾಸೆಂಜರ್ ರೈಲಿನಲ್ಲಿ ಆಗಮಿಸಿದ ಇವರು ಬಜಕರೆ ರೈಲು ನಿಲ್ದಾಣದಲ್ಲಿ ಇಳಿದಿದ್ದಾರೆ. ರೈಲು ಹೋದ ನಂತರ ಸುಮಾರು 500 ಮೀಟರ್ ದೂರದವರೆಗೂ ಅಣ್ಣನನ್ನು ಕರೆದುಕೊಂಡು ಹೋದ ತಮ್ಮ ನಿಂಗಪ್ಪ ಏಕಾಏಕಿ ಪೆಟ್ರೋಲ್…

Read More

ಮಂಗಳೂರು: ಯೆಯ್ಯಾಡಿಯಲ್ಲಿ  ಯುವಕನಿಗೆ ಚೂರಿ ಇರಿತ, ಸ್ಥಿತಿ ಚಿಂತಾಜನಕ

ಮಂಗಳೂರು: ನಗರದ ಯೆಯ್ಯಾಡಿಯಲ್ಲಿ ಶುಕ್ರವಾರ ಮದ್ಯಾಹ್ನದ ವೇಳೆಯಲ್ಲಿ ಯುವಕನಿಗೆ ಚೂರಿ ಇರಿದ ಪ್ರಕರಣ ನಡೆದಿದೆ. ಕೌಶಿಕ್ ಎಂಬಾತ ಚೂರಿ ಇರಿತಕ್ಕೆ ಒಳಗಾದವ ಎಂದು ಹೇಳಲಾಗಿದೆ. ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಬ್ರಿಜೇಶ್ ಶೆಟ್ಟಿ, ಗಣೇಶ್ ಬಿಜೈ ಚೂರಿ ಇರಿದ ಆರೋಪಿಗಳು ಎಂದು ತಿಳಿದು ಬಂದಿದೆ. ಒಂದು ತಿಂಗಳ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಇವರುಗಳ ಮಧ್ಯೆ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.ಬ್ರಿಜೇಶ್ ಶೆಟ್ಟಿ ಕೌಶಿಕ್ ಎಂಬಾತನಿಗೆ ಹೊಡೆದಿದ್ದ ಇದೇ ವೇಳೆ ಬ್ರಿಜೇಶ್ ಗೆ ಕೌಶಿಕ್ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಗಲಾಟೆಯ ದ್ವೇಷದ…

Read More

ಅರುಣ್ ಪುತ್ತಿಲ ಗಡಿಪಾರು ಪ್ರಕರಣ:ನೋಟಿಸ್ ವಿಚಾರಣೆಯಲ್ಲಿ ಪೊಲೀಸರಿಗೆ ಹಿನ್ನಡೆ

ಪುತ್ತೂರು : ಇತ್ತಿಚೆಗೆ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಬೆನ್ನಲ್ಲೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಡಿಪಾರಿಗೆ ಸಿದ್ದತೆ ಮಾಡಿಕೊಂಡಿದ್ದ ಪೊಲೀಸರಿಗೆ ಹಿನ್ನಡೆಯಾಗಿದೆ. ಗಡೀಪಾರು ನೋಟಿಸ್ ನೀಡಿ ಜೂನ್ 6ರಂದು ಪುತ್ತೂರು ಉಪ ವಿಭಾಗಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಇದರಂತೆ, ಅರುಣ್ ಪುತ್ತಿಲ ಪರವಾಗಿ ವಕೀಲ ನರಸಿಂಹ ಪ್ರಸಾದ್ ಹಾಜರಾಗಿದ್ದು, ಪುತ್ತಿಲ ಪರವಾಗಿ ವಾದ ಮಂಡಿಸಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರನ್ನು ಕಲಬುರ್ಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ನೋಟಿಸ್‌ ನೀಡಿ…

Read More

ಹಿಂದೂ ಸಂಘಟನೆಗಳು ಟಾರ್ಗೆಟ್? ದ.ಕ. ಎಸ್‌ಪಿಗೆ ಸ್ಪಷ್ಟನೆ ಕೇಳಿದ ಪೊಲೀಸ್ ಪ್ರಾಧಿಕಾರ

ಮಂಗಳೂರು ಜೂನ್ 06: ಇತ್ತೀಚೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಬಳಿಕ ಕಾನೂನು ಸುವವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಮುಖಂಡರ ಲೊಕೇಶನ್ ಮತ್ತು ಮಾಹಿತಿ ಸಂಗ್ರಹದಂತಹ ಕ್ರಮ ಕೈಗೊಂಡಿದ್ದ ದಕ್ಷಿಣಕನ್ನಡ ಪೊಲೀಸ್ ಇಲಾಖೆಗೆ ಇದೀಗ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ದಕ್ಷಿಣಕನ್ನಡ ಜಿಲ್ಲೆಗೆ ನೂತನ ಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪೊಲೀಸರು ಹಿಂದೂ ಸಂಘಟನೆಗಳ ಮುಖಂಡರ ಮನೆಗೆ ಮಧ್ಯರಾತ್ರಿ ಆಗಮಿಸಿ ಅವರ…

Read More

ಬೆಳ್ತಂಗಡಿಯ ಬೊಳಿಯಾರುವಿನಲ್ಲಿ ಕಾಡಾನೆ ದಾಳಿಗೆ ಆಟೋ ರಿಕ್ಷಾ ನಜ್ಜುಗುಜ್ಜು

ಬೆಳ್ತಂಗಡಿ : ಕಾಡಾನೆ ದಾಳಿಗೆ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾದ ಘಟನೆ ಧರ್ಮಸ್ಥಳದ ಬೊಳಿಯಾರು ಎಂಬಲ್ಲಿ ನಡೆದಿದೆ. ಬೊಳಿಯಾರು ನಿವಾಸಿ ದಿನೇಶ್ ಎಂಬವರು ತಮ್ಮ ಆಟೋರಿಕ್ಷಾದಲ್ಲಿ ಮುಂಜಾನೆ ತನ್ನ ಮನೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ವೇಳೆ ಮನೆಯ ಸಮೀಪವೇ ಕಾಡಾನೆಯೊಂದು ರಸ್ತೆ ಮಧ್ಯೆ ಎದುರಾಗಿದೆ. ಇದನ್ನು ಗಮನಿಸಿ ಆತಂಕಗೊಂಡ ದಿನೇಶ್, ರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಕಾಡಾನೆಯೊಂದು ರಿಕ್ಷಾದ ಮೇಲೆ ಎರಗಿ ರಿಕ್ಷಾವನ್ನು ನಜ್ಜುಗುಜ್ಜುಗೊಳಿಸಿ ಸಮೀಪದ ಚರಂಡಿಗೆ ತಳ್ಳಿ ಹಾಕಿದೆ. ಸ್ಥಳೀಯರು ಸ್ಥಳಕ್ಕೆ…

Read More

ಕುಡುಪು ಗುಂಪು ಹತ್ಯೆ ಪ್ರಕರಣ: 3 ಆರೋಪಿಗಳಿಗೆ ಮಂಗಳೂರು ನ್ಯಾಯಾಲಯದಿಂದ ಜಾಮೀನು

ಮಂಗಳೂರು:ನಗರದ ಹೊರವಲಯದ ಕುಡುಪುವಿನಲ್ಲಿ 2025ರ ಎ.27ರಂದು ನಡೆದ ಅಶ್ರಫ್ ಗುಂಪು ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳಿಗೆ ಗುರುವಾರ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಗುಂಪು ಹತ್ಯೆ ಪ್ರಕರಣದ 14ನೇ ಆರೋಪಿ ಸಂದೀಪ್, 15ನೇ ಆರೋಪಿ ದೀಕ್ಷಿತ್, 19ನೇ ಆರೋಪಿ ಸಚಿನ್ ಗೆ ಜಾಮೀನು ನ್ಯಾಯಾಲಯವು ಜಾಮೀನು ನೀಡಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ರಾಹುಲ್ ಮತ್ತು ಕೆ. ಸುಶಾಂತ್ ಗೆ ದಕ್ಷಿಣ ಕನ್ನಡ ಜಿಲ್ಲಾ ಎರಡನೇ ಹೆಚ್ಚುವರಿ ಜಿಲ್ಲಾ…

Read More

ಜೋಲಿ ತೊಟ್ಟಿಲಿನಲ್ಲಿ ಸೀರೆ ಸಿಕ್ಕಿ ಹಾಕಿಕೊಂಡು ಮಗು ಸಾವು

ಉಡುಪಿ: ತೊಟ್ಟಿಲಿನ ಸೀರೆಯಲ್ಲಿ ಸಿಕ್ಕಿಹಾಕಿಕೊಂಡು ಒಂದು ವರ್ಷದ ಮಗು ಸಾವನ್ನಪ್ಪಿದ ಘಟನೆ ಉಡುಪಿಯ ನಿಟ್ಟೂರಿನಲ್ಲಿ ಜೂನ್ 4ರಂದು ನಡೆದಿದೆ. ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಅಯ್ಯಪ್ಪ (27) ಎಂಬುವರು ಕಳೆದ ಮೂರು ವರ್ಷಗಳಿಂದ ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದು, ನಿಟ್ಟೂರಿನಲ್ಲಿ ಗಂಗಾಧರ್ ಒಡೆತನದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಜೂನ್ 4 ರಂದು ಬೆಳಿಗ್ಗೆ 9.30 ರ ಸುಮಾರಿಗೆ, ಅಯ್ಯಪ್ಪ ತನ್ನ ಪತ್ನಿ ಮತ್ತು ಒಂದು ವರ್ಷದ ಮಗಳು ಕಾಳಮ್ಮ ಅವರನ್ನು ಬಟ್ಟೆಯ ತೊಟ್ಟಿಲಿನಲ್ಲಿ (ಜೋಲಿ) ಮಲಗಿಸಿ ಕೆಲಸಕ್ಕೆ ಹೋಗಿದ್ದರು.ಅವರು ಬೆಳಿಗ್ಗೆ…

Read More

ಹಿಂದೂ ಮುಖಂಡ ಭರತ್ ಕುಮ್ಡೇಲು ಮನೆಗೆ ಪೊಲೀಸರ ದಾಳಿ

ಬಂಟ್ವಾಳ : ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ಮನೆಗೆ ಪೊಲೀಸರು ನ್ಯಾಯಾಲಯದ ಆದೇಶದ ಜೊತೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಜಿಲ್ಲೆಯಿಂದ ಗಡಿಪಾರಿನ ಭೀತಿಯಲ್ಲಿರುವ ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ಅವರ ಮನೆಗೆ ಪೊಲೀಸರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಪರಿಶೀಲನೆ ಮಾಡಿದ್ದಾರೆ. ತನಿಖಾ ತಂಡವು ದಿನಾಂಕ : 04.06.2025 ರಂದು ಮಾನ್ಯ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಬಂಟ್ವಾಳ ಪುದು ಗ್ರಾಮದ ನಿವಾಸಿ ಭರತ್…

Read More